ನಿಮ್ಮ ಮೊಬೈಲ್​ಗೆ ಅಲರ್ಟ್ ಮೆಸೇಜ್ ಬಂದಿಲ್ಲವಾ? ಕಾರಣ ಏನಿರಬಹುದು ಗೊತ್ತಾ?

mobile
Published on

ಬೆಂಗಳೂರು: ಮೊನ್ನೆಯಂತೆ ಇಂದು ಬೆಳಗ್ಗೆ ಕೂಡಾ 11.58ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಎರಡೆರಡು ಬಾರಿ ರಾಜ್ಯದ ಬಹುತೇಕರ ಮೊಬೈಲ್​ಗೆ ಬೀಪ್ ಸೌಂಡ್​ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದೆ. ಆದರೆ ಕೆಲವರ ಮೊಬೈಲ್​ಗೆ ಈ ಸಂದೇಶ ಬಂದಿಲ್ಲ. ಯಾಕೆ ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಅಲರ್ಟ್ ಮೆಸೇಜ್ ಬರದೆ ಇರಲು ಸಂಭಾವ್ಯ ಕಾರಣ:
1) ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ.
2) 30 ನಿಮಿಷದ ಅವಧಿಯೊಳಗೆ ನಿಮ್ಮ ಮೊಬೈಲ್ ಸ್ವಿಚ್ ಆನ್ ಆದಾಗ ಮೆಸೇಜ್ ಬರುತ್ತದೆ. ಅವಧಿ ಮೀರಿದ ಬಳಿಕ ಸ್ವಿಚ್ ಆನ್ ಮಾಡಿದರೂ ಮೆಸೇಜ್ ಬರುವುದಿಲ್ಲ.
3) ನಿಮ್ಮ ಮೊಬೈಲ್​​ ಏರ್​ಪ್ಲೇನ್ ಮೋಡ್​ನಲ್ಲಿದ್ದರೂ ಅಲರ್ಟ್ ಮೆಸೇಜ್​​ ಬಂದಿರುವುದಿಲ್ಲ.
4) ಏರ್​ಟೆಲ್, ಜಿಯೋ, ವೊಡಾಫೋನ್ ಇತ್ಯಾದಿ ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ಈ ಅಲರ್ಟ್ ಮೆಸೇಜ್ ತಲುಪಿರುತ್ತದೆ.
5) ಫೋನ್ ಸೆಟಿಂಗ್​ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಆಫ್ ಆಗಿರಬಹುದು.
6 ) ನೀವು ಬಳಸುವ ಮೊಬೈಲ್​​ ಹಳೆಯದ್ದು, ಆಗಿದ್ದರೆ ಅಲರ್ಟ್ ಬರದೇ ಹೋಗಬಹುದು. ಎಮರ್ಜೆನ್ಸಿ ಸಿಸ್ಟಂ ವಾರ್ನಿಂಗ್ ವ್ಯವಸ್ಥೆಗೆ ನಿಮ್ಮ ಫೋನ್ ಹೊಂದಿಕೆಯಾಗಿರುವುದಿಲ್ಲ.
8 ) ಪ್ರದೇಶವಾರು ಬೇರೆ ಬೇರೆ ಸಮಯದಲ್ಲಿ ಅಲರ್ಟ್ ಬಂದಿರಬಹುದು.

9) ನೀವು ಬಳಸುವ ಮೊಬೈಲ್​​ ಸಂಖ್ಯೆ ತುಂಬಾ ದಿನಗಳಿಂದ ಆಕ್ಟಿವ್​ ಆಗಿ ಇರದೆ ಇರಬಹುದು.

ಅಲರ್ಟ್​ ಮೆಸೇಜ್​ನಲ್ಲಿ ಏನಿದೆ? :
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶ ಮೆಸೇಜ್​ನಲ್ಲಿದೆ.

ಈ ಅಲರ್ಟ್​ ಮೆಸೇಜ್​ ಈ ಬಗ್ಗೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಮೊದಲೇ ಸ್ಪಷ್ಟನೆ ನೀಡಿತ್ತು. ಇದು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯಾಗಿದೆ. ಅ. 12ರಂದು ಕರ್ನಾಟಕದಾದ್ಯಂತ ನಡೆಸುವುದಾಗಿ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಅ.10ರಂದು ತಿಳಿಸಿತ್ತು. ಮೊಬೈಲ್​ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಹೀಗಾಗಿ ಯಾರೂ ಗಾಬರಿ ಪಡಬೇಕಿಲ್ಲ. ಇದು ಸರ್ಕಾರದ ವತಿಯಿಂದಲೇ ನಡೆಯುತ್ತಿರುವ ಪರೀಕ್ಷೆಯಾಗಿದೆ ಎಂದು ಹೇಳಿತ್ತು.

ಏನಿದು ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​? : ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಮ್ಮ ನಾಗರಿಕರ ಅಮೂಲ್ಯವಾದ ಪ್ರಾಣವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಈ ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತದ ನಾಗರಿಕರು ಮತ್ತು ಸಮುದಾಯಗಳ ಸುರಕ್ಷತೆಗೆ ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net