ಟ್ರೋಲಿಂಗ್‌ಗೆ ಹೆದರಿದ್ರಾ ವಿಜಯ್-ರಶ್ಮಿಕಾ? ಮಾಸ್ಕ್-ಕ್ಯಾಪ್ ಹಾಕಿ ಪ್ರತ್ಯಕ್ಷರಾದ ನವಜೋಡಿಯ ವಿಡಿಯೋ ವೈರಲ್! | Rashmika Vijay masked

Rashmika Mandanna-Vijay Deverakonda
ಮುಖ ಮುಚ್ಚಿಕೊಂಡು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ವಿಜಯ್
Published on: 
Summary

'ಕಾಫಿ ವಿತ್ ಕರಣ್' ವಿವಾದದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಜಯ್-ರಶ್ಮಿಕಾ

ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಮುಖ ಮರೆಸಿಕೊಂಡ ದಂಪತಿ

ಮಾಧ್ಯಮದವರು, ಅಭಿಮಾನಿಗಳನ್ನು ಮಾತನಾಡಿಸದೆ ಏರ್‌ಪೋರ್ಟ್ ಒಳಹೋದ ಜೋಡಿ

Koffee With Karan controversy: 'ಕಾಫಿ ವಿತ್ ಕರಣ್' ವಿವಾದದ ಬಳಿಕ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರ ಸತತ ಟ್ರೋಲಿಂಗ್‌ ನಂತರ ಮೊದಲ ಬಾರಿಗೆ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷರಾಗಿರುವ ಈ ನವದಂಪತಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷರಾದ ವಿಜಯ್-ರಶ್ಮಿಕಾ, ಮಾಸ್ಕ್ ಮತ್ತು ಕ್ಯಾಪ್ ಹಾಕಿ ಮುಖ ಮರೆಸಿಕೊಂಡಿದ್ದರು. ಮಾಧ್ಯಮದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಅವಸರದಲ್ಲೇ ಒಳಗಡೆ ಹೋದ ಈ ಜೋಡಿ, ಅಭಿಮಾನಿಗಳತ್ತಲೂ ಗಮನ ಕೊಡಲಿಲ್ಲ. ಇದನ್ನು ಕಂಡ ನೆಟ್ಟಿಗರು, ‘ಟ್ರೋಲಿಂಗ್‌ಗೆ ಭಯ ಬಿದ್ದು ಮುಖ ಮುಚ್ಚಿಕೊಂಡು ಓಡ್ತಿದ್ದಾರೆ’ ಅಂತ ಟೀಕಿಸುತ್ತಿದ್ದಾರೆ.

ಸ್ವಲ್ಪ ದಿನದ ಹಿಂದೆ ಕರಣ್ ಜೋಹರ್ ಶೋನಲ್ಲಿ ಈ ಜೋಡಿ ತಮ್ಮ ಪ್ರೀತಿ, ಪ್ರಪೋಸಲ್ ಕಥೆ ಎಲ್ಲ ಬಿಚ್ಚಿಟ್ಟಿದ್ದರು. ಅದರಲ್ಲಿ ವಿಜಯ್, ‘ರಶ್ಮಿಕಾ ಮದುವೆ ಮಾಡ್ಕೋ ಅಂತ ವರ್ಷದಿಂದ ಹಿಂದೆ ಬಿದ್ದಿದ್ಲು, ನೂರು ಸಲ ಕೇಳಿದ್ಮೇಲೆ ಯೋಚಿಸ್ತೀನಿ ಅಂದಿದ್ದೆ’ ಅಂದಿದ್ದರು ಅಷ್ಟೇ, ಈ ಮಾತನ್ನೇ ಹಿಡಿದುಕೊಂಡು ನೆಟ್ಟಿಗರು ವಿಜಯ್‌ಗೆ 'ರೆಡ್ ಫ್ಲ್ಯಾಗ್' ಅಂದರು, ರಶ್ಮಿಕಾಳನ್ನು 'ಕ್ರಿಂಜಿ' ಅಂತ ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು

ಇದನ್ನೂ ಓದಿ: ಮಳೆ ಅಡ್ಡಿಯಿಂದ ಡಿಎಲ್​ಎಸ್​ ವಿಧಾನ! ಕಿವೀಸ್​ ಎದುರು 2ನೇ ಏಕದಿನ ಪಂದ್ಯ ಗೆದ್ದ ಭಾರತ | IND vs NZ ODI

ಸಿಕ್ಕಾಪಟ್ಟೆ ಟ್ರೋಲ್ ಆದಾಗ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ತಮ್ಮ ಪತಿಯನ್ನು ಸಮರ್ಥಿಸಿಕೊಂಡಿದ್ದರು. ವಿಜಯ್ ಕೂಡ ಟ್ರೋಲರ್‌ಗಳಿಗೆ ಸರಿಯಾಗಿಯೇ ತಿರುಗೇಟು ನೀಡಿದ್ರು. ಇಷ್ಟೆಲ್ಲಾ ಡ್ರಾಮಾ ಆದ್ಮೇಲೆ, ಇಬ್ಬರೂ ಏರ್‌ಪೋರ್ಟ್‌ನಲ್ಲಿ ಮುಖ ಮರೆಸಿಕೊಂಡು ಹೋಗಿರೋದು ಜನರಲ್ಲಿ ಮತ್ತೆ ಹೊಸ ಚರ್ಚೆ ಶುರುವಾಗೋಕೆ ಕಾರಣವಾಗಿದೆ.