ಕ್ಲಬ್​ ಉದ್ಘಾಟನೆಗೆಂದು ತೆರಳಿದ್ದ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ; ಅಸಲಿಗೆ ನಡೆದಿದ್ದಾರೇನು?

Pooja Hegde
Published on

ಮುಂಬೈ: ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ನಟಿ, ಮಂಗಳೂರು ಮೂಲದ ಬೆಡಗಿ ಪುಜಾ ಹೆಗ್ಡೆ ಕುರಿತು ಶಾಕಿಂಗ್​ ಸುದ್ದಿ ಒಂದು ಹೊರಬಿದ್ದಿದ್ದು, ನಟಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ದುಬೈಗೆ ತೆರಳಿದ್ದ ಪೂಜಾ ಕ್ಲಬ್​ ಒಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ವಿಚಾರ ಒಂದಕ್ಕೆ ಜಗಳವಾಡಿದ್ದರು ಎಂದು ಹೇಳಲಾಗಿದೆ. ಈ ಕಾರಣಕ್ಕೆ ಅವರಿಗೆ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ. ಗಲಾಟೆ ಬಳಿಕ ಭಾರತಕ್ಕೆ ಮರಳಿರುವ ಪೂಜಾ ಅವರೊಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ನಟಿಯ ಆಪ್ತರೊಬ್ಬರು ದುಬೈನಲ್ಲಿ ಪೂಜಾ ಕ್ಲಬ್​ ಒಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಆದರೆ, ಅಲ್ಲಿ ಏನು ನಡೆದಿಲ್ಲ ಮತ್ತು ಯಾರು ಸಹ ಅವರಿಗೆ ಜೀವ ಬೆದರಿಕೆ ಹಾಕಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ರೀತಿಯ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಲಬ್​ ಉದ್ಘಾಟನೆಗೆ ತೆರಳಿದ್ದ ವೇಳೆ ಪೂಜಾ ಹೆಗ್ಡೆ ಜಗಳ ಮಾಡಿಕೊಂಡರು ಎಂಬ ಗಾಳಿ ಸುದ್ದಿ ಹರಡಿತು. ಜಗಳದ ಬಳಿಕ ಅವರಿಗೆ ಜೀವ ಬೆದರಿಕೆ ಹಾಕಲಾಯಿತು ಎಂಬ ವಿಷಯ ಕೇಳಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದರು. ಆದರೆ, ಕೊಲೆ ಬೆದರಿಕೆಯ ಸುದ್ದಿ ನಿಜವಲ್ಲ ಎಂದು ತಿಳಿದ ಕೂಡಲೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net