ನಾಗರಿಕರ ಡಿಜಿಟಲ್ ಡೆಟಾದ ಸುರಕ್ಷತೆಯ ಖಾತ್ರಿ ಇಲ್ಲ: ಡಾ.ನಿಗಮ್ ನುಗ್ಗೆಹಳ್ಳಿ

digital
Published on

ಬೆಂಗಳೂರು:

ವಿವಿಧ ಉದ್ದೇಶಗಳಿಗೆ ಸರ್ಕಾರಗಳು ನಾಗರಿಕರಿಂದ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ಡಿಜಿಟಲ್ ಡೆಟಾದ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಖಾತರಿ ಇಲ್ಲ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊ. ಡಾ. ನಿಗಮ್ ನುಗ್ಗೆಹಳ್ಳಿ ಹೇಳಿದ್ದಾರೆ.

ಕಾನೂನು ಮತ್ತು ಸೈಬರ್ ಕ್ಷೇತ್ರದ ತಜ್ಞರು, ಉದ್ಯಮಿಗಳು ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ಸೈಬರ್ ವಿ ಸಂಗಮ್ ಸಂವಾದದಲ್ಲಿ ಮಾತನಾಡಿದರು.

ನಾಗರಿಕರಿಂದ ಸರ್ಕಾರಗಳು ವಿವಿಧ ಉದ್ದೇಶಗಳಿಗೆ ಪಡೆಯುವ ಮಾಹಿತಿಯನ್ನು ಅದೇ ಉದ್ದೇಶಕ್ಕೆ ಮಾತ್ರ ಬಳಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಸರ್ಕಾರಗಳು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು. ಗೌಪ್ಯತೆ ಕಾಪಾಡಲಾಗುತ್ತದೆ ಎನ್ನುವ ಖಾತರಿ ಇಲ್ಲ ಎಂದರು.

ಜಾಲತಾಣಗಳಲ್ಲಿ ನಾಗರಿಕರು ಅಪ್ರೋಡ್ ಮಾಡುವ ಮಾಹಿತಿಯ ಕುರಿತು ಏನಾದರೂ ಸಮಸ್ಯೆ ಇದೆ ಎನಿಸಿದರೆ ತೆಗೆದು ಹಾಕಿ ಎಂದು ಸರ್ಕಾರವೇ ಗೊಗರೆಯುತ್ತದೆ. ಜಾಲತಾಣಗಳ ಕಂಟೆಂಟ್ ನಿಯಂತ್ರಣಕ್ಕೆ ಹೆಣಗಾಡುತ್ತಿವೆ. ನಿಯಂತ್ರಣಕ್ಕೆ ಚೌಕಟ್ಟು ಇಲ್ಲ. ಜವಾಬ್ದಾರಿ, ವಿಶ್ವಾಸಾರ್ಹತೆ, ಬದ್ಧತೆ ಇಲ್ಲ ಎಂದರು.

ಇನ್ನು ಶಿಕ್ಷಣದಲ್ಲೂ ವಿದ್ಯಾರ್ಥಿಗಳ ಬರಹಗಳು ಸ್ವಂತದ್ದೋ? ಅಥವಾ ಚಾಟ್ ಜಿಪಿಟಿ, ಎಐ ಮೂಲಕ ಸೃಷ್ಟಿಸಿದ್ದೋ? ಎನ್ನುವುದೂ ಗೊತ್ತಾಗುವುದೇ ಇಲ್ಲ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಡಾ. ನಿಗಮ್ ಹೇಳಿದರು.

ಡೆಟಾ ಗೌಪ್ಯತೆ ಮತ್ತು ಸೆಕ್ಯುರಿಟಿ ತಜ್ಞ ಸಂದೀಪ್ ಕುಮಾರ್ ಅಕ್ಕಿಮೊಲ್ಲ ಮಾತನಾಡಿ, ಬ್ಯಾಂಕಿಂಗ್, ಟೆಲಿಕಾಂ ಮತ್ತು ಟ್ರೇಡ್ ಸಂಬಂಸಿದ ನಾಗರಿಕರ ಡೆಟಾ ದೇಶದ ಕಾನೂನು ಅಡಿ ಸುರಕ್ಷಿತವಾಗಿದೆ. ಕಂಪನಿಗಳು ಗ್ರಾಹಕರಿಂದ ಸಂಗ್ರಹಿಸುವ ಹಾಗೂ ಕಂಪನಿಯ ಡೆಟಾವನ್ನು ನಮ್ಮ ದೇಶದಿಂದಲೇ ನಿರ್ವಹಿಸಬೇಕು ಎನ್ನುವ ಬೇಡಿಕೆ ಈಗ ಹೆಚ್ಚುತ್ತಿದೆ. ೀರ್ಘಾವಯಲ್ಲಿ ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಅನುಕೂಲಗಳು ಇವೆ ಎಂದರು.

ಸೈಬರ್ ಸಂರಕ್ಷಣೆ ಸಲಹೆಗಾರ್ತಿ ಶ್ಲೋಕಾ ನಾರಾಯಣನ್ ಮಾತನಾಡಿ, ಕೇಂದ್ರ ಸರ್ಕಾರ ತರುತ್ತಿರುವ ಡಿಜಿಟಲ್ ಪರ್ಸನಲ್ ಡೆಟಾ ಪ್ರೊಟೆಕ್ಷನ್ ಕಾಯ್ದೆಯು (ಡಿಪಿಡಿಟಿ) ನಾಗರಿಕರ ಡಿಜಿಟಲ್ ಮಾಹಿತಿಯ ಖಾಸಗೀತನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಆದರೆ, ಅನುಷ್ಠಾನಗೊಳಿಸಿದ ಬಳಿಕ ಎದುರಾಗುವ ಸವಾಲುಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು ಎಂದರು.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊ. ಸಿದ್ಧಾರ್ಥ ಚೌಹಾಣ್, ಪಾಲಿಸಿ ಆರ್ಕಿಟೆಕ್ಟ್ ಸಚಿನ್ ಧವನ್ ಅವರು ಸೈಬರ್ ಖಾಸಗಿತನ ಮತ್ತು ಸವಾಲುಗಳ ಕುರಿತು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net