

ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಇಡೀ ದೇಶ ಲಾಕ್ಡೌನ್ನಲ್ಲಿದೆ. ಜನರು ಮನೆಯಲ್ಲಿಯೇ ಇದ್ದು ಇದರ ವಿರುದ್ಧ ಹೋರಾಟ ನಡೆಸಿದ್ದಾರೆ. ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತರಗತಿಯ ಪಾಠ ಕೇಳುವುದರಿಂದ ವಂಚಿತರಾಗಿದ್ದಾರೆ. ಜತೆಗೆ, ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡೋಣವೆಂದರೆ, ಪುಸ್ತಕಗಳಿಗಾಗಿ ಗ್ರಂಥಾಲಯಕ್ಕೂ ತೆರಳುವಂತಿಲ್ಲ.
ವಿದ್ಯಾರ್ಥಿಗಳ ಈ ಸಂಕಷ್ಟವನ್ನು ದೂರ ಮಾಡಲೆಂದೇ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ವಿಶೇಷ ಪಠ್ಯ ಹಾಗೂ ಸಾಮಗ್ರಿಗಳನ್ನು ಅಣಿಗೊಳಿಸಿದೆ.
ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಅಧ್ಯಯನ ಸಾಮಗ್ರಿಗಳನ್ನು ನಿರಂತರವಾಗಿ ಅಪ್ಡೇಟ್ ಮಾಡುತ್ತಲೇ ಇದ್ದೇವೆ. ಈ ಬಗ್ಗೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯದ ಸೋಷಿಯಲ್ ಮೀಡಿಯಾ ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಗ್ರಂಥಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟಕ್ಕೂ ಈ ಡಿಜಿಟಲ್ ಲೈಬ್ರರಿಯಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗ ಆಗುವಂತಾದ್ದು ಏನೇನಿದೆ ಗೊತ್ತಾ?
ಪಠ್ಯಪುಸ್ತಕಗಳು, ಪ್ರಶ್ನೆಪತ್ರಿಕೆಗಳು, ವಿಡಿಯೋ ಉಪನ್ಯಾಸಗಳು, ಪ್ರಶ್ನೋತ್ತರ ಮಾಲಿಕೆ, ಸಿಬಿಎಸ್ಇ, ಕರ್ನಾಟಕ ಶಿಕ್ಷಣ ಮಂಡಳಿ ಸೇರಿ ವಿವಿಧ ಮಂಡಳಿಗಳ ಪಠ್ಯಕ್ರಮಗಳನ್ನು ನೀಡಲಾಗಿದೆ. ಇದಲ್ಲದೇ, ನೀಟ್, ಜೆಇಇ ಮೇನ್ಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಸಾಮಗ್ರಿಗಳನ್ನು ನೀಡಲಾಗಿದೆ.
ನ್ಯಾಷನಲ್ ಡಿಜಿಟಲ್ ಲೈಬ್ರರಿಗೆ ಲಿಂಕ್ಗಳು ಇಲ್ಲಿವೆ. www.ndl.gov.in ಅಥವಾ ndl.iitkgp.ac.in.