

ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ಡಿಜೆ ಜ್ಞಾನವೇಲ್ ಕಾಂಬೀನೇಷನ್ನ ಬಹು ನಿರೀಕ್ಷಿತ ವೆಟ್ಟೈಯಾನ್(Vettaiyan) ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆಯಾಗಿದೆ. ಅಭಿಮಾನಿಗಳ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ. ಜತೆಗೆ ರಜನಿಕಾಂತ್ ಮಾಜಿ ಅಳಿಯ ಧನುಷ್ ಕೂಡ ಚಿತ್ರ ವೀಕ್ಷಿಸಿದ್ದಾರೆ.
ವೆಟ್ಟೈಯಾನ್ ಸಿನಿಮಾ ವೀಕ್ಷಣೆಗೂ ಮುನ್ನ ಧನುಷ್ ಸಾಮಾಜಿಕ ಜಾಲತಾಣದಲ್ಲಿ “#vettaiyan DAY !” #ಸೂಪರ್ ಸ್ಟಾರ್ .. ತಲೈವರ್ ಧರಿಶನಂ.” ಎಂದು ಪೋಸ್ಟ್ ಮಾಡಿದ್ದಾರೆ.
ಥಿಯೇಟರ್ ಬಳಿ ಧನುಷ್ ಕಾರಿನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆ ತಟ್ಟಿ, ಶೀಟಿ ಹೊಡೆದರು. ಅಭಿಮಾನಿಗಳ ಉತ್ಸಾಹ ನೋಡಿ ಧನುಷ್ ಅವರತ್ತ ಕೈಬೀಸಿ ಸಿನಿಮಾ ನೋಡಲು ಹೋದರು. ಈ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
ಧನುಷ್ ಮಾತ್ರವಲ್ಲ ಐಶ್ವರ್ಯ ರಜನಿಕಾಂತ್ , ಸೌಂದರ್ಯ ಮತ್ತು ಲತಾ ಅವರು ಸಿನಿಮಾವನ್ನು ಒಂದೇ ಥಿಯೇಟರ್ನಲ್ಲಿ ವೀಕ್ಷಿಸಲು ಹೋಗುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ಬೈ ಹೇಳಿ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಾಯಕ ಧನುಷ್ ವಿಚ್ಛೇದನ ಪಡೆಯುತ್ತಿರುವುದು ಗೊತ್ತೆ ಇದೆ. ಒಂದೇ ಥಿಯೇಟರ್ ನಲ್ಲಿ ಐಶ್ವರ್ಯಾ ಹಾಗೂ ಧನುಷ್ ಜೋಡಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 2004ರಲ್ಲಿ ಮದುವೆ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ತಾವು ಬೇರ್ಪಡುವುದಾಗಿ 2022ರಲ್ಲಿ ಬಹಿರಂಗಪಡಿಸಿದರು. ಈ ವರ್ಷದ ಏಪ್ರಿಲ್‌ನಲ್ಲಿ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯಿಂದ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಇತ್ತೀಚಿನ ವಿಚಾರಣೆಯ ಸಮಯದಲ್ಲಿ ಐಶ್ವರ್ಯಾ ಮತ್ತು ಧನುಷ್ ಇಬ್ಬರೂ ಗೈರುಹಾಜರಾಗಿದ್ದರು. ಬೇರ್ಪಟ್ಟ ಇಬ್ಬರೂ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳ ಆಲೋಚನೆಯಾಗಿದೆ.
ಸಿನಿಮಾದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಜತೆಗೆ ಮಂಜು ವಾರಿಯರ್, ರಿತಿಕಾ ಸಿಂಗ್, ದುಶ್ರಾ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)