

ಮೇಷ: ದುಷ್ಟ ಜನರಿಂದ ದೂರವಿರಿ. ಆಸ್ತಿ ವಿಚಾರದ ಕಾರ್ಯಗಳಲ್ಲಿ ಜಯ. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಧನಾಗಮನ. ಶುಭಸಂಖ್ಯೆ:5
ವೃಷಭ: ಬಂಧು ಮಿತ್ರರಲ್ಲಿ ದ್ವೇಷ. ಸಿದ್ದ ಉಡುಪಗಳ ವ್ಯಾಪಾರದಲ್ಲಿ ಲಾಭವಾಗುವುದು. ಕೋರ್ಟ್ ಕೆಲಸದಲ್ಲಿ ವಿಘ್ನಗಳು ಎದುರಾಗುತ್ತವೆ. ಶುಭಸಂಖ್ಯೆ: 9
ಮಿಥುನ: ಬದುಕಿನಲ್ಲಿ ಅನಿರೀಕ್ಷಿತ ತಿರುವು. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿ. ಗೃಹೋಪಯೋಗಿ ಸಾಮಗ್ರಿ ಖರೀದಿಗೆ ಅಧಿಕ ಖರ್ಚು. ಶುಭಸಂಖ್ಯೆ:2
ಕಟಕ: ತಾಯಿಯಿಂದ ಧನ ಸಹಾಯ ಬರಲಿದೆ. ವಾದ-ವಿವಾದಗಳಲ್ಲಿ ಸೋಲು ಉಂಟಾದೀತು. ಕಚೇರಿಯ ಸ್ಥಳ ಬದಲಾವಣೆ. ಶುಭಸಂಖ್ಯೆ:1
ಸಿಂಹ: ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ರೇಷ್ಮೆ ಕೃಷಿಕರಿಗೆ ದ್ರವ್ಯ ನಷ್ಟ ಸಾಧ್ಯತೆ. ವಿವಾಹದ ಪ್ರಯತ್ನದಲ್ಲಿ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 9
ಕನ್ಯಾ: ದಾನ ಧರ್ಮದಲ್ಲಿ ಮನಶ್ಶಾಂತಿ ಲಭಿಸಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವುದು. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಶುಭಸಂಖ್ಯೆ: 6
ತುಲಾ: ಆಸ್ತಿ ವಿಷಯಕ್ಕೆ ಸಂಬಂಧಿಸಿ ಸಹೋದರರೊಂದಿಗೆ ವೈಮನಸ್ಸು. ಸಹೋದ್ಯೋಗಿಗಳಿಂದ ಸಹಕಾರ. ದೂರ ಪ್ರಯಾಣ. ಶುಭಸಂಖ್ಯೆ: 6
ವೃಶ್ಚಿಕ: ಮಹಿಳಾ ಅಧಿಕಾರಿಗಳಿಗೆ ಮಾನಸಿಕ ಒತ್ತಡ. ಆತ್ಮೀಯರಲ್ಲಿ ವಿಶ್ವಾಸದಿಂದ ವರ್ತಿಸಿ. ಉತ್ತಮ ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ. ಶುಭಸಂಖ್ಯೆ:8
ಧನಸ್ಸು: ಮಹಿಳೆಯರಿಗೆ ಆಭರಣದಿಂದ ಲಾಭವಿದೆ. ಉದ್ಯೋಗದಲ್ಲಿ ಬದಲಾವಣೆ ಉಂಟಾಗಲಿದೆ. ಇಷ್ಟ ವಸ್ತುಗಳ ಖರೀದಿ. ಶುಭಸಂಖ್ಯೆ:3
ಮಕರ: ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಸಾಧಾರಣ ಲಾಭ. ರಾಜಕಾರಣಿಗಳಿಗೆ ವಿರೋಧಿಗಳಿಂದ ತೊಂದರೆ. ವ್ಯರ್ಥ ಧನಹಾನಿ. ಶುಭಸಂಖ್ಯೆ: 2
ಕುಂಭ: ಹಿಡಿದ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡುವಿರಿ. ತಿರುಗಾಟ ಮಾಡಬೇಕಾದೀತು. ದೈನಂದಿನ ಕೆಲಸದಲ್ಲಿ ಬದಲಾವಣೆ. ಶುಭಸಂಖ್ಯೆ:6
ಮೀನ: ನಿಮ್ಮ ಪ್ರತಿಭೆಗೆ ಸಾರ್ವಜನಿಕ ಗೌರವ, ಪ್ರಶಂಸೆ ಸಿಗಲಿದೆ. ಷೇರು ವ್ಯವಹಾರಗಳಲ್ಲಿ ನಷ್ಟವಾಗಬಹುದು. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 9