ಶಿಖರ್ ಜತೆಗಿನ ಪ್ರೇಮ ಸಂಬಂಧ ವದಂತಿ! ಕಡೆಗೂ ಇದು ಸತ್ಯ ಅಂತ ಹೇಳಿಬಿಟ್ರು ನಟಿ ಜಾನ್ವಿ ಕಪೂರ್?

ವಿಜಯವಾಣಿ - 2024-01-01T173627.223
Published on

ಮುಂಬೈ: ಬಾಲಿವುಡ್​ನ ಹೆಸರಾಂತ ನಿರ್ದೇಶಕ, ನಿರ್ಮಾಪಕರಾದ ಕರಣ್ ಜೋಹರ್​ ಇದೀಗ ತಾವು ನಡೆಸಿಕೊಡುವ ಖ್ಯಾತ ಟಾಕ್ ಶೋ 'ಕಾಫಿ ವಿತ್​ ಕರಣ್' ಸೀಸನ್​ 8ಕ್ಕೆ ಹೆಜ್ಜೆಯಿಟ್ಟಿದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿ ಸೆಲೆಬ್ರಿಟಿಗಳ ಜೀವನಶೈಲಿ ಹಾಗೂ ಅವರ ರಹಸ್ಯಗಳನ್ನು ಮಾತಿನ ಮುಖೇನ ಬಹಿರಂಗಗೊಳಿಸುವ ಕೆಲಸವನ್ನು ಕರಣ್​ ಈ ಶೋ ಮೂಲಕ ಅತ್ಯಂತ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಈ ಬಾರಿ ಶ್ರೀದೇವಿ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್​ ಸಖತ್ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದು, ಅವರಿಂದಲೂ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಕರಣ್ ಬಟಾಬಯಲು ಮಾಡಿದ್ದಾರೆ.

'ಕಾಫಿ ವಿಥ್ ಕರಣ್' ಸೀಸನ್​ 8ರ ವೀಕ್ಷಕರು ಈ ಬಾರಿ ಹೊಸ ವರ್ಷದ ಸಂಭ್ರಮದಂದು ಯಾವ ಸೆಲೆಬ್ರಿಟಿ ಜೋಡಿಗಳು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದರು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಪ್ರೋಮೋ ಅದಕ್ಕೆ ಸಾಕ್ಷಿಯಾಗಿದೆ. ಹೊಸದಾಗಿ ರಿಲೀಸ್ ಆದ ಪ್ರೋಮೋದಲ್ಲಿ ಶಿಖರ್ ಪಹಾರಿಯಾ ಮತ್ತು ಜಾನ್ವಿ ನಡುವಿನ ಪ್ರೀತಿ ಕುರಿತು ಸೋಷಿಯಲ್ ಮೀಡಿಯಾದಲ್ಲಿದ್ದ ವದಂತಿಗೆ ಸದ್ಯ ನಟಿಯೇ ಸ್ಪಷ್ಟನೆ ಕೊಟ್ಟುಬಿಟ್ರಾ? ಎಂಬುದು ಸದ್ಯ ವೀಕ್ಷಕರಿಗೆ ಭಾರೀ ಆಶ್ವರ್ಯವನ್ನು ತಂದೊಡ್ಡಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು? ವದಂತಿ ನಿಜ ಎಂದು ಹೇಳಿದ್ರಾ? ಇಲ್ಲಿದೆ ನೋಡಿ ಅಸಲಿ ಸಂಗತಿ.

ಮಿರ ಮಿರ ಮಿಂಚುವ ಉಡುಗೆಯಲ್ಲಿ ಕಂಗೊಳಿಸಿರುವ ನಟಿ ಜಾಹ್ನವಿ ಕಪೂರ್, ಶಿಖರ್ ಪಹಾರಿಯಾ ಅವರೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಇದ್ದ ಅನುಮಾನಗಳ ಕುರಿತು ಪರೋಕ್ಷವಾಗಿ ಸುಳಿವು ಕೊಟ್ಟರು ಎಂಬುದು ಸದ್ಯದ ಮಾತು. ಎಂದಿನಂತೆ ತಮ್ಮ ಕಾರ್ಯಕ್ರಮದ ಸೆಗ್ಮೆಂಟ್ ನಡೆಸುತ್ತಿದ್ದ ಕರಣ್, ನಿಮ್ಮ ಸ್ಪೀಡ್ ಡಯಲ್‌ನಲ್ಲಿ ಇರುವ ಮೂರು ಜನರು ಯಾರು? ಅವರ ಹೆಸರನ್ನು ಬಹಿರಂಗಪಡಿಸಿ ಎಂದು ಹೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಜಾಹ್ನವಿ, ಮೊದಲು ನನ್ನ ತಂದೆ ಬೋನಿ ಕಪೂರ್, ತಂಗಿ ಖುಷಿ ಎಂದ ಬಳಿಕ ಬಾಯ್ತಪ್ಪಿ "ಶಿಖು" (ಶಿಖರ್ ಪಹಾರಿಯಾ) ಎಂದು ಹೇಳಿದರು. ಹೀಗಂದ ತಕ್ಷಣ ತಪ್ಪಾಗಿ ಹೇಳಿದೆ ಎನ್ನುವ ರೀತಿ ಬಿಂಬಿಸಿದ್ದು, ಸದ್ಯ ವೀಕ್ಷಕರಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಜತೆಗೆ ಪ್ರೇಮ ಸಂಬಂಧದ ವದಂತಿ ನಿಜ ಎಂಬುದನ್ನು ನಟಿ ಖಚಿತಪಡಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಸದ್ಯ ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net