

ಮೇಷ: ಕಿರುಚಿತ್ರ ನಟರಿಗೆ ವಿಶೇಷ ಸನ್ಮಾನ. ಆರ್ಥಿಕ ಸಮಸ್ಯೆಯಿಂದ ಖಿನ್ನತೆಗೆ ಜಾರುವ ಸಾಧ್ಯತೆ. ವೀಸಾ ಸಮಸ್ಯೆ ಬಗೆಹರಿಯಲಿದೆ. ಶುಭಸಂಖ್ಯೆ: 9
ವೃಷಭ: ಹಳೆಯ ಸ್ನೇಹಿತೆಯ ಭೇಟಿ. ಗುರು ಹಿರಿಯರ ಮಾರ್ಗದರ್ಶನ. ಕುಟುಂಬ ಸಮೇತ ವಿಹಾರ. ದಿನದ ಅಂತ್ಯದಲ್ಲಿ ಕೆಟ್ಟ ಸುದ್ದಿ. ಶುಭಸಂಖ್ಯೆ: 9
ಮಿಥುನ: ಆತ್ಮೀಯರಿಗೆ ಹೃದಯಾಘಾತದ ಆಘಾತ. ಹೊಸ ಯೋಜನೆ ಕಾರ್ಯಗತಗೊಳ್ಳಲಿದೆ. ಪಿತ್ರಾರ್ಜಿತ ಆಸ್ತಿಯ ಸಂಕಟ ಕಾಡೀತು. ಶುಭಸಂಖ್ಯೆ: 3
ಕಟಕ: ಪ್ರಯಾಣ, ಅನವಶ್ಯಕ ಅಲೆದಾಟದಿಂದ ಅನಾರೋಗ್ಯ. ಆತ್ಮೀಯರು ದೂರವಾದಾರು. ಸ್ವಗ್ರಾಮಕ್ಕೆ ಹಿಂದಿರುಗುವ ಯೋಜನೆ. ಶುಭಸಂಖ್ಯೆ: 6
ಸಿಂಹ: ಗೃಹ ನಿರ್ಮಾಣದಲ್ಲಿ ಅಡೆತಡೆ. ಅನಾರೋಗ್ಯಕ್ಕೆ ಆಯುರ್ವೆದದ ಮೊರೆ ಹೋಗುವಿರಿ. ನವದಂಪತಿಗಳು ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 4
ಕನ್ಯಾ: ಪತ್ನಿಗೆ ಅನಾರೋಗ್ಯ. ಆಸ್ಪತ್ರೆಗೆ ದಾಖಲು. ಮಾತೃಮೂಲವಾದ ಆಸ್ತಿ ವಿವಾದಕ್ಕೆ ಮುಕ್ತಿ. ಕಚೇರಿ ಸ್ಥಳ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 6
ತುಲಾ: ನವದಂಪತಿಗಳಿಗೆ ಶುಭ ಸುದ್ದಿ. ಆಹಾರದ ವ್ಯತ್ಯಾಸದಿಂದ ಅನಾರೋಗ್ಯ. ವಿದ್ಯುತ್ ಅನಾಹುತ ಸಾಧ್ಯತೆ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 1
ವೃಶ್ಚಿಕ: ಹಳೆಯ ಸ್ನೇಹಿತರೊಂದಿಗೆ ಔತಣ ಕೂಟ. ಮಗಳ ವಿವಾಹ ಕಾರ್ಯಗಳಿಗೆ ಚಾಲನೆ. ಆಧ್ಯಾತ್ಮಿಕ ಚಿಂತಕರ ಭೇಟಿಯಾಗಲಿದೆ. ಶುಭಸಂಖ್ಯೆ: 9
ಧನಸ್ಸು: ಬ್ಯಾಂಕ್ ಉದ್ಯೋಗಿಗಳಿಗೆ ಗ್ರಾಹಕರಿಂದ ಮೋಸ . ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ಉದ್ಯೋಗ ನಷ್ಟ. ರಾಜಕೀಯವಾಗಿ ಪ್ರಗತಿ. ಶುಭಸಂಖ್ಯೆ: 5
ಮಕರ: ಅಡಕೆ ಮಂಡಿ ಮಾಲೀಕರಿಗೆ ಭಾರಿ ನಷ್ಟ. ಜೇನು ಮತ್ತು ರೇಷ್ಮೆ ಕೃಷಿಕರಿಗೆ ಅಧಿಕ ಆದಾಯ. ಕೂಡಿಕೆ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 7
ಕುಂಭ: ಸಾಲಗಾರರಿಂದ ಕಿರಿಕಿರಿ. ನಿರೀಕ್ಷಿತ ಕಾರ್ಯಕ್ಕೆ ಅಡ್ಡಿ. ವಾಹನ ಬಿಡಿ ಭಾಗದ ಮಾರಾಟಗಾರರಿಗೆ ಲಾಭ. ಭೂಮಿ ಖರೀದಿ ಸಾಧ್ಯತೆ. ಶುಭಸಂಖ್ಯೆ: 6
ಮೀನ: ಹೃದಯದ ಸಮಸ್ಯೆ. ಸಾಲದ ವ್ಯವಹಾರದಲ್ಲಿ ಪ್ರಗತಿ. ಆಸ್ತಿ ನೋಂದಣಿ ವಿಳಂಬ. ವಿವಾದಾಸ್ಪದ ಹೇಳಿಕೆಯಿಂದ ತೊಂದರೆ. ಶುಭಸಂಖ್ಯೆ: 4