

ಮೇಷ: ಗುರು ದರ್ಶನದಿಂದ ಮಾನಸಿಕ ಸಮಾಧಾನ. ಮಗನ ಮದುವೆಯ ಚಿಂತೆ. ಕೆಲಸ ಕಾರ್ಯಗಳಿಗೆ ತೊಂದರೆಯಾದೀತು. ಶುಭಸಂಖ್ಯೆ: 9
ವೃಷಭ: ಸ್ವಯಂ ತಪ್ಪಿನಿಂದ ತೊಂದರೆ. ಗೃಹ ಮತ್ತು ಉದ್ಯೋಗ ಬದಲಾವಣೆ ಸಾಧ್ಯತೆ. ಹತ್ತಿರದ ಪ್ರಯಾಣದಿಂದ ಸಂತೋಷ. ಶುಭಸಂಖ್ಯೆ: 3
ಮಿಥುನ: ಆರೋಗ್ಯದಲ್ಲಿ ಸುಧಾರಣೆ. ಹಣ ಹೂಡಿಕೆಗೆ ಸಹಾಯ ಓದಗಿಬರಲಿದೆ. ಮಾತಿನಿಂದ ಶತ್ರುಗಳು ಸೃಷ್ಟಿಯಾಗುವರು, ಎಚ್ಚರವಿರಲಿ. ಶುಭಸಂಖ್ಯೆ: 8
ಕಟಕ: ವ್ಯಾಪಾರದಲ್ಲಿ ಏರುಪೇರು ಉಂಟಾಗುವುದು. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಪ್ರೀತಿ ಪ್ರೇಮದ ವಿಚಾರದಿಂದ ತೊಂದರೆ. ಶುಭಸಂಖ್ಯೆ: 5
ಸಿಂಹ: ಔಷಧಿ ವ್ಯಾಪಾರಿಗಳಿಗೆ ಉತ್ತಮ ದಿನ. ಸಾಲ ಮಾಡುವ ಸಂಭವ. ಜಿಪುಣತನ ಪ್ರದರ್ಶಿಸುವಿರಿ. ಮನೆಯ ವಾತಾವರಣ ಕಲುಷಿತ. ಶುಭಸಂಖ್ಯೆ: 1
ಕನ್ಯಾ: ಸಹೋದರಿಯರಿಂದ ಸಹಕಾರ ಸಿಗಲಿದೆ. ಸಾಲದ ಬಗ್ಗೆ ಎಚ್ಚರಿಕೆ ಇರಲಿ.ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಯ ಭೀತಿಯಿದೆ. ಶುಭಸಂಖ್ಯೆ: 7
ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ. ಆಸ್ತಿ ವಿಚಾರದಲ್ಲಿ ಗೊಂದಲವಾಗುವುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ವೀಸಾ ಸಮಸ್ಯೆ. ಶುಭಸಂಖ್ಯೆ: 7
ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗೆ ಇಲ್ಲ. ಮಕ್ಕಳಿಂದ ಹಿಂಸೆ. ಆಸ್ತಿ ವಹಿವಾಟಿನಿಂದ ನಷ್ಟ, ಕೂಡಿಟ್ಟ ಹಣದ ಅಪವ್ಯಯವಾದೀತು. ಶುಭಸಂಖ್ಯೆ: 8
ಧನಸ್ಸು: ಪಾಲುದಾರಿಕೆಯಲ್ಲಿ ನಷ್ಟ. ಕೊಟ್ಟ ಸಾಲ ವಾಪಸ್ ಬರುವುದಿಲ್ಲ. ಆತ್ಮೀಯರು ದೂರವಾಗುವರು. ನಂಬಿಕಸ್ತರಿಂದಲೇ ವಂಚನೆ. ಶುಭಸಂಖ್ಯೆ:2
ಮಕರ: ಮಕ್ಕಳಿಂದ ಅನುಕೂಲವಿದೆ. ಮುಖ್ಯ ತೀರ್ವನಗಳಲ್ಲಿ ಗೊಂದಲವಾಗಿ ಸಮಸ್ಯೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಶುಭಸಂಖ್ಯೆ: 4
ಕುಂಭ: ಟೇಲರ್, ಬಟ್ಟೆ ವಿನ್ಯಾಸಕಾರರಿಗೆ ಲಾಭ. ಉದ್ಯೋಗ ಕಳೆದುಕೊಳ್ಳುವ ಆತಂಕ. ನಿರಾಸೆ, ಆಲಸ್ಯ ಕಾಡುವುದು. ಆತುರದ ಸ್ವಭಾವ. ಶುಭಸಂಖ್ಯೆ: 6
ಮೀನ: ಕಾರ್ಯದಲ್ಲಿ ನೆಮ್ಮದಿ. ಪುತ್ರಿಯ ಮದುವೆ ನಿಗದಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ನ್ಯಾಯಾಲಯದ ಕಾರ್ಯ ದಲ್ಲಿ ವಿಳಂಬ. ಶುಭಸಂಖ್ಯೆ: 9