ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಬಹುಕಾಲದ ನಂತರ ವಿವಾಹ

Nitya Bhavisya Vijayavani
Published on

ಮೇಷ: ಮಾಧ್ಯಮದ ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗಲಿದೆ. ಕೃಷಿಯತ್ತ ಒಲವು. ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ: 9

ವೃಷಭ: ಸಾಲ ಮರುಪಾವತಿಗೆ ದಾರಿ ಸಿಗಲಿದೆ. ಕ್ರೀಡಾಪಟುಗಳಿಗೆ ಗುರಿ ಸಾಧನೆ ಆಗಲಿದೆ. ಹಣ ಹೂಡಿಕೆಯಲ್ಲಿ ನಿಗಾ ವಹಿಸಿ. ಶುಭಸಂಖ್ಯೆ:1

ಮಿಥುನ: ನೀರಿನಿಂದ ಅಪಾಯವಿದೆ, ಎಚ್ಚರಿಕೆಯಿಂದ ಇರಿ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ನಷ್ಟ. ಗೃಹ ನಿರ್ಮಾಣಕ್ಕೆ ಅಡೆತಡೆ. ಶುಭಸಂಖ್ಯೆ:5

ಕಟಕ: ವಿದ್ಯಾರ್ಥಿಗಳ ಆಸೆ ಈಡೇರಲಿದೆ. ಪ್ರೇಮದ ವ್ಯವಹಾರದಲ್ಲಿ ಸಂಯಮದಿಂದಿರುವುದು ಆಗತ್ಯ. ವಿಚ್ಛೇದಿತರಿಗೆ ವಿವಾಹ ಯೋಗ. ಶುಭಸಂಖ್ಯೆ:7

ಸಿಂಹ: ಕಿರುಚಿತ್ರನಟರಿಗೆ ವಿಶೇಷ ಸನ್ಮಾನ. ಕಚೇರಿಯಲ್ಲಿ ಆಂತರಿಕ ಕಲಹ ಉಂಟಾಗಬಹುದು. ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 1

ಕನ್ಯಾ: ರಾಸಾಯನಿಕ ಕಾರ್ಖಾನೆಯ ಮಾಲೀಕರಿಗೆ ಧನಲಾಭ. ಪ್ರಿಯರ ವಿಯೋಗ. ಹೋಟೆಲ್ ವ್ಯವಹಾರ ಪ್ರಾರಂಭಕ್ಕೆ ಯೋಜನೆ.ಶುಭಸಂಖ್ಯೆ:9

ತುಲಾ: ನಿಮ್ಮ ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ಅಪರಿಚಿತರಿಂದ ಮೋಸವಾಗುವ ಸಾಧ್ಯತೆ ಇದೆ, ಎಚ್ಚರ. ಆರಕ್ಷಕ ವೃತ್ತಿಗೆ ಸೇರ್ಪಡೆ. ಶುಭಸಂಖ್ಯೆ:7

ವೃಶ್ಚಿಕ: ಹೊಸ ವಾಹನ ಖರೀದಿ ನಿರ್ಧಾರ. ಕೃಷಿ ಭೂಮಿ ಖರೀದಿಯಲ್ಲಿ ಗೊಂದಲ. ಬಂಧುಗಳ ಭೇಟಿ. ದಿನಾಂತ್ಯದಲ್ಲಿ ದೂರ ಪ್ರಯಾಣ. ಶುಭಸಂಖ್ಯೆ:3

ಧನಸ್ಸು: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಪ್ರಭಾವಿಗಳ ಸಂಪರ್ಕ. ಸಹಕಾರಿ ಬ್ಯಾಂಕ್ ಉದ್ಯೋಗಿಗಳಿಗೆ ಉದ್ಯೋಗ ನಷ್ಟ. ಶುಭಸಂಖ್ಯೆ:2

ಮಕರ: ಅವಿವಾಹಿತರಿಗೆ ಬಹುಕಾಲದ ನಂತರ ವಿವಾಹ . ಐಷಾರಾಮಿ ಜೀವನಶೈಲಿಯಿಂದ ನಷ್ಟ. ನೇತ್ರ ಸಂಬಂಧಿ ನೋವು ಕಜ್ಞಡೀತು. ಶುಭಸಂಖ್ಯೆ:9

ಕುಂಭ: ಶಸ್ತ್ರ ಚಿಕಿತ್ಸೆ ತಜ್ಞರಿಗೆ ಬೇಡಿಕೆ ಹೆಚ್ಚಾಗಲಿದೆ. ರಾಜಕೀಯವಾಗಿ ಪ್ರಗತಿ ಕುಂಠಿತ. ವಿದೇಶದಲ್ಲಿರುವ ಮಕ್ಕಳಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 6

ಮೀನ: ಔಷಧ ಅಂಗಡಿ ಮಾಲೀಕರಿಗೆ ಕೆಲಸಗಾರರಿಂದ ಸಮಸ್ಯೆ. ಹರಾಜಿನಲ್ಲಿ ವಿಶೇಷ ಅವಕಾಶ ಸಿಗುತ್ತದೆ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net