ದೇಶದ ಮಾನ ತೆಗೆದ್ರಾ ಇವರು? ಅರ್ಮೇನಿಯಾದಲ್ಲಿ ಬಾಲಕಿಯರಿಗೆ ಕಿರುಕುಳ ನೀಡಿದ ವಿಡಿಯೋ ವೈರಲ್ | Indian men in Armenia

Indecent behavior by Indians in Armenia
ಅರ್ಮೇನಿಯಾದಲ್ಲಿ ಭಾರತೀಯರಿಂದ ಅಸಭ್ಯ ವರ್ತನೆ
Published on: 

Harassing minor girls Armenia: ಅರ್ಮೇನಿಯಾದಲ್ಲಿ ನಡೆದ ಹಬ್ಬವೊಂದರಲ್ಲಿ ಭಾರತೀಯರು ಎನ್ನಲಾದ ಗುಂಪೊಂದು ಅಪ್ರಾಪ್ತ ಹುಡುಗಿಯರ ಮೇಲೆ ಬಲವಂತವಾಗಿ ನೀರೆರಚಿ ತಂಟೆ ಮಾಡಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ಈ ಘಟನೆಯನ್ನು ಕಂಡ ನೆಟ್ಟಿಗರು, "ಇಂಥ ನಡವಳಿಕೆಯಿಂದ ವಿದೇಶದಲ್ಲಿ ನಮ್ಮ ದೇಶದ ಮಾನ ಹರಾಜಾಗ್ತಿದೆ" ಅಂತ ಫುಲ್ ಗರಂ ಆಗಿ ಕಾಮೆಂಟ್ ಮಾಡ್ತಿದ್ದಾರೆ.

ಸ್ಥಳೀಯ ಸಾಂಪ್ರದಾಯಿಕ ಆಚರಣೆಯಲ್ಲಿ ಭಾಗವಹಿಸಿದ್ದ ಬಾಲಕಿಯರ ಇಷ್ಟಕ್ಕೆ ವಿರುದ್ಧವಾಗಿ ವ್ಯಕ್ತಿಗಳ ಗುಂಪೊಂದು ಅವರ ಮೇಲೆ ನೀರೆರಚಿದೆ. ಈ ಸಂಪೂರ್ಣ ಕೃತ್ಯವನ್ನು ತಾವೇ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬಾಲಕಿಯರು ಅನುಭವಿಸುತ್ತಿರುವ ಅಸ್ವಸ್ಥತೆ ಹಾಗೂ ಮುಜುಗರ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾಲತಾಣಗಳಲ್ಲಿ ನೆಟ್ಟಿಗರು ಸಾಲು ಸಾಲು ಕಾಮೆಂಟ್‌ಗಳ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ‘ಕ್ಯಾಮೆರಾ ಮುಂಭಾಗದಲ್ಲೇ ಹೀಗೆ ನಡೆದುಕೊಳ್ಳುವ ಇವರು, ಕ್ಯಾಮೆರಾ ಇಲ್ಲದಿದ್ದಾಗ ಇನ್ನೇನು ಮಾಡುತ್ತಾರೋ?’ ಎಂದು ಕೆಲವರು ಪ್ರಶ್ನಿಸಿದ್ದರೆ, ಇನ್ನು ಕೆಲವರು "ಇಂಥ ನಡವಳಿಕೆಯಿಂದ ವಿದೇಶಗಳಲ್ಲಿ ಭಾರತದ ಹೆಸರಿಗೆ ಧಕ್ಕೆ ತರುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೋಲಿಂಗ್‌ಗೆ ಹೆದರಿದ್ರಾ ವಿಜಯ್-ರಶ್ಮಿಕಾ? ಮಾಸ್ಕ್-ಕ್ಯಾಪ್ ಹಾಕಿ ಪ್ರತ್ಯಕ್ಷರಾದ ನವಜೋಡಿಯ ವಿಡಿಯೋ ವೈರಲ್! | Rashmika Vijay masked

ಭಾರತದ ಹೋಳಿ ಆಚರಣೆಯಂತೆ ಇಲ್ಲೂ ನಡೆದುಕೊಂಡಿದ್ದಾರೆ, ಇವರಿಗೆ ಒಪ್ಪಿಗೆಯ (Consent) ಪರಿಕಲ್ಪನೆಯೇ ತಿಳಿದಿಲ್ಲ ಎಂದು ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ. ಜೊತೆಗೆ ಇಂತಹ ವ್ಯಕ್ತಿಗಳು ವಿದೇಶಕ್ಕೆ ತೆರಳಲು ಹೇಗೆ ಸಾಧ್ಯವಾಯಿತು ಮತ್ತು ಅವರ ಜೀವನೋಪಾಯವೇನು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.