ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಸ್ತಿ ಖರೀದಿಯಲ್ಲಿ ಇದ್ದ ವಿಘ್ನ ಪರಿಹಾರ

Nitya Bhavisya Vijayavani
Published on

ಮೇಷ: ವ್ಯರ್ಥ ಧನಹಾನಿಯಾಗಿ ಬೇಸರ. ಬಂಧುಗಳೊಂದಿಗೆ ದ್ವೇಷ ಸಾಧಿಸುವುದು ಉಚಿತವಲ್ಲ. ಆಸ್ತಿ ನೋಂದಣಿಗೆ ಇದು ಸುಸಮಯ. ಶುಭಸಂಖ್ಯೆ: 9

ವೃಷಭ: ಅತಿಆತ್ಮವಿಶ್ವಾಸ ಒಳ್ಳೆಯದಲ್ಲ. ವೈರಿಗಳಿಂದ ಆದಷ್ಟು ದೂರವಿರಿ. ಸಹೋದ್ಯೋಗಿಗಳ ಸಹಾಯದಿಂದ ಪ್ರಗತಿ ಸಾಧಿಸುವಿರಿ. ಶುಭಸಂಖ್ಯೆ: 5

ಮಿಥುನ: ಶತ್ರುಗಳಿಂದ ಅಂತರವಿರಲಿ. ಪತ್ರಕರ್ತರಿಗೆ ಪರಿಶ್ರಮಕ್ಕೆ ತಕ್ಕ ವರಮಾನ. ತಂಪು ಪಾನೀಯಗಳಿಂದ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ:2

ಕಟಕ: ಪುಣ್ಯಕ್ಷೇತ್ರ ಪ್ರಯಾಣಕ್ಕೆ ಅವಕಾಶ. ಬಹಳ ವರ್ಷಗಳ ನಂತರ ವಿವಾಹ ಯೋಗ. ನಿಷ್ಠ್ಠುರ ವರ್ತನೆಯಿಂದ ಕುಟುಂಬದಲ್ಲಿ ಕಲಹ. ಶುಭಸಂಖ್ಯೆ:8

ಸಿಂಹ: ತಂದೆಗೆ ಅಪಘಾತವಾದೀತು, ಕಾಳಜಿಯಿರಲಿ . ಜಿಮ್ ತರಬೇತುದಾರರಿಗೆ ದೈಹಿಕ ತೊಂದರೆ. ಸ್ನೇಹಿತರೊಂದಿಗೆ ಶತ್ರುತ್ವ. ಶುಭಸಂಖ್ಯೆ:8

ಕನ್ಯಾ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ. ಅಡಿಕೆ ವ್ಯಾಪಾರಿಗಳಿಗೆ ಉತ್ತಮ ಲಾಭ. ಆಸ್ತಿ ಖರೀದಿಯಲ್ಲಿ ಇದ್ದ ವಿಘ್ನ ಪರಿಹಾರವಾಗುವುದು.ಶುಭಸಂಖ್ಯೆ: 3

ತುಲಾ: ಔಷಧ ವ್ಯಾಪಾರದಲ್ಲಿ ನಷ್ಟವಾಗುವುದು. ವಿದ್ಯಾಭ್ಯಾಸ ದಲ್ಲಿ ಅನಾಸಕ್ತಿ. ಹಿತಶತ್ರುಗಳಿಂದ ತೊಂದರೆ. ಸಾರ್ವಜನಿಕವಾಗಿ ಮನ್ನಣೆ. ಶುಭಸಂಖ್ಯೆ: 2

ವೃಶ್ಚಿಕ: ಬಂಧುಗಳ ಭೇಟಿಯಿಂದ ಸಂತಸ. ಆರೋಗ್ಯದ ಕಡೆ ಗಮನಹರಿಸಿ. ಅನಿರೀಕ್ಷಿತವಾಗಿ ಕೀರ್ತಿ ಪ್ರಾಪ್ತಿಯಾಗಿ ಗೌರವ ಸನ್ಮಾನ. ಶುಭಸಂಖ್ಯೆ:8

ಧನಸ್ಸು: ಆದಾಯದ ಮೂಲ ದ್ವಿಗುಣವಾಗಲಿದೆ. ನಿಂತ ಕಾರ್ಯಗಳು ಮತ್ತೆ ಪ್ರಾರಂಭವಾಗುವವು. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:9

ಮಕರ: ಸಂದರ್ಶನಗಳಲ್ಲಿ ಯಶಸ್ಸು ಸಾಧಿಸುವಿರಿ. ಹಿರಿಯರಿಂದ ಪ್ರಮುಖ ನಿರ್ಧಾರದಲ್ಲಿ ಮಾರ್ಗ ದರ್ಶನ. ಪತ್ನಿಯೊಂದಿಗೆ ಕಲಹ. ಶುಭಸಂಖ್ಯೆ: 6

ಕುಂಭ: ಸ್ನೇಹಿತರ ನಡುವೆ ಸಾಮರಸ್ಯ ಇರಲಿದೆ. ಪ್ರತಿಷ್ಠಿತ ಕೆಲಸದಿಂದ ಗೌರವ ದೊರೆಯಲಿದೆ. ಸ್ನೇಹಿತರೊಂದಿಗೆ ಅನವಶ್ಯಕ ವಾಗ್ವಾದ. ಶುಭಸಂಖ್ಯೆ: 9

ಮೀನ: ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ ಯೋಗ. ಮಹಿಳಾ ಚಾಲಕರಿಗೆ ಅಪಘಾತವಾದೀತು. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net