

ಚೆನ್ನೈ: ಟಾಲಿವುಡ್ನಲ್ಲಿ ನಯನತಾರಾ ಮತ್ತು ಧನುಷ್ (Dhanush V/S Nayanthara) ಅವರ ವಿವಾದ ಹೆಚ್ಚು ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ನಯನತಾರಾ ಧನುಷ್ ಅವರ ನಿಜ ಸ್ವರೂಪ ಇದೆ ಎಂದು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು ಗೊತ್ತೆ ಇದೆ. ಇತ್ತೀಚೆಗೆ ನಟ ಧನುಷ್ ಅವರು ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಅವರ ನಿರ್ಮಾಣದ ಮೂರು ಸೆಕೆಂಡ್ ಕ್ಲಿಪ್ ಅನ್ನು ತಮ್ಮ ನೆಟ್ಫ್ಲಿಕ್ಸ್ ಡಾಕ್ಯು-ಡ್ರಾಮಾ 'ನಯನತಾರಾ: ಬಿಯಾಂಡ್ ಫೇರಿಟೇಲ್ನಲ್ಲಿ ಅಕ್ರಮವಾಗಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಧನುಷ್ ಮಾಡಿರುವ ಕಾನೂನು ಕ್ರಮಕ್ಕೆ ನಯನತಾರಾ ಹಾಗೂ ಅವರ ಪತಿ ವಿಘ್ನೇಶ್ ಶಿವನ್ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಬಳಸಲಾದ ತೆರೆಮರೆಯ ತುಣುಕುಗಳು ಅವರ ವೈಯಕ್ತಿಕ ಲೈಬ್ರರಿಯಲ್ಲಿರುವುದರಿಂದ ನಾವು ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಅವರು ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 2 ಸೋಮವಾರ ಮದ್ರಾಸ್ ಹೈಕೋರ್ಟ್ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಧನುಷ್ ಅವರ ಕಾನೂನು ತಂಡವು ಹೇಳಿಕೆಯನ್ನು ನೀಡಿತ್ತು. ಅದರಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ಆಕ್ಷೇಪಾರ್ಹ ವಿಷಯವನ್ನು 24 ಗಂಟೆಗಳ ಒಳಗೆ ತೆಗೆದುಹಾಕುವಂತೆ ಒತ್ತಾಯಿಸಿದರು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಅದಷ್ಟೆ ಅಲ್ಲದೆ ನಯನತಾರಾ ಮತ್ತು ನೆಟ್ಫ್ಲಿಕ್ಸ್ ಇಂಡಿಯಾ ವಿರುದ್ಧವೂ 10 ಕೋಟಿ ರೂ.ಗಳ ಕ್ಲೈಮ್ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.
'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರವನ್ನು ಲೇಡಿ ಸೂಪರ್ಸ್ಟಾರ್ ನಯನತಾರಾ ಜನ್ಮದಿನವಾದ ನವೆಂಬರ್ 18 ರಂದು ಒಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಗೆ ಮುನ್ನ, ನಯನತಾರಾ ಧನುಷ್ಗೆ ವಿರುದ್ಧ ಮುಕ್ತ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 'ನಾನು ರೌಡಿಡಾನ್' ಕ್ಲಿಪ್ನ ಬಳಕೆಗೆ ಎನ್ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ನೀಡಲು ಧನುಷ್ ನಿರಾಕರಿಸಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.(ಏಜೆನ್ಸೀಸ್)