ಧರ್ಮಸ್ಥಳ ಸಂಸ್ಥೆ ಕಾರ್ಯ ಅನನ್ಯ

ಹುಣಸೂರು ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಆಯೋಜಿಸಿದ್ದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಸಭೆಯನ್ನು ಉದ್ಘಾಟಿಸಿದರು. ನೇರಳಕುಪ್ಪೆ ಮಹದೇವ್, ಬಿಳಿಕೆರೆ ಪ್ರಸನ್ನ, ಜಿಲ್ಲಾ ಯೋಜನಾಧಿಕಾರಿ ಮುರಳೀಧರ್, ತಾಲೂಕು ಯೋಜನಾಧಿಕಾರಿಗಳಾದ ಬಿ.ಧನಂಜಯ್, ನಾರಾಯಣಶೆಟ್ಟಿ ಇತರರಿದ್ದರು.
ಹುಣಸೂರು ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಆಯೋಜಿಸಿದ್ದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಸಭೆಯನ್ನು ಉದ್ಘಾಟಿಸಿದರು. ನೇರಳಕುಪ್ಪೆ ಮಹದೇವ್, ಬಿಳಿಕೆರೆ ಪ್ರಸನ್ನ, ಜಿಲ್ಲಾ ಯೋಜನಾಧಿಕಾರಿ ಮುರಳೀಧರ್, ತಾಲೂಕು ಯೋಜನಾಧಿಕಾರಿಗಳಾದ ಬಿ.ಧನಂಜಯ್, ನಾರಾಯಣಶೆಟ್ಟಿ ಇತರರಿದ್ದರು.
Published on

ಹುಣಸೂರು: ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಪಾತ್ರ ಅನನ್ಯವಾದದ್ದು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಹುಣಸೂರು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜನಜಾಗೃತಿ ವೇದಿಕೆಯಿಂದ ನಡೆಸುವ ಮದ್ಯಾವರ್ಜನಾ ಶಿಬಿರ, ಶಾಲಾ ಕಾಲೇಜು ಮಕ್ಕಳಿಗೆ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ, ಮಾದಕವಸ್ತು ಮತ್ತು ತಂಬಾಕು ವಿರೋಧಿ ದಿನಾಚರಣೆ, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಅತ್ಯಂತ ಪ್ರಮುಖವಾದ ಕಾರ್ಯಕ್ರಮವಾಗಿದೆ. ಮದ್ಯವರ್ಜನಾ ಶಿಬಿರದ ಮೂಲಕ ಕುಡಿತ ಬಿಟ್ಟ ನವಜೀವನ ಸಮಿತಿ ಸದಸ್ಯರ ಬಲವರ್ಧನೆ ಮಾಡಲು ಅನೇಕ ಕಾರ್ಯಕ್ರಮ ಜಾರಿಯಲ್ಲಿದ್ದು, ಇವೆಲ್ಲವೂ ಅತ್ಯಂತ ಸಾಮಾಜಿಕ ಕಳಕಳಿಯಿಂದ ಕೂಡಿದ ಕಾರ್ಯಕ್ರಮಗಳಾಗಿವೆ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗ್ರಾಮಾಬಿವೃದ್ಧಿ ಯೋಜನೆ ಪದಾಧಿಕಾರಿಗಳು ಕಟಿಬದ್ಧರಾಗಿ ದುಡಿಯುವುದರಿಂದ ಸಕಾರಾತ್ಮಕ ಫಲಿತಾಂಶಗಳು ಬರುತ್ತಿವೆ ಎಂದು ಶ್ಲಾಘಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್. ಮುರಳಿಧರ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ವೇದಿಕೆ ಮತ್ತು ಗ್ರಾಮಭಿವೃದ್ಧಿ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ವರ್ಷ ಹುಣಸೂರು ತಾಲೂಕಿನಲ್ಲಿ ಒಂದು ಮದ್ಯಾವರ್ಜನಾ ಶಿಬಿರ, 30 ಪ್ರೌಢಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ಧದ ಅರಿವು ಮೂಡಿಸುವ ಉದ್ದೇಶದಿಂದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮಗಳೊಂದಿಗೆ ಕಿರು ಚಿತ್ರ ಪ್ರದರ್ಶನ, ಸಮುದಾಯದ ಜನರಿಗೆ ಅರಿವು ಮೂಡಿಸಲು ಮಾದಕ ವಸ್ತು ವಿರೋಧಿ ಮತ್ತು ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಮದ್ಯಾವರ್ಜನಾ ಶಿಬಿರದ ಮೂಲಕ ಕುಡಿತ ಬಿಟ್ಟ ಸದಸ್ಯರಿಗೆ ನವಜೀವನ ಉತ್ಸವ, ಮಾಸಿಕ ಸಭೆ, ಸ್ವಸಹಾಯ ಸಂಘಗಳ ರಚನೆ, ಸ್ವ ಉದ್ಯೋಗ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಜನಜಾಗೃತಿ ವೇದಿಕೆ ಸದಸ್ಯರಿಗೆ ಯೋಜನೆ ವತಿಯಿಂದ ಆರೋಗ್ಯ ವಿಮಾ ಕಾರ್ಡ್‌ಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬಿಳಿಕೆರೆ ಪ್ರಸನ್ನ, ಗದ್ದಿಗೆ ದೇವರಾಜು, ನೇರಳಕುಪ್ಪೆ ಮಹದೇವ್, ಬನಿಕುಪ್ಪೆ ಉಮೇಶ್, ವಕೀಲೆ ಪವಿತ್ರಾ, ಯೋಜನಾಧಿಕಾರಿಗಳಾದ ನಾರಾಯಣಶೆಟ್ಟಿ, ಬಿ.ಧನಂಜಯ ಸೇರಿದಂತೆ ತಾಲೂಕಿನ ಮೇಲ್ವಿಚಾರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net