ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ವಿಶೇಷ ಪ್ರಯತ್ನದಿಂದ ಲಾಭ

Nitya Bhavisya Vijayavani
Published on

ಮೇಷ: ಸಿಹಿ ತಿಂಡಿಗಳ ಮಾರಾಟಗಾರರಿಗೆ ಲಾಭ. ವಕೀಲರಿಗೆ ಸ್ನೇಹಿತರೊಂದಿಗೆ ಕಲಹ, ಗಾರ್ಮೆಂಟ್ಸ್​ ಕಾರ್ವಿುಕರಿಗೆ ಹೆಚ್ಚಿನ ಹಣ ಸಿಗಲಿದೆ. ಶುಭಸಂಖ್ಯೆ: 5

ವೃಷಭ: ಭೂ ವ್ಯವಹಾರದಲ್ಲಿ ವಿಶೇಷ ಪ್ರಯತ್ನದಿಂದ ಲಾಭ. ಹಾಲಿನ ಉತ್ಪಾದಕರಿಗೆ ಶುಭ. ನ್ಯಾಯಾಲಯದ ಕೆಲಸಗಳಲ್ಲಿ ಆತುರ ಬೇಡ. ಶುಭಸಂಖ್ಯೆ: 3

ಮಿಥುನ: ವಿದ್ಯಾರ್ಥಿಗಳಿಗೆ ಮಂದಗತಿಯ ಯಶ ಸಿಗಲಿದೆ. ಸಂತಾನದ ವಿಷಯದಲ್ಲಿ ನೋವು. ಸರ್ಕಾರಿ ಅಧಿಕಾರಿಗಳಿಗೆ ಕೀರ್ತಿ ಹೆಚ್ಚುತ್ತದೆ. ಶುಭಸಂಖ್ಯೆ:9

ಕಟಕ: ಶತ್ರುಗಳೊಂದಿಗೆ ವ್ಯಾಜ್ಯದಲ್ಲಿ ಸೋಲು. ಮಹಿಳೆಯರಿಗೆ ಸಹೋದ್ಯೋಗಿಗಳಿಂದ ಅಸಮಾಧಾನ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6

ಸಿಂಹ: ಸ್ವಂತ ಕೆಲಸಗಳಿಗೆ ಆದ್ಯತೆ ನೀಡಿ. ಮಾತಿನಿಂದ ಕುಟುಂಬದಲ್ಲಿ ವೈರತ್ವ. ಹಿರಿಯ ಅಧಿಕಾರಿಗಳೊಂದಿಗೆ ಪ್ರವಾಸ ಮಾಡುವಿರಿ. ಶುಭಸಂಖ್ಯೆ:2

ಕನ್ಯಾ: ಪರರ ತಪ್ಪಿಗೆ ನೀವು ದಂಡ ತೆರಬೇಕಾದೀತು. ಕುಟುಂಬದಲ್ಲಿ ಶಾಂತಿ ಇರಲಿದೆ. ಆದಾಯವಿದ್ದಷ್ಟೇ ಖರ್ಚು ಕೂಡ ಇರುತ್ತದೆ. ಶುಭಸಂಖ್ಯೆ:2

ತುಲಾ: ನೀರು ಸರಬರಾಜು ವ್ಯಾಪಾರದಲ್ಲಿ ನಷ್ಟ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 4

ವೃಶ್ಚಿಕ: ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ. ಐಟಿ ಉದ್ಯೋಗಿಗಳಿಗೆ ಶುಭ. ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳುವಿರಿ. ಶುಭಸಂಖ್ಯೆ:6

ಧನಸ್ಸು: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಹಿನ್ನಡೆ. ಕೃಷಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭವಾಗುವುದು. ಹೆಂಡತಿಯೊಂದಿಗೆ ಕಲಹ. ಶುಭಸಂಖ್ಯೆ:1

ಮಕರ: ಸೌಂದರ್ಯ ವರ್ಧಕ ಖರೀದಿಯಲ್ಲಿ ನಷ್ಟ. ವಾಮಾಚಾರದ ಭೀತಿ. ಪ್ರಯಾಣ ಮುಂದೂಡುವುದು ಕ್ಷೇಮ. ಮಾತಿನಿಂದ ಬೇಸರ. ಶುಭಸಂಖ್ಯೆ:5

ಕುಂಭ: ಬ್ಯಾಂಕ್ ಸೇವಾ ನಿರತರಿಗೆ ಬಡ್ತಿ. ಆಹಾರದ ವ್ಯತ್ಯಾಸದಿಂದ ತೊಂದರೆ. ಮಧುಮೇಹಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಶುಭಸಂಖ್ಯೆ:8

ಮೀನ: ವೈದ್ಯರಿಗೆ ಅವಕಾಶದ ಜೊತೆಗೆ ಆದಾಯ. ಲೇಖಕರಿಗೆ ಶುಭದಾಯಕ ದಿನ. ಧೈರ್ಯ ಮತ್ತು ಹಠದಿಂದ ಕೆಲಸಗಳಲ್ಲಿ ಜಯ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net