More

    ಈ ಅಂಗಡಿಗೆ ಹೋಗುವ ಮುನ್ನ ಎಚ್ಚರ! ಬರಿಗೈಯಲ್ಲಿ ವಾಪಸ್ಸಾದರೆ ಬೀಳುತ್ತೆ 500 ರೂ. ದಂಡ!

    ನವದೆಹಲಿ: ಅಂಗಡಿಯನ್ನು ಪ್ರವೇಶಿಸಿದ ನಂತರ ಅನೇಕರು ಅಂಗಡಿಯವನಿಗೆ ಅಣ್ಣ ಇದನ್ನೇ ತೋರಿಸು, ಅದನ್ನೇ ತೋರಿಸು ಎಂದು ಅಂಗಡಿಯವನಿಗೆ ಗಂಟೆಗಟ್ಟಲೇ ಸಮಯ ಕಳೆದ ನಂತರ ಏನನ್ನೂ ತೆಗೆದುಕೊಳ್ಳದೆ ಹೊರಟು ಹೋಗುತ್ತಾರೆ.ಅದೇ ಸಮಯದಲ್ಲಿ ಅಂಗಡಿಯವನ ಬಳಿ ನಿಂತು ಗಂಟೆಗಟ್ಟಲೆ ಅವ್ಯವಹಾರ ಮಾತನಾಡಿ ಅವನ ಮತ್ತು ತಮ್ಮ ಎರಡೂ ಸಮಯ ವ್ಯರ್ಥ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಹೊರರಾಜ್ಯಗಳಲ್ಲಿ ಹೀಗೇನೂ ಇಲ್ಲ ಗೆಳೆಯರೇ, ಇಲ್ಲಿಯ ನಿಯಮಾವಳಿಗಳೇ ಬೇರೆ.

    ಅಂಗಡಿಯೊಂದರ ಸೂಚನಾ ಫಲಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಯಾರೇ ಬರಲಿ ನೋಡಲು ಬಂದರೂ 500 ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಬರೆಯಲಾಗಿದೆ.

    ಇದನ್ನೂ ಓದಿ: ಲೋಕಾಯುಕ್ತ ಡಿವೈಎಸ್ಪಿ ಹೃದಯಘಾತದಿಂದ ಮೃತ್ಯು
    ಸಮಯ ವ್ಯರ್ಥ ಮಾಡಿದ್ದಕ್ಕಾಗಿ ದಂಡ : ಸ್ಪೇನ್​ನ ಬಾರ್ಸಿಲೋನಾದಲ್ಲಿ ಕಿರಾಣಿ ಅಂಗಡಿಯೊಂದಿದೆ. ಕ್ವಿವಿಯರ್ಸ್ ಮುರ್ರಿಯಾ ಎಂಬ ವ್ಯಕ್ತಿ ಈ ಕಿರಾಣಿ ಅಂಗಡಿಯನ್ನು 1898ರಲ್ಲಿ ಪ್ರಾರಂಭಿಸಿದ್ದಾನೆ. ಈ ಅಂಗಡಿಯನ್ನು ಚೆನ್ನಾಗಿ ಅಲಂಕರಿಸಲಾಗಿದೆ. ಪ್ರತಿ ವರ್ಷ ಈ ಅಂಗಡಿಯನ್ನು ನೋಡಲು ಜನರು ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಹೆಚ್ಚಿನವರು ಈ ಅಂಗಡಿಯ ಒಳಭಾಗವನ್ನು ನೋಡಿ ನಂತರ ಹೊರಡುತ್ತಾರೆ. ಅವರು ಏನನ್ನೂ ಮಾತನಾಡುವುದಿಲ್ಲ ಅಥವಾ ಏನನ್ನೂ ತೆಗೆದುಕೊಳ್ಳುವುದಿಲ್ಲ. ಜನರು ಪರಸ್ಪರ ಫೋಟೋ-ಸೆಲ್ಫಿ ತೆಗೆದುಕೊಂಡು ಅಲ್ಲಿಂದ ಹೊರಡುತ್ತಾರೆ. ಇದೆಲ್ಲದರಿಂದ ಬೇಸತ್ತ ಅಂಗಡಿಯವರು ಇದಕ್ಕೆಲ್ಲ ಪರಿಹಾರ ಕಂಡುಕೊಂಡಿದ್ದಾರೆ.

    ಇದನ್ನೂ ಓದಿ: ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು
    ಅಂಗಡಿ ಪ್ರವೇಶಿಸಿದರೆ ಶುಲ್ಕ ವಿಧಿಸಲಾಗುತ್ತದೆ: ಈ ಅಂಗಡಿಯನ್ನು ಪ್ರಸ್ತುತ ಟೋನಿ ಮರಿನೋ ನಡೆಸುತ್ತಿದ್ದಾರೆ. ಜನರು ಅಂಗಡಿಗೆ ಬಂದು ಹಾಗೆ ಸುಮ್ಮನೆ ಹೋಗುತ್ತಿರುವುದಕ್ಕೆ ಕಡಿವಾಣ ಹಾಕಲು ದಂಡ ಹಾಕುವುದಾಗಿ ಹೇಳಿದ್ದಾರೆ. ಜನರಿಗೆ ತಮಾಷೆಯಂತೆ ಕಂಡರೂ ಇಲ್ಲಿಗೆ ಪ್ರವಾಸಿಗರು ಬರುವುದರಿಂದ ದುಡಿಯುವ ಜನರು ತೊಂದರೆ ಅನುಭವಿಸುವಂತಾಗಿದೆ. ಅದಕ್ಕೇ ಅಂಗಡಿಯೊಳಗೆ ಒಂದು