

ಮೇಷ: ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ. ಉದ್ಯೋಗ ಬದಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಕುಲದೇವರ ಕೃಪೆ ಅಗತ್ಯ. ಶುಭಸಂಖ್ಯೆ: 9
ವೃಷಭ: ವಿವಾಹ ಅಪೇಕ್ಷಿಗಳಿಗೆ ಶುಭಸುದ್ದಿ. ವಾಹನಚಾಲನೆಯಲ್ಲಿ ಸಮಸ್ಯೆ. ವಾಹನ ಲಾಭ. ಬಹು ನಿರೀಕ್ಷಿತ ನೆರವು ದೊರೆಯುವ ಕಾಲ. ಶುಭಸಂಖ್ಯೆ:9
ಮಿಥುನ: ತೀರ್ಥಯಾತ್ರೆಯ ಮೂಲಕ ದೇವರ ದರ್ಶನ. ಶತ್ರುಗಳನ್ನು ನಿಗ್ರಹಿಸುವ ಶಕ್ತಿ ಬರುವುದು. ಸಹೋದರರಿಂದ ಆರ್ಥಿಕ ಸಹಕಾರ. ಶುಭಸಂಖ್ಯೆ:2
ಕಟಕ: ಅಮೂಲ್ಯವಾದ ವಸ್ತುಗಳು ಕಳುವಾಗಬಹುದು. ಎಚ್ಚರ ವಹಿಸಿ. ಪತ್ನಿಗೆ ಅನಾರೋಗ್ಯ ಕಾಡುವ ಸಾಧ್ಯತೆ. ವೃಥಾ ತಿರುಗಾಟ. ಶುಭಸಂಖ್ಯೆ: 1
ಸಿಂಹ: ಹೋಟೆಲ್ ಮಾಲೀಕರಿಗೆ ಹಣಕಾಸಿನಲ್ಲಿ ಮುಗ್ಗಟ್ಟು. ಕುಟುಂಬದಲ್ಲಿ ಅಹಿತಕರ ಘಟನೆ. ದೂರದ ಸಂಬಂಧಿಗಳಿಂದ ಸಹಾಯ. ಶುಭಸಂಖ್ಯೆ:3
ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯ. ಪ್ರಯಾಣದಿಂದ ಆರೋಗ್ಯ ತೊಂದರೆ. ತರಕಾರಿ ಮಾರಾಟದಲ್ಲಿ ಲಾಭ. ಸಣ್ಣಪುಟ್ಟ ಶಾರೀರಿಕ ಗಾಯ. ಶುಭಸಂಖ್ಯೆ:2
ತುಲಾ: ಪತ್ನಿಯ ಆರೋಗ್ಯದಲ್ಲಿ ಚೇತರಿಕೆ. ಎಲ್ಲಾ ಕೆಲಸಕ್ಕೂ ವಿಘ್ನಗಳು ಪದೇ ಪದೇ ಬರಲಿವೆ. ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ. ಶುಭಸಂಖ್ಯೆ:2
ವೃಶ್ಚಿಕ: ತಲೆ ನೋವಿನಿಂದ ಕಿರಿಕಿರಿ. ಪ್ರಯಾಣದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಕ್ಕಳಿಗೆ ಜ್ವರ ಬಾಧಿಸುವುದು, ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ:9
ಧನಸ್ಸು: ಕೋರ್ಟ್ ಕಚೇರಿಗಳಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ನೆರೆಹೊರೆಯವರಿಂದ ಕಿರಿಕಿರಿ. ದುಡುಕಿನ ನಿರ್ಧಾರದಿಂದ ತೊಂದರೆ. ಶುಭಸಂಖ್ಯೆ:1
ಮಕರ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಕಲಹ ಆದೀತು. ಭೂ ವ್ಯವಹಾರದಲ್ಲಿ ಲಾಭ. ಪ್ರೇಮಿಗಳಲ್ಲಿ ಮನಸ್ತಾಪ. ಶುಭಸಂಖ್ಯೆ:4
ಕುಂಭ: ಪ್ರಭಾವಿಗಳ ಸಂಪರ್ಕ. ಧಾರ್ವಿುಕ ಕಾರ್ಯಗಳಲ್ಲಿ ಮಾನಸಿಕ ಶಾಂತಿ ಕಾಣುವಿರಿ. ನಿಂತ ಕಾರ್ಯಗಳು ಮುಂದುವರಿಯುವವು. ಶುಭಸಂಖ್ಯೆ:2
ಮೀನ: ಸ್ನೇಹಿತರೊಂದಿಗೆ ಪ್ರವಾಸ ಯೋಗ. ಬಂಧುಗಳ ಆಗಮನದಿಂದ ಸಂತೋಷ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಶುಭಸಂಖ್ಯೆ:3