ನಿಜವಾಯ್ತು ಧಾರವಾಡದ ಗೊಂಬೆ ಭವಿಷ್ಯ!

bombe bhavisghya
Published on

ಧಾರವಾಡ: ಧಾರವಾಡದ ಗೊಂಬೆ ಭವಿಷ್ಯ ನಿಜವಾಗಿದ್ದು ಈ ಹಿಂದೆಯೇ ಸರ್ಕಾರ ಬದಲಾವಣೆಯ ಮುನ್ಸೂಚನೆಯನ್ನು ಮಣ್ಣಿನ ಗೊಂಬೆಗಳು ನೀಡಿದ್ದ‌ವು.

ಯುಗಾದಿ ಸಮಯದಲ್ಲಿ ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿ ಮಣ್ಣಿನ ಗೊಂಬೆಗಳ ಮೂಲಕ ರಾಜಕೀಯ ಭವಿಷ್ಯ ನುಡಿಯಲಾಗುತ್ತದೆ. ಮಾರ್ಚ್ 22ರಂದು ಸರ್ಕಾರ ಬದಲಿಯ ಭವಿಷ್ಯ ನುಡಿಯಲಾಗಿತ್ತು. ಯುಗಾದಿಯ ಮರುದಿನ ಈ ಭವಿಷ್ಯ ಕಂಡು ಬಂದಿದ್ದು ಒಂದೊಂದು ದಿಕ್ಕಿಗೆ ಒಂದೊಂದು ಸೇನಾಧಿಪತಿ ಗೊಂಬೆ ಪ್ರತಿಷ್ಠಾಪನೆ ಮಾಡಲಾಗಿತ್ತು.

ಆ ಪೈಕಿ ಕರ್ನಾಟಕ ದಿಕ್ಕಿನ ಗೊಂಬೆಗೆ ಧಕ್ಕೆ ಆಗಿದ್ದು ಗೊಂಬೆಯ ಕಾಲಿಗೆ ಏಟು ಬಿದ್ದು ತಲೆ ಮೇಲಿನ ಟೋಪಿ ಹಿಂದಕ್ಕೆ ಸರಿದಿತ್ತು. ಆಗಲೇ ಸರ್ಕಾರ ಬದಲಾವಣೆ ನಿಶ್ಚಿತ ಎಂದು ಗ್ರಾಮಸ್ಥರು ಹೇಳಿದ್ದರು. ಈ ಬದಲಾವಣೆ ಒಂದೂವರೆ ತಿಂಗಳು ಮುಂಚಿತವಾಗಿ ತಿಳಿದಿದ್ದು

ಬಿಎಸ್‌ವೈ ಅಧಿಕಾರ ಕಳೆದುಕೊಳ್ಳುವುದನ್ನೂ ಭವಿಷ್ಯ ತೋರಿಸಿತ್ತು. 2021ರ ಏಪ್ರಿಲ್ 14ರಂದು ಈ ಭವಿಷ್ಯ ಕಂಡು ಬಂದಿದ್ದು ಅದರಂತೆಯೇ ಬಿಎಸ್‌ವೈ ಅಧಿಕಾರ ಕಳೆದುಕೊಂಡಿದ್ದರು. ಈ ಹಿಂದೆ ಇಂದಿರಾ ಗಾಂಧಿ ಹತ್ಯೆಯೂ ಭವಿಷ್ಯ ಬೊಂಬೆ ಭವಿಷ್ಯದಲ್ಲಿ ಗೋಚರಿಸಿತ್ತು. ಈ ಬಾರಿ ದೆಹಲಿ ದಿಕ್ಕಿನ ಗೊಂಬೆ ಕೆಳಗೆ ಬಿದ್ದಿದ್ದು ಆಗ ದೆಹಲಿ ನಾಯಕರಿಗೆ ಆಪತ್ತು ಎಂದು ಗ್ರಾಮಸ್ಥರು ಅರಿತಿದ್ದರು.

ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಗೊಂಬೆ ಭವಿಷ್ಯ ಹನುಮನಕೊಪ್ಪದ ತುಪ್ಪರಿಹಳ್ಳದಲ್ಲಿ ನಡೆಯುತ್ತದೆ. ಯುಗಾದಿಯ ಅಮಾವಾಸ್ಯೆ ರಾತ್ರಿಯಂದು ಗ್ರಾಮಸ್ಥರು ಗೊಂಬೆ ಮಾಡಿಟ್ಟು ಬರುತ್ತಾರೆ. ಮರುದಿನ ನಸುಕಿನ ಜಾವ ಹೋಗಿ ಗೊಂಬೆಗಳ ಪರಿಸಿಸ್ಥಿತಿ ನೋಡುವ ಗ್ರಾಮಸ್ಥರು ಮಳೆ ಬೆಳೆ, ಆಹಾರ ಉನ್ನತಿ ಹಾಗೂ ಅದರೊಂದಿಗೆ ರಾಜಕೀಯ ಭವಿಷ್ಯವನ್ನೂ ನೋಡುವ ಗ್ರಾಮಸ್ಥರು ನೋಡುತ್ತಾರೆ. ಈ ಹಿಂದೆ ತಮ್ಮೂರಿನ ಭವಿಷ್ಯದ ಗ್ಯಾರಂಟಿ ಬಗ್ಗೆ ಗ್ರಾಮಸ್ಥರು ಸವಾಲು ಹಾಕಿದ್ದರು. ಈ ಮೂಲಕ ಈ ಸವಾಲಿನಲ್ಲಿಯೂ ಹನುಮನಕೊಪ್ಪದ ಭವಿಷ್ಯ ಗೆದ್ದಿದೆ ಎಂದೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net