ಹಾವೇರಿ: ಜಿಲ್ಲೆಯಲ್ಲಿ ಕೆ.ಪಿ.ಎಂ.ಇ. ನೋಂದಣಿ ಪ್ರಮಾಣಪತ್ರ ಪಡೆಯದೆ ಖಾಸಗಿ ವೈದ್ಯ ವೃತ್ತಿ ನಡೆಸುತ್ತಿರುವುದು ಕಂಡುಬಂದಿದ್ದು, ಕೂಡಲೇ ನೋಂದಣಿ ಮಾಡಿಸಿ ಖಾಸಗಿ ವೈದ್ಯ ವೃತ್ತಿ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ಅನುಮತಿ ಇಲ್ಲದೆ ವೈದ್ಯರು ವೈದ್ಯ ವೃತ್ತಿ ನಡೆಸುವುದು ಕಾನೂನಿನನ್ವಯ ಅಪರಾಧವಾಗಿದ್ದು, ಇಂತಹ ವೈದ್ಯರು ತಕ್ಷಣವೇ ಅಧನಧೀಕೃತ ಕ್ಲಿನಿಕ್‌ಗಳನ್ನು ಬಂದ್ ಮಾಡಬೇಕು. ನೋಂದಣಿ ಮತ್ತು ನವೀಕರಣ ಇಲ್ಲದೆ ವೃತ್ತಿ ನಡೆಸಿದಲ್ಲಿ ಕೆಪಿಎಂಇ ಸೆಕ್ಸನ್ 19(1) ಪ್ರಕಾರ 10 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ದಂಡವಿಧಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ತಿದ್ದುಪಡಿ ಆದೇಶ 2009 ಹಾಗೂ 2018ರ ನಿಯಮದನ್ವಯ ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳಾದ ಕ್ಲಿನಿಕ್‌ಗಳು, ಲ್ಯಾಬೋರೇಟರಿಗಳು ಹಾಗೂ ನರ್ಸಿಂಗ್ ಹೋಂಗಳು ನೋಂದಣಿಯನ್ನು ಪಡೆದು ಖಾಸಗಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಸಾರ್ವಜನಿಕರು ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪ್ರಕಟಣೆಯಲ್ಲಿ ಕೋರಲಾಗಿದೆ.