

ಮೇಷ:ಹೊಸ ವ್ಯವಹಾರಗಳಿಂದ ಹಣ ಸಿಗಲಿದೆ. ವಾಣಿಜ್ಯ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲು ಏರಲಿದ್ದೀರಿ. ಅನವಶ್ಯಕ ದುಂದು ವೆಚ್ಚ. ಶುಭಸಂಖ್ಯೆ: 9
ವೃಷಭ:ಕೈಗಾರಿಕಾ ಉದ್ಯಮಿಗಳಿಗೆ ಅಧಿಕ ಲಾಭ. ಅಪರಿಚಿತರ ವಿಷಯದಲ್ಲಿ ಜಾಗ್ರತೆ. ಕುತಂತ್ರದಿಂದ ಹಣ ಸಂಪಾದನೆಗೆ ಮನಸ್ಸು. ಶುಭಸಂಖ್ಯೆ: 1
ಮಿಥುನ:ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ. ನಿಮ್ಮ ನಿರ್ಧಾರಕ್ಕೆ ಮಿತ್ರರ ಬೆಂಬಲ. ಕಾರ್ಯ ವಿಕಲ್ಪ. ಶುಭಸಂಖ್ಯೆ: 5
ಕಟಕ:ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲಕರು ದಂಡ ಕಟ್ಟುವಿರಿ. ಮಾತುಗಳಿಂದ ಕಲಹ ಸಾಧ್ಯತೆ. ಸೌಜನ್ಯದಿಂದ ವರ್ತಿಸಿ. ಶುಭಸಂಖ್ಯೆ:9
ಸಿಂಹ:ಅಂದುಕೊಂಡ ಗುರಿ ಸಾಧಿಸುವಿರಿ. ಪರರಿಗೆ ಸಹಾನುಭೂತಿ ತೋರುವಿರಿ. ಸುಖ ಭೋಜನ. ವಿಪರೀತ ಖರ್ಚು ಆಗಬಹುದು. ಶುಭಸಂಖ್ಯೆ:4
ಕನ್ಯಾ:ರಾಜಕೀಯ ಕ್ಷೇತ್ರದವರಿಗೆ ಗೊಂದಲ. ದೈವಿಕ ಚಿಂತನೆ. ಕೋಪದಿಂದ ಬಾಂಧವರೊಂದಿಗೆ ಮನಸ್ತಾಪ. ಶರೀರದಲ್ಲಿ ಆಯಾಸ. ಶುಭಸಂಖ್ಯೆ: 8
ತುಲಾ:ಋಣಮುಕ್ತರಾಗಲು ಅವಕಾಶ ಸಿಗಲಿದೆ. ಸುಳ್ಳು ಮಾತಿನಿಂದಾಗಿ ಸಂಗಾತಿಯೊಂದಿಗೆ ವಿರಸ. ಕೃಷಿಕರಿಗೆ ಅಲ್ಪ ಪ್ರಮಾಣದ ಲಾಭ. ಶುಭಸಂಖ್ಯೆ:7
ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ. ಪತಿಗೆ ಆರೋಗ್ಯದ ಸಮಸ್ಯೆ. ಉದ್ಯೋಗದಲ್ಲಿ ಬದಲಾವಣೆ. ಸ್ಥಿರಾಸ್ತಿ ಮಾರಾಟಕ್ಕೆ ತೊಂದರೆ. ಶುಭಸಂಖ್ಯೆ: 8
ಧನುಸ್ಸು: ವಿವಿಧ ರೀತಿಯ ಗೊಂದಲದೊಂದಿಗೆ ಹೊಸ ಮನೆಯ ಪ್ರವೇಶ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಹಣ ಬಂದರೂ ಉಳಿಯದು. ಶುಭಸಂಖ್ಯೆ:1
ಮಕರ:ರಫ್ತು ಮಾರಾಟದಿಂದ ಲಾಭ. ಬಣ್ಣದ ಮಾತಿಗೆ ಮರುಳಾಗದಿರಿ. ಹಾರ್ಡ್ವೇರ್ ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ:2
ಕುಂಭ:ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಮನೆಯವರ ಭಾವನೆಗಳಿಗೆ ಸ್ಪಂದಿಸುವಿರಿ. ತೀರ್ಥಯಾತೆ್ರ. ಅನಾರೋಗ್ಯ ಭೀತಿ. ಶುಭಸಂಖ್ಯೆ:6
ಮೀನ: ವಕೀಲರಿಗೆ ವಿಶೇಷ ದಿನ. ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಭಾಗಿಯಾಗುವಿರಿ. ಸ್ನೇಹಿತನಿಂದ ವಂಚನೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 9