ಮಳೆ ಅಡ್ಡಿಯಿಂದ ಡಿಎಲ್​ಎಸ್​ ವಿಧಾನ! ಕಿವೀಸ್​ ಎದುರು 2ನೇ ಏಕದಿನ ಪಂದ್ಯ ಗೆದ್ದ ಭಾರತ | IND vs NZ ODI

Untitled IND vs NZ ODI
ಮಳೆ ಅಡ್ಡಿಯಿಂದ ಡಿಎಲ್​ಎಸ್​ ವಿಧಾನ! ಕಿವೀಸ್​ ಎದುರು 2ನೇ ಏಕದಿನ ಪಂದ್ಯ ಗೆದ್ದ ಭಾರತ | IND vs NZ ODI
Published on: 

IND vs NZ ODI: ವೆಲ್ಲಿಂಗ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ವಿಪರೀತ ಮಳೆ ಅಡಚಣೆ ಉಂಟು ಮಾಡಿದ ಹಿನ್ನೆಲೆ ಡಕ್‌ವರ್ತ್-ಲೂಯಿಸ್ ವಿಧಾನದಡಿ ಭಾರತ 4 ರನ್‌ಗಳಿಂದ ಗೆದ್ದು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ನ್ಯೂಜಿಲೆಂಡ್​ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್​ ಮಾಡಿ ಕಿವೀಸ್​, ವರುಣನ ಅಡ್ಡಿಯಿಂದ 135 ರನ್‌ಗಳ ಗುರಿಯನ್ನು ಕೊಡಲಷ್ಟೇ ಶಕ್ತವಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 26 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಈ ಹಂತದಲ್ಲಿ ಮತ್ತೇ ಮಳೆಯಿಂದ ಅಡಚಣೆ ಉಂಟಾಯಿತು.

ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯವನ್ನು 20 ಓವರ್‌ಗಳ ಬಳಿಕ ಇಳಿಸಲಾಯಿತು. ನಂತರ ಡಕ್‌ವರ್ತ್‌ ಲೂಯಿಸ್‌ ವಿಧಾನವನ್ನು ಜಾರಿಗೊಳಿಸಲಾಯಿತು. ಅದರ ಅನ್ವಯ, ಭಾರತ 26 ಓವರ್‌ಗಳಲ್ಲಿ 109 ರನ್ ಗಳಿಸಬೇಕಿತ್ತು. ಅಂತಿಮವಾಗಿ ಟೀಮ್​ ಇಂಡಿಯಾ ಇನ್ನೂ 4 ರನ್ ಗಳಿಸಿದ್ದ ಹಿನ್ನೆಲೆ ಭಾರತ ಎರಡನೇ ಪಂದ್ಯವನ್ನು ಗೆದ್ದು ಬೀಗಿತು.

ಟೀಮ್ ಇಂಡಿಯಾ ಬ್ಯಾಟಿಂಗ್​ ವಿವರ

ಭಾರತ ಪರ ಬ್ಯಾಟಿಂಗ್ ಮಾಡಿದ ಬ್ಯಾಟರ್​ಗಳ ಪೈಕಿ ಶ್ರೇಯಸ್ ಅಯ್ಯರ್ (30 ರನ್​, 46 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್), ರೋಹಿತ್ ಶರ್ಮಾ (23 ರನ್​, 28 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್), ಕೆ.ಎಲ್. ರಾಹುಲ್ (ಅಜೇಯ 26 ರನ್​, 38 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್) ತಂಡದ ಪರ ಉತ್ತಮ ಪ್ರದರ್ಶನ ನೀಡಿದರು. ಇನ್ನು ನಾಯಕ ಶುಭಮನ್ ಗಿಲ್ ಬಹುಬೇಗನೇ ಔಟಾದರೆ, ವಿರಾಟ್ ಕೊಹ್ಲಿ ಕೇವಲ 7 ರನ್​ಗೆ ಪೆವಿಲಿಯನ್​ ಹಾದಿ ಹಿಡಿದರು. ನ್ಯೂಜಿಲೆಂಡ್ ಪರ ಬೌಲಿಂಗ್​ನಲ್ಲಿ ಕೈಲ್ ಜೇಮಿಸನ್ ಮತ್ತು ಜಾಕೋಬ್ ಡಫಿ ತಲಾ ಮೂರು ವಿಕೆಟ್ ಕಬಳಿಸಿದರೆ, ಮ್ಯಾಥ್ಯೂ ಫಿಶರ್ ಒಂದು ವಿಕೆಟ್ ಪಡೆದರು.

Also Read
ಧನುಷ್​ ಬೆನ್ನಿಗೆ ನಿಂತಿದೆ ಬಿಜೆಪಿ! ತಮಿಳು ರಾಜಕೀಯ ಎಂಟ್ರಿ ವದಂತಿ ಬೆನ್ನಲ್ಲೇ ನಟನ ಶಾಕಿಂಗ್ ಹೇಳಿಕೆ ವೈರಲ್​ | Actor Dhanush
Untitled IND vs NZ ODI

ಇದಕ್ಕೂ ಮುನ್ನ ಮಳೆಯಿಂದಾಗಿ ಪಂದ್ಯವನ್ನು 47 ಓವರ್‌ಗಳಿಗೆ ಕಡಿತಗೊಳಿಸಿದಾಗ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 41 ಓವರ್‌ಗಳಲ್ಲಿ 134 ರನ್‌ಗೆ ಆಲೌಟ್ ಆಯಿತು. ಕಿವೀಸ್ ಪರ ಡೆರಿಲ್ ಮಿಚೆಲ್ (55 ರನ್​, 104 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ನಾಯಕ ಮಿಚೆಲ್ ಸ್ಯಾಂಟ್ನರ್ (31 ರನ್​, 38 ಎಸೆತ, 1 ಬೌಂಡರಿ, 2 ಸಿಕ್ಸರ್) ಅಬ್ಬರಿಸಿದರು. ಹೆನ್ರಿ ನಿಕೋಲ್ಸ್ (11) ಮಾತ್ರ ಎರಡಂಕಿ ತಲುಪಿದ ಇತರ ಬ್ಯಾಟ್ಸ್‌ಮನ್. ವಿಲ್ ಯಂಗ್ (6), ಟಿಮ್ ಸೀಫರ್ಟ್ (0), ಟಾಮ್ ಲ್ಯಾಥಮ್ (7), ಗ್ಲೆನ್ ಫಿಲಿಪ್ಸ್ (0), ಮತ್ತು ನಾಥನ್ ಸ್ಮಿತ್ (3) ಸ್ಕೋರ್ ಮಾಡಲು ವಿಫಲರಾದರು. ಭಾರತದ ಬೌಲರ್‌ಗಳಲ್ಲಿ ಗುರ್ನೂರ್ ಬ್ರಾರ್ ನಾಲ್ಕು ವಿಕೆಟ್ ಪಡೆದರೆ, ಅಕಿಲ್ ನಬಿ, ಅಕ್ಷರ್ ಪಟೇಲ್ ಮತ್ತು ಅನ್ಶುಲ್ ಕಂಬೋಬ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.