ಡಿಜಿಟಲ್​ ಅರೆಸ್ಟ್​; 11 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಇಂಜಿನಿಯರ್​! | Digital arrest

dk (14) (1)
Published on

ಬೆಂಗಳೂರು: ನಗರದ ಇಂಜಿನಿಯರೊಬ್ಬರು ಡಿಜಿಟಲ್​ ಅರೆಸ್ಟ್(Digital arrest)​ ಆಗಿ ಬರೊಬ್ಬರಿ 11.8 ಕೋಟಿ ರೂ. ಕಳೆಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ವಂಚಕರು ಪೊಲೀಸ್​ ಅಧಿಕಾರಿಗಳಂತೆ ವರ್ತಿಸಿ ಕರೆ ಮಾಡಿ, ಆಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಿರಿ ಎಂದು ಸುಳ್ಳು ಆರೋಪ ಮಾಡಿ, ಬೆದರಿಕೆ ಹಾಕಿ ವಂಚನೆ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ, ನ.11ರಂದು ಇಂಜಿನಿಯರ್​ಗೆ ವಂಚಕರು ಕರೆ ಮಾಡಿದ್ದು, ಭಾರತೀಯ ಟೆಲಿಕಾಂ ಅಧಾರಿಟಿ ಆಫ್​ ಇಂಡಿಯಾ(ಟ್ರಾಯ್​) ಅಧಿಕಾರಿ ಎಂದು ಪೋನ್​ ಮಾಡಿದ್ದಾರೆ. ನಿಮ್ಮ ಆಧಾರಕಾರ್ಡ್​​ ಲಿಂಕ್​ ಮಾಡಿರುವ ಸಿಮ್​ಕಾರ್ಡ್​ನಿಂದ ಆಕ್ರಮ ಜಾಹಿರಾತು ಮತ್ತು ಕಿರಿಕುಳ ಸಂದೇಶಗಳಿಗೆ ಬಳಸಲಾಗಿದೆ ಎಂದು ಇಂಜಿನಿಯರ್​ಗೆ ಆರೋಪಿಸಿದ್ದಾರೆ. ಬಳಿಕ ಮತ್ತೊಬ್ಬ ಪೊಲೀಸ್​ ಅಧಿಕಾರಿಯಂತೆ ಸ್ಕೈಪ್​ ಕಾಲ್​ ಮಾಡಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ನಿಮ್ಮ ಮೇಲೆ ಮನಿ ಲಾಂಡರಿಂಗ್​ ಕೇಸ್​ ಹಾಕಲಾಗುವುದು ಎಂದು ಬೆದರಿಸಿ ಈ ವಿಚಾರ ಯಾರಿಗೂ ಹೇಳದಂತೆ ಡಿಜಿಟಲ್​ ಅರೆಸ್ಟ್​ ಮಾಡಲಾಗಿದೆ.

ಇದೇ ತರ ಪ್ರತಿನಿತ್ಯದ ಕಿರುಕುಳದಿಂದ ಬೆಸತ್ತ ಇಂಜಿನಿಯರ್,​ ಕೊನೆಯದಾಗಿ ವಂಚಕರ ಬೆದರಿಕೆಗಳಿಗೆ ಹೆದರಿ ವಿವಿಧ ರೀತಿಯಲ್ಲಿ ಒಟ್ಟು 11.8 ಕೋಟಿ ರೂ. ವಂಚಕರ ಖಾತೆಗೆ ಹಣ ವರ್ಗಾಹಿಸಿದ್ದಾನೆ. ಬಳಿಕ ತಾನು ವಂಚನೆಗೆ ಒಳಾಗಿದ್ದೇನೆ ಎಂದು ಅರಿತ ಇಂಜಿನಿಯರ್​ ಕೊನೆಗೆ ಠಾಣೆಗೆ ದೂರು ನೀಡಿದ್ದಾನೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net