ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ವಿವಾದ ಬಗೆಹರಿಯಲಿದೆ

Nitya-Bhavisya-FILEminimizer
Published on

ಮೇಷ: ನಿರುದ್ಯೋಗಿಗಳಿಗೆ ಸ್ವಉದ್ಯೋಗದ ಆಸಕ್ತಿ. ಹಾರ್ಡ್​ವೇರ್ ವ್ಯಾಪಾರದ ಸ್ಥಳ ಬದಲಾವಣೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ಪರಿಹಾರ. ಶುಭಸಂಖ್ಯೆ: 5

ವೃಷಭ: ಕೈಮಗ್ಗದ ಉಡುಪು ಮಾರಾಟದಲ್ಲಿ ಲಾಭ. ಕಾರ್ಖಾನೆ ಮಾಲೀಕರಿಗೆ ಕಾರ್ವಿುಕರ ಸಮಸ್ಯೆ. ವಿದ್ಯಾಭ್ಯಾಸದ ಕನಸು ಸಾಕಾರ. ಶುಭಸಂಖ್ಯೆ: 4

ಮಿಥುನ: ಬಾಹ್ಯಾಕಾಶ ಸಂಸ್ಥೆಯ ಮಹಿಳಾ ನೌಕರರಿಗೆ ಬಡ್ತಿ. ಹಣ್ಣು, ತರಕಾರಿ ವ್ಯಾಪಾರದಲ್ಲಿ ಲಾಭ. ಧಾರ್ವಿುಕ ಕೆಲಸಗಾರರಿಗೆ ಶುಭದಿನ. ಶುಭಸಂಖ್ಯೆ:9

ಕಟಕ: ಯಕ್ಷಗಾನ ಪ್ರದರ್ಶನಕ್ಕಾಗಿ ವಿದೇಶ ಪ್ರಯಾಣ ಯೋಗ. ಕ್ರೀಡಾಪಟುಗಳಿಗೆ ಸಹಾಯ. ಪತ್ರಕರ್ತರು ಹಣ ಹೂಡಲು ಸುಸಮಯ. ಶುಭಸಂಖ್ಯೆ: 5

ಸಿಂಹ: ಜೇನು ಸಾಕಾಣಿಕೆಯಲ್ಲಿ ಆದಾಯ ಹೆಚ್ಚಲಿದೆ. ಕೃಷಿ ಜಮೀನು ಖರೀದಿಗೆ ಅಡ್ಡಿ. ಆರಕ್ಷಕ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 6

ಕನ್ಯಾ: ಮಹಿಳೆಯರ ಉಡುಪು ಮಾರಾಟದಲ್ಲಿ ನಿರೀಕ್ಷೆಗೂ ಮೀರಿದ ಲಾಭ. ಮನೆಯಲ್ಲಿ ಶುಭಕಾರ್ಯ. ಸ್ವ ಉದ್ಯೋಗಿಗಳಿಗೆ ಗೌರವ. ಶುಭಸಂಖ್ಯೆ: 9

ತುಲಾ: ಐಷಾರಾಮಿ ವಸ್ತುಗಳ ಖರೀದಿಗೆ ಸೂಕ್ತ ಸಮಯ. ದಾಂಪತ್ಯ ವಿವಾದ ಬಗೆಹರಿಯಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 3

ವೃಶ್ಚಿಕ: ವಾಹನ ಚಾಲಕರ ಅಭಾವದಿಂದ ನಷ್ಟ. ಮಾತೃ ಮೂಲವಾದ ಆಸ್ತಿಯ ವ್ಯವಹಾರದಲ್ಲಿ ಇದ್ದ ಗೊಂದಲ ನಿವಾರಣೆಯಾಗಲಿದೆ. ಶುಭಸಂಖ್ಯೆ: 7

ಧನಸ್ಸು: ಸ್ನೇಹಿತರೊಂದಿಗೆ ರ್ಚಚಿಸಿಯೇ ಉದ್ಯೋಗ ಬದಲಾಯಿಸಿ. ಹೊಸ ಉದ್ಯೋಗದಲ್ಲಿ ಉತ್ತಮ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 3

ಮಕರ: ಅಡಕೆ, ಬಾಳೆ ಕೃಷಿಕರಿಗೆ ಲಾಭ. ಹೊಸ ಸಂಶೋಧನೆಯಿಂದ ಆದಾಯ ಗಳಿಸುವಿರಿ. ಮನೆಯ ನವೀಕರಣ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ:3

ಕುಂಭ: ಲೆಕ್ಕಪರಿಶೋಧಕ ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಾಪ್ತಿ. ಮಗನಿಂದ ಶುಭಸುದ್ದಿ ಬರಲಿದೆ. ಅನಾರೋಗ್ಯದಿಂದ ಪತಿಯ ಚೇತರಿಕೆ. ಶುಭಸಂಖ್ಯೆ:3

ಮೀನ: ಮಾಧ್ಯಮ ಕ್ಷೇತ್ರದ ಕೆಲಸಗಾರರಿಗೆ ಶುಭದಿನ. ಸಿನಿಮಾ ವೃತ್ತಿಪರರಿಗೆ ಅನುಕೂಲ. ಉದ್ಯೋಗ ಬದಲಾವಣೆಗೆ ಸೂಕ್ತ ಸಮಯ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net