PHOTO VIRAL | ಜೇಮ್ಸ್​ ಬಾಂಡ್ ರೀತಿ ಪೋಸ್ ಕೊಟ್ಟ ವಿದೇಶಾಂಗ ಸಚಿವ ಎಸ್ ಜೈಶಂಕರ್!

s jaishankar
Published on

ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್​ ಜೈಶಂಕರ್, ಸಚಿವರಾದ ಮೇಲೆ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ತಮ್ಮ ಖಡಕ್ ವಿದೇಶಾಂಗ ನೀತಿ ಹಾಗೂ ಭಾಷಣಗಳ ಮೂಲಕ ಕೋಟ್ಯಾಂತರ ಭಾರತೀಯ ನೆಟ್ಟಿಗರ ಮನ ಗೆದ್ದವರು ಇವರು.

ಇದೀಗ ಎಸ್. ಜೈಶಂಕರ್, ಗಾಗಲ್ಸ್ ಹಾಕಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು ಅವರ ಪೋಸ್, ಯಾವುದೇ ಸಿನಿಮಾ ಸ್ಟಾರ್​​ಗೆ ಕಮ್ಮಿ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ವಿಭಾಗಗಳಲ್ಲಿ ಬರೆಯುತ್ತಿದ್ದಾರೆ.

ಈ ಫೋಟೊವನ್ನು ಸಚಿವ ಜೈಶಂಕರ್, ಸ್ವೀಡನ್​ನ ರಕ್ಷಣಾ ಸಚಿವರೊಂದಿಗೆ ತೆಗೆಸಿಕೊಂಡಿದ್ದು ಇಬ್ಬರೂ ಕರಿ ಸೂಟ್​ ಧರಿಸಿ ಮಿಂಚಿದ್ದಾರೆ. ಈ ಫೋಟೊದಲ್ಲಿ ಜೇಮ್ಸ್ ಬಾಂಡ್ ರೀತಿ ಗಾಗಲ್ಸ್ ಧರಿಸಿದ ಸಚಿವರ ಸೌಂದರ್ಯ ಪ್ರಜ್ಞಎಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಓರ್ವ ನೆಟ್ಟಿಗರು "Gangasta" ಎಂದು ಕಾಮೆಂಟ್​ ಬರೆದಿದ್ದು ಇನ್ನೊಬ್ಬರಂತೂ ಹಾಲಿವುಡ್​ನ ಟಾಮ್​ಕ್ರೂಸ್​ ಹಾಗೂ ಬ್ರಾಡ್​ ಪಿಟ್​ಗೂ ಸಚಿವರು ಸ್ಪರ್ಧೆ ಒಡ್ಡಬಲ್ಲರು ಎಂದು ಬರೆದಿದ್ದಾರೆ. ಒಬ್ಬರಂತೂ ಪ್ರಧಾನಿ ಮೋದಿಯ ಉಡುಗೆ ಶೈಲಿಯ ಪ್ರಭಾವ ನಿಮ್ಮಲ್ಲೂ ಕಾಣಿಸಿಕೊಂಡಿದೆ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net