ಈ ನಂಬರ್​​ ಪ್ಲೇಟ್​ಗಳ ಅರ್ಥವೇನು? ವಿಭಿನ್ನ ಸಂಖ್ಯೆ, ಅಕ್ಷರಗಳ ಹಿಂದಿದೆ ಬಹುತೇಕರಿಗೆ ಗೊತ್ತಿರದ ಮಾಹಿತಿ | Number Plates

ವಿಜಯವಾಣಿ - 2025-01-17T144648.855
Published on

Number Plates: ಭಾರತೀಯ ವಾಹನಗಳಲ್ಲಿ ಕಂಡುಬರುವ ಇಂತಹ ನಂಬರ್​ ಪ್ಲೇಟ್​ಗಳು ಬಹಳ ವಿಶೇಷವಾಗಿವೆ. ಸಾಮಾನ್ಯವಾಗಿ ಆಯಾ ರಾಜ್ಯಗಳ ಹೆಸರಿನಲ್ಲಿರುವ ಅಕ್ಷರಗಳನ್ನೇ ಮೊದಲಗಿಡುವ ಸರ್ಕಾರಗಳು, ಈ ವಾಹನ ತಮ್ಮ ರಾಜ್ಯಕ್ಕೆ ಸೇರಿದ್ದು ಎಂಬುದನ್ನು ಪೊಲೀಸರಿಗೆ ಹಾಗೂ ಸವಾರರಿಗೆ ಸುಲಭವಾಗಿ ಪತ್ತೆಹಚ್ಚುವಂತೆ ಮಾಡುತ್ತದೆ. ಕೇವಲ ಒಂದು ನಂಬರ್ ಪ್ಲೇಟ್​ನಿಂದಲೇ ಈ ವಾಹನ ಯಾವ ರಾಜ್ಯದಿಂದ ಬಂದಿದ್ದು, ಯಾಕಾಗಿ ಇಲ್ಲಿಗೆ ಬಂತು? ಯಾರಿಗೆ ಸೇರಿದ್ದು ಎಂಬ ಸಂಪೂರ್ಣ ಮಾಹಿತಿ ಕ್ಷಣಮಾತ್ರದಲ್ಲಿ ಸಿಕ್ಕಿಬಿಡುತ್ತದೆ. ಅಷ್ಟು ಮಾಹಿತಿಯನ್ನು ಒಳಗೊಂಡಿರುವ ಈ ಸಂಖ್ಯೆಗಳ ಹಿಂದೆ ನಿಮಗೆ ಗೊತ್ತಿರದ ಕೆಲವು ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.

ಕೆಎ ಅಂದರೆ ಕರ್ನಾಟಕ, ಎಂಚ್​ ಎಂದಿದ್ದರೆ ಈ ವಾಹನ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪ್ರತಿಯೊಬ್ಬರು ಸುಲಭವಾಗಿ ಕಂಡು ಹಿಡಿಯುತ್ತಾರೆ. ಆದರೆ, ಕೆಲವೊಂದು ವಾಹನಗಳಲ್ಲಿ 22 ಬಿಎಚ್​ ಮತ್ತು ಒಂದಂಕಿ ನಂಬರ್​ಗಳು ವಿಚಿತ್ರವಾಗಿ ಕಾಣಿಸುವುದರ ಜತೆಗೆ ತಲೆಗೆ ದೊಡ್ಡ ಹುಳ ಬಿಡುತ್ತದೆ. ಇದು ಯಾವ ರಾಜ್ಯದ ಸಂಖ್ಯೆ? ಏಕೆ ಹೀಗಿದೆ ಎಂಬ ಹತ್ತು ಹಲವು ವಿಷಯಗಳು ಗೋಚರಿಸುವಂತೆ ಮಾಡುತ್ತದೆ. ಅಸಲಿಗೆ ಈ ವಿಶೇಷ ಅಂಕಿ ಮತ್ತು ಅದರಲ್ಲಿರುವ ಬಣ್ಣಗಳು ಒಂದೊಂದು ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತದೆ.

