'ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದೀರಿ'..ಮಹಿಳಾ ವಿಜ್ಞಾನಿಗೆ ಹೆದರಿಸಿ 71ಲಕ್ಷ ಲೂಟಿ ಮಾಡಿದ ಸೈಬರ್ ವಂಚಕರು! Digital Arrest

Digital Arrest
Published on

ಇಂದೋರ್(ಮಧ್ಯಪ್ರದೇಶ): ದೇಶದಲ್ಲಿ ಡಿಜಿಟಲ್ ಅರೆಸ್ಟ್(Digital Arrest )​ ಅಥವಾ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಇದರಲ್ಲಿ ವಂಚಕರು ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಬೆದರಿಕೆ ಹಾಕುವ ಮೂಲಕ ಜನರನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಣುಶಕ್ತಿ ವಿಭಾಗದ ವಿಜ್ಞಾನಿಯೊಬ್ಬರು ಈ ವಂಚನೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಡಿಜಿಟಲ್ ಬಂಧನದ ನಂತರ ಅವರಿಂದ 71 ಲಕ್ಷ ರೂ. ಲೂಟಿ ಮಾಡಲಾಗಿದೆ.

ಆರೋಪಿ ತನ್ನನ್ನು ಟ್ರಾಯ್ ಅಧಿಕಾರಿ ಎಂದು ಘೋಷಿಸಿಕೊಂಡಿದ್ದು, ಇಂದೋರ್​ನ ''ರಾಜ ರಾಮಣ್ಣ ಅಡ್ವಾನ್ಸ್​ಡ್ ಟೆಕ್ನಾಲಜಿ ಸೆಂಟರ್‌ನಲ್ಲಿ (ಆರ್‌ಆರ್‌ಸಿಎಟಿ) ವೈಜ್ಞಾನಿಕ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಗೆ ಸೆ.1 ರಂದು ಕರೆ ಮಾಡಿದ್ದ. ನಿಮ್ಮ ಹೆಸರಿನಲ್ಲಿ ಸಿಮ್ ನೋಂದಾಯಿಸಲಾಗಿದೆ. ಅದರಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಸಂದೇಶಗಳನ್ನು ಕಳುಹಿಸಲಾಗಿದೆ. ಇದಲ್ಲದೆ, ಅಕ್ರಮ ಹಣ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ನಿಮ್ಮ ಸಿಮ್​ ಬಳಸುತ್ತಿರುವ ವ್ಯಕ್ತಿಗೆ ಸಂಬಂಧವಿದೆ. ಆತನ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಲಾಗಿದೆ ಎಂದು ಸಂತ್ರಸ್ತೆಗೆ ತಿಳಿಸಲಾಗಿದೆ.

ಮತ್ತೊಬ್ಬ ಆರೋಪಿ ತಾನು ಸಿಬಿಐ ಅಧಿಕಾರಿ ಎಂದು ಗುರುತಿಸಿಕೊಂಡಿದ್ದಾನೆ. ಆರೋಪಿಗಳು ವಿಡಿಯೊ ಕಾಲ್ ಮೂಲಕ ವಿಜ್ಞಾನಿ ಮತ್ತು ಅವರ ಪತ್ನಿಯ ವಿಚಾರಣೆ ನಡೆಸಿದ್ದಾರೆ. ಇದಾದ ಬಳಿಕ ವಿಜ್ಞಾನಿ ಹೆದರಿದ್ದು, ಆರೋಪಿಯ ಮಾತನಾಡುತ್ತಲೇ ಅವರಿಂದ ಓಟಿಪಿ ಪಡೆದು ಅವರ ವಿವಿಧ ಖಾತೆಗಳಲ್ಲಿದ್ದ 71.33 ಲಕ್ಷ ರೂ. ತನ್ನ ಅಕೌಂಟ್​ಗೆ ವರ್ಗಾಯಿಸಿಕೊಂಡಿದ್ದಾನೆ.

ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net