ಪಿಲಿಕುಳದಲ್ಲಿ ಪ್ರವಾಸಿಗರಿಗೆ ಡಿಜಿಟಲ್ ಮಾದರಿ ಟಿಕೆಟ್

ಇ-ಟಿಕೆಟಿಂಗ್(ಆನ್‌ಲೈನ್ ಟಿಕೆಟ್) ಸೌಲಭ್ಯ, ಕಿಯೋಸ್ಕ್‌ನ್ನು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಬುಧವಾರ ಲೋಕಾರ್ಪಣೆಗೊಳಿಸಿದರು. ಎಂಎಲ್‌ಸಿ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮೊದಲಾದವರು ಉಪಸ್ಥಿತರಿದ್ದರು.
ಇ-ಟಿಕೆಟಿಂಗ್(ಆನ್‌ಲೈನ್ ಟಿಕೆಟ್) ಸೌಲಭ್ಯ, ಕಿಯೋಸ್ಕ್‌ನ್ನು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಬುಧವಾರ ಲೋಕಾರ್ಪಣೆಗೊಳಿಸಿದರು. ಎಂಎಲ್‌ಸಿ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮೊದಲಾದವರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ವ್ಯವಸ್ಥೆಯಿಂದ ಪ್ರವಾಸಿಗರಿಗೆ ಸುಲಭ
  • ನೂತನ ವ್ಯವಸ್ಥೆಗೆ ಸಚಿವ ಬೋಸರಾಜು ಚಾಲನೆ
ವಿಜಯವಾಣಿ ಸುದ್ದಿಜಾಲ ಗುರುಪುರ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ ವ್ಯವಸ್ಥೆಗೊಳಿಸಲಾದ ಇ-ಟಿಕೆಟಿಂಗ್(ಆನ್‌ಲೈನ್ ಟಿಕೆಟ್) ಸೌಲಭ್ಯವನ್ನು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಬುಧವಾರ ಲೋಕಾರ್ಪಣೆಗೊಳಿಸಿದರು.
ಎಂಎಲ್‌ಸಿ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ್ ಕೆ., ಪ್ರಾಧಿಕಾರದ ಸದಸ್ಯರಾದ ಎನ್.ಜಿ.ಮೋಹನ್, ಶಿವರಾಮ ಮಲ್ಲಿ, ಉಪಸಮಿತಿ ಅಧ್ಯಕ್ಷ ಶ್ರೀನಿಕೇತನ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಮಂಜುನಾಥ ಬಿ.ಸಿಂಘೈ, ಕೆನರಾ ಬ್ಯಾಂಕ್ ಡಿಜಿಎಂ ವೆಂಕಟ ವರಪ್ರಸಾದ್, ವಿಭಾಗೀಯ ಮ್ಯಾನೇಜರ್‌ಗಳಾದ ವನಜಾ ಪ್ರಸಾದ್ ಎಚ್., ರೋಹಿತ್ ಆರ್., ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ್ ಕೆ.ಆರ್., ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕಿ ನೇಹಾ ಮತ್ತಿತರರು ಇದ್ದರು. ಪಿಲಿಕುಳ ಕ್ಯೂರೇಟರ್ ಜಗನ್ನಾಥ ನಿರೂಪಿಸಿದರು.
ನೂತನ ವ್ಯವಸ್ಥೆಯಿಂದ ಪ್ರವಾಸಿಗರಿಗೆ ಸುಲಭ, ತೊಂದರೆ ರಹಿತ ಟಿಕೆಟ್ ಬುಕ್ಕಿಂಗ್ ಸಾಧ್ಯವಿದೆ. ನಿಸರ್ಗಧಾಮದ ಎಲ್ಲ ಆಕರ್ಷಣೀಯ ಸ್ಥಳಗಳಿಗೆ ಅನ್ವಯವಾಗುವಂತೆ ‘ಆಲ್-ಇನ್-ಒನ್’ ಟಿಕೆಟ್ ಅಥವಾ ಪ್ರತ್ಯೇಕ ಆಕರ್ಷಣೆಗಳಿಗೆ ಪ್ರತ್ಯೇಕ ಟಿಕೆಟ್ ಆಯ್ಕೆ ಮಾಡುವ ಕಲ್ಪಿಸಲಾಗಿದೆ. ವಿವಿಧ ಬುಕ್ಕಿಂಗ್ ವ್ಯವಸ್ಥೆ-ಸ್ವಯಂ ಸೇವಾ ಕಿಯೋಸ್ಕ್ ಮೂಲಕ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು. ಉದ್ಯಾನ ಪ್ರವೇಶ ಟಿಕೆಟ್ ಜತೆಗೆ ಪ್ಲಾನೆಟೇರಿಯಂ ಟಿಕೆಟ್ ಕೂಡ ಬುಕ್ ಮಾಡಬಹುದು.

ವಾಟ್ಸ್ಯಾಪ್ ನಲ್ಲಿ ಟಿಕೆಟ್ ವಿತರಣೆ

ಬುಕ್ಕಿಂಗ್ ಮಾಡಿದ ತಕ್ಷಣ ಟಿಕೆಟ್‌ಗಳು ವಾಟ್ಸಾೃಪ್ ಮೂಲಕ ಪ್ರವಾಸಿಗರ ಮೊಬೈಲ್‌ಗೆ ತಲುಪುತ್ತವೆ. ಭೌತಿಕ, ಡಿಜಿಟಲ್ ಟಿಕೆಟ್, ಮುದ್ರಿತ ಟಿಕೆಟ್ ಜತೆಗೆ ಕ್ಯೂಆರ್ ಕೋಡ್ ಹೊಂದಿದ ಡಿಜಿಟಲ್ ಟಿಕೆಟ್ ಕೂಡ ವಾಟ್ಸ್ಯಾಪ್ ಮೂಲಕ ಲಭ್ಯವಾಗುತ್ತವೆ. ಪಿಲಿಕುಳ ಟಿಕೆಟ್ ಕೌಂಟರ್ ಬಳಿ ಕ್ಯೂಆರ್ ಸ್ಕ್ಯಾನರ್ ವ್ಯವಸ್ಥೆ ಇದೆ. ಆನ್‌ಲೈನ್ ಟಿಕೆಟ್ ತಕ್ಷಣ ಪರಿಶೀಲಿಸಲು ಪಿಲಿಕುಳದ ಸಿಬ್ಬಂದಿಗೆ ಸ್ಕ್ಯಾನರ್ ಒದಗಿಸಲಾಗಿದೆ. ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡಲು ಅವಕಾಶವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net