ಬಣ್ಣಗಳನ್ನು ಹೊಂದಿರುವ ವಿಶೇಷ ಅಂಕಿಯ ನಂಬರ್ ಪ್ಲೇಟ್​ಗಳಿವು

ಈ ನಂಬರ್ ಪ್ಲೇಟ್​ ಇದು ಖಾಸಗಿ ವಾಹನ ಎಂಬುದನ್ನು ಹೇಳುತ್ತದೆ.

ರಾಜ್ಯವನ್ನು ಸೂಚಿಸುವ ಅಕ್ಷರಗಳ ಪಕ್ಕ ಇನ್ನೆರೆಡು ಅಕ್ಷರಗಳಿದ್ದರೆ ಅದನ್ನು ವಿಂಟೇಜ್ ಕಾರು ಎನ್ನಲಾಗುತ್ತೆ.

ವೈಟ್​ ಬೋರ್ಡ್​ನಲ್ಲಿರುವ ಸಂಖ್ಯೆ ಹಳದಿ ಬಣ್ಣದಲ್ಲಿದ್ದರೆ ಅದು ವಾಣಿಜ್ಯ ಬಳಕೆಗಾಗಿ ಮೀಸಲಿರುವ ವಾಹನ.

ಈ ವಿಶೇಷ ಸಂಖ್ಯೆಯನ್ನು ಹೊಂದಿರುವ ವಾಹನವನ್ನು ಭಾರತ್​ ಸಿರೀಸ್​ ಎಂದು ಹೇಳಲಾಗುತ್ತೆ.

ಹಸಿರು ಬಣ್ಣದ ನಂಬರ್ ಪ್ಲೇಟ್​ನಲ್ಲಿ ಅಂಕಿಗಳನ್ನು ಹಳದಿ ಬಣ್ಣದಲ್ಲಿ ಮುದ್ರಿಸಲಾಗಿದೆ ಎಂದರೆ ಅದು ವಾಣಿಜ್ಯ ಎಲೆಕ್ಟ್ರಿಕ್​ ವಾಹನ.

ಕಪ್ಪು ಬಣ್ಣದ ಬೋರ್ಡ್​ನಲ್ಲಿ ಹಳದಿ ಅಂಕಿಗಳಿದ್ದರೆ ಅದು ಬಾಡಿಗೆಗೆ ಮೀಸಲಿರುವ ವಾಹನ.

ಹಸಿರು ಬಣ್ಣದ ನಂಬರ್ ಪ್ಲೇಟ್​ನಲ್ಲಿರುವ ಅಂಕಿಗಳು ಕಪ್ಪು ಬಣ್ಣದಲ್ಲಿವೆ ಎಂದರೆ ಅದನ್ನು ಎಲೆಕ್ಟ್ರಿಕ್​ ವಾಹನ ಎಂದು ಗುರುತಿಸಲಾಗುತ್ತದೆ.

ಈ ರೀತಿಯ ನೀಲಿ ನಂಬರ್​ ಬೋರ್ಡ್​ ಅನ್ನು ಡಿಪ್ಲೋಮೆಟ್​ ವೆಹಿಕಲ್ ಎಂದು ಕರೆಯಲಾಗುತ್ತದೆ.

ಬಿಳಿ ಬಣ್ಣದ ಅಂಕಿಯಿರುವ ಕೆಂಪು ಬಣ್ಣದ ಬೋರ್ಡ್​ ಅನ್ನು ತಾತ್ಕಾಲಿಕ ನೋಂದಣಿ ಸಂಖ್ಯೆ ಎನ್ನಲಾಗುತ್ತದೆ.

ಇನ್ನು ಭಾರತ ಸರ್ಕಾರದ ಚಿಹ್ನೆಯಿರುವ ಕೆಂಪು ಬಣ್ಣದ ನಂಬರ್​ ಪ್ಲೇಟ್​ ರಾಷ್ಟ್ರಪತಿಗಳ ವಾಹನ ಎಂದು ಸೂಚಿಸುತ್ತದೆ.

ಈ ರೀತಿ ಬಾಣದ ಗುರುತನ್ನು ಹೊಂದಿರುವ ನಂಬರ್​ ಪ್ಲೇಟ್​ಗಳು ಸೇನಾ ವಾಹನ ಎಂದು ಗುರುತಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net