ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹ ಸಾಧ್ಯತೆ

Nitya Bhavisya Vijayavani
Published on

ಮೇಷ: ಕೃಷಿ ಸಂಬಂಧಿ ಕೆಲಸದ ಒತ್ತಡ ಹೆಚ್ಚಲಿದೆ. ತರಕಾರಿ ವ್ಯಾಪಾರದಲ್ಲಿ ಅಧಿಕ ಲಾಭ. ಸಿವಿಲ್ ಇಂಜಿನಿಯರ್​ಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 6

ವೃಷಭ: ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ ಸಾಧ್ಯತೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈಫಲ್ಯ ಕಾಡಲಿದೆ. ಕಲಾವಿದರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ:8

ಮಿಥುನ: ಸಾರಿಗೆ ಕ್ಷೇತ್ರದ ನೌಕರರಿಗೆ ಬಡ್ತಿ. ಸ್ವಂತ ಉದ್ಯೋಗದ ಸ್ತ್ರೀಯರಿಗೆ ಅಧಿಕ ಲಾಭ. ಮಗನ ಸ್ವದೇಶ ಆಗಮನಕ್ಕೆ ವಿವಿಧ ಅಡೆತಡೆ. ಶುಭಸಂಖ್ಯೆ: 8

ಕಟಕ: ಸ್ಟೇಷನರಿ ವ್ಯಾಪಾರದಲ್ಲಿ ನಷ್ಟ. ಅಡಿಕೆ ಮತ್ತು ತೆಂಗು ಬೆಳೆಗಾರರಿಗೆ ಅಧಿಕ ಧನ ಲಾಭ. ಧಾರ್ವಿುಕ ಕ್ಷೇತ್ರದವರಿಗೆ ಗೌರವ ಸಿಗಲಿದೆ. ಶುಭಸಂಖ್ಯೆ: 9

ಸಿಂಹ: ಸ್ನೇಹಿತರೊಂದಿಗೆ ಕಲಹ ಸಾಧ್ಯತೆ. ಆಪತ್ತಿನಲ್ಲಿ ಬಂಧುಗಳಿಂದ ಸಹಾಯ. ವಾಹನ ಚಾಲನೆಯಲ್ಲಿ ವಿಶೇಷ ಎಚ್ಚರವಿರಲಿ. ಶುಭಸಂಖ್ಯೆ: 9

ಕನ್ಯಾ: ನಾಲ್ಕು ಚಕ್ರದ ವಾಹನ ಖರೀದಿಗೆ ನಿರ್ಧಾರ. ಇಷ್ಟಕ್ಕೆ ತಕ್ಕಂತೆ ನಿವೇಶನ ಸಿಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ಧಿ ಇಲ್ಲ. ಶುಭಸಂಖ್ಯೆ: 3

ತುಲಾ: ಹೋಟೆಲ್ ವ್ಯಾಪಾರದಲ್ಲಿ ಕೆಲಸಗಾರರಿಂದ ಕಿರಿಕಿರಿ. ಸಗಟು ವ್ಯಾಪಾರದಲ್ಲಿ ಲಾಭ. ನಿಮ್ಮ ಮಾಲೀಕತ್ವದ ಮಳಿಗೆಯಲ್ಲಿ ಅವಘಡ. ಶುಭಸಂಖ್ಯೆ: 5

ವೃಶ್ಚಿಕ: ಧಾರ್ವಿುಕ ಕ್ಷೇತ್ರದವರಿಗೆ ಅಭಿವೃದ್ಧಿ. ವಾದಕರು ಮತ್ತು ಗಾಯಕರಿಗೆ ವಿಶೇಷ ದಿನ. ಅವಿವಾಹಿತರಿಗೆ ವಿವಾಹ ಸಾಧ್ಯತೆ. ಶುಭಸಂಖ್ಯೆ: 8

ಧನಸ್ಸು: ಎಲೆಕ್ಟ್ರಾನಿಕ್ಸ್ ಅಂಗಡಿಯವರಿಗೆ ಲಾಭ. ರಕ್ಷಣಾ ಕ್ಷೇತ್ರದವರು ಕೆಲಸ ಕಳೆದುಕೊಳ್ಳುವ ಸಾಧ್ಯತೆ. ಅನ್ಯರ ತಪ್ಪಿಗೆ ದಂಡ ಕೊಡುವಿರಿ. ಶುಭಸಂಖ್ಯೆ:3

ಮಕರ: ದ್ವಿತೀಯದ ಶನಿಯ ಪ್ರಭಾವದಿಂದ ಕುಟುಂಬ ಕಲಹ. ಕೋರ್ಟ್ ಕೇಸುಗಳಲ್ಲಿ ವಿಳಂಬ. ಕುಟುಂಬದ ಆಸ್ತಿ ಕಲಹ ತಾರಕಕ್ಕೆ. ಶುಭಸಂಖ್ಯೆ: 1

ಕುಂಭ: ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಚಿನ್ನ ಬೆಳ್ಳಿ ಖರೀದಿಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 6

ಮೀನ: ಹೊಸ ಪದವಿ ಸಿಗಲಿದೆ. ರಾಜಕೀಯ ಕ್ಷೇತ್ರದವರಿಗೆ ಹಿತಶತ್ರುಗಳ ಕಾಟ ಜಾಸ್ತಿಯಾಗಲಿದೆ. ನೂತನ ಗೃಹ ನಿರ್ಮಾಣ ಕಾರ್ಯ ಪ್ರಾರಂಭ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net