ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೈತುಂಬ ವರಮಾನ

Nitya Bhavisya Vijayavani
Published on

ಮೇಷ: ಅಧ್ಯಯನಶೀಲರಿಗೆ ಫಲದಾಯಕ ದಿವಸ. ಉದ್ಯೋಗ ವ್ಯವಹಾರಗಳಲ್ಲಿ ಅಗತ್ಯ ಸಹಾಯ ದೊರಕಿ ಯಶಸ್ಸು ಲಭಿಸಿದ ತೃಪ್ತಿ. ಶುಭಸಂಖ್ಯೆ: 1

ವೃಷಭ: ನೂತನ ಮಿತ್ರರ ಸಮಾಗಮದಿಂದ ಸಂತಸ. ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಕೈತುಂಬ ವರಮಾನ. ಸಾಂಸಾರಿಕ ಸುಖ ವೃದ್ಧಿ. ಶುಭಸಂಖ್ಯೆ:5

ಮಿಥುನ: ಗಣ್ಯವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಶುಭಸಂಖ್ಯೆ: 9

ಕಟಕ: ದೂರ ಪ್ರಯಾಣ ಸಂಭವ. ಧಾರ್ವಿುಕ ವಿಚಾರಗಳಲ್ಲಿ ಮಗ್ನ. ಸಾಂಸಾರಿಕ ಸುಖ. ಸ್ವಪ್ರಯತ್ನದ ಧನಾರ್ಜನೆ. ಗೃಹದಲ್ಲಿ ಸಂತಸ. ಶುಭಸಂಖ್ಯೆ: 2

ಸಿಂಹ: ಆಸ್ತಿ ವಿಚಾರಗಳಲ್ಲಿ ಮುನ್ನಡೆ. ವ್ಯವಹಾರಗಳಲ್ಲಿ ಗಮನಾರ್ಹ ಯಶ. ನಿರೀಕ್ಷಿತ ಧನಾರ್ಜನೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ:7

ಕನ್ಯಾ: ಎಲ್ಲ ವಿಚಾರಗಳಲ್ಲಿ ಅಭಿವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯ ಸುಧಾರಣೆ. ವಿದ್ಯಾರ್ಥಿಗಳಿಗೆ ಸೌಕರ್ಯ ವೃದ್ಧಿ. ಶುಭಸಂಖ್ಯೆ: 7

ತುಲಾ: ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿ. ವ್ಯವಹಾರಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಶುಭಸಂಖ್ಯೆ: 7

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸಹೋದರ ರಿಂದ ಉತ್ತಮ ಸಹಕಾರ. ಶುಭಸಂಖ್ಯೆ: 9

ಧನಸ್ಸು: ಉದ್ಯೋಗ ವ್ಯವಹಾರಾದಿಗಳಲ್ಲಿ ಉತ್ತಮ ಪ್ರಗತಿ. ನಿರೀಕ್ಷೆಗೆ ತಕ್ಕಂತೆ ಧನ ಸಂಪಾದನೆಯಾಗಿ ನೆಮ್ಮದಿ.ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ:1

ಮಕರ: ಆರೋಗ್ಯ ವೃದ್ಧಿ. ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ನೂತನ ಮಿತ್ರರ ಭೇಟಿ. ಶುಭಸಂಖ್ಯೆ:8

ಕುಂಭ: ಜನ ಮನ್ನಣೆ ಸಿಗಲಿದೆ. ಮನಸ್ಸಿನಲ್ಲಿ ಸಂಕಲ್ಪಿಸಿದಂತೆ ಪ್ರಗತಿ. ಉತ್ತಮ ಸ್ಥಾನ ಸುಖ. ಮಿತ್ರರಿಂದಲೂ ಗಣ್ಯರಿಂದಲೂ ಸಹಕಾರ. ಶುಭಸಂಖ್ಯೆ: 4

ಮೀನ: ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ಸ್ಥಳದಲ್ಲಿ ಕೆಲಸ ಕಾರ್ಯಗಳಲ್ಲಿ ಅಡಚಣೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net