ಸಮಾಜಕ್ಕೆ ಮಾದರಿಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ

bannikuppe
ಬನ್ನಿಕುಪ್ಪೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಸಾಂಬಸದಾಶಿವ ಸ್ವಾಮೀಜಿ ಮಹಿಳೆಯರಿಗೆ ಟೈಲರಿಂಗ್ ಮಷಿನ್ ವಿರಿಸಿದರು. ಗೋವಿಂದ ನಾಯ್ಕ, ಕೂಸಪ್ಪ, ಉಮೇಶ್, ಮುರಳೀಧರ್, ಸೋಮಶೇಖರ್ ಇದ್ದರು.
Published on

ಬನ್ನಿಕುಪ್ಪೆ: ಬಡವರು, ದೀನ ದಲಿತರ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಮಾದಹಳ್ಳಿಯ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಭಾನುವಾರ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬನ್ನಿಕುಪ್ಪೆ ವಲಯದ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ವೀರೇಂದ್ರ ಹೆಗ್ಗಡೆ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಹಬಾಗಿತ್ವ ಮುಖ್ಯ ಎಂದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳಿಧರ್, ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿದರು. ಸ್ವ ಉದ್ಯೋಗ ಪ್ರೇರಣೆ ಕಾರ್ಯಕ್ರಮದಡಿ 58 ಸದಸ್ಯರಿಗೆ ಟೈಲರಿಂಗ್ ಮಷಿನ್ ವಿತರಣೆ ಮಾಡಲಾಯಿತು. ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ ಸ್ವಸಹಾಯ ಸಂಘಗಳಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದನಾಯ್ಕ, ಏಳು ಹಳ್ಳಿಯ ಮುಖಂಡ ಕೊಸಪ್ಪ, ಜನಜಾಗೃತಿ ಸಮಿತಿ ಸದಸ್ಯರಾದ ಉಮೇಶ್, ಸಂಸ್ಥೆ ಯೋಜನಾಧಿಕಾರಿ ಧನಂಜಯ, ಗ್ರಾಪಂ ಸದಸ್ಯರಾದ ಲೋಕೇಶ್ , ಚಂದ್ರಶೇಖರ್, ನಿಂಗೇಗೌಡ, ವಲಯ ಮೇಲ್ವಿಚಾರಕಿ ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net