ನನಗೆ 40 ವರ್ಷ ಆಯ್ತು..ಇನ್ಮುಂದೆ ರೊಮ್ಯಾಂಟಿಕ್ ಸಿನಿಮಾ ಮಾಡಲ್ಲವೆಂದು ನಟ ಧನುಷ್

dhanush
Published on

ಹೈದರಾಬಾದ್​​: ನಟ ಧನುಷ್‌ ಅವರು ಹಿಂದಿ, ತಮಿಳು, ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಸಿನಿಮಾ ಸೋಲುವುದು ಕಡಿಮೆ. ಸೋತರೂ ಅವರು ನಟನೆಯಲ್ಲಿ ಗೆದ್ದಿರುತ್ತಾರೆ. ಆದರೂ ರೊಮ್ಯಾಂಟಿಕ್‌ ಚಿತ್ರಗಳಲ್ಲಿನ ನಟಿಸುವುದಿಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗೆ ಧನುಷ್‌ ಮತ್ತು ಎ ಆರ್‌ ರೆಹಮಾನ್‌ ಇನ್‌ಸ್ಟಾಗ್ರಾಂ ಲೈವ್‌ ಬಂದಿದ್ದರು. 2013ರಲ್ಲಿ ರಿಲೀಸ್‌ ಆದ ‘ಮರಿಯಾನ್‌’ ಚಿತ್ರಕ್ಕೆ 10 ವರ್ಷಗಳ ಸಂಭ್ರಮವಾಗಿದ್ದು, ಈ ಖುಷಿಯನ್ನು ಲೈವ್‌ ಮೂಲಕ ಹಂಚಿಕೊಂಡಿದ್ದರು.

ರೊಮ್ಯಾಂಟಿಕ್ ಸಿನಿಮಾ ಮಾಡಲ್ಲ: ‘ಮರಿಯಾನ್‌’ ಸೇರಿದಂತೆ ಸಾಕಷ್ಟು ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಟಿಸಿರೋ ಧನುಷ್‌ಗೆ ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಟಿಸುವಂತೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ನಗುತ್ತಲೇ ಉತ್ತರ ನೀಡಿದ ಧನುಷ್‌ ‘ನನಗೆ ವಯಸ್ಸಾಯ್ತು, 40 ವರ್ಷವಾಗಿದೆ. ಇನ್ನು ಮುಂದೆ ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ, ಈಗಿನ ಹುಡುಗರು ಅಂತಹ ಸಿನಿಮಾಗಳಲ್ಲಿ ನಟಿಸಲಿ ಎಂದು ಅವರು ಹೇಳಿದ್ದಾರೆ.

2022ರಲ್ಲಿ ಧನುಷ್, ನಿತ್ಯಾ ಮೆನನ್ ನಟನೆಯ 'Thiruchitrambalam' ಸಿನಿಮಾ ರಿಲೀಸ್ ಆಗಿತ್ತು. ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದ್ದು ವೀಕ್ಷಕರು ತುಂಬ ಇಷ್ಟಪಟ್ಟಿದ್ದರು. ಇದರ ಜತೆಗೆ ಅದೇ ವರ್ಷ 'ನಾನೇ ವರುವೆ', 'ದಿ ಗ್ರೇ ಮ್ಯಾನ್', 'ಮಾರನ್' ಸಿನಿಮಾ ರಿಲೀಸ್ ಆಗಿತ್ತು. 'ವಾತಿ' ಸಿನಿಮಾ ಈ ವರ್ಷ ರಿಲೀಸ್ ಆಗಿದೆ. ಸದ್ಯ ಧನುಷ್‌ ‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಸಹ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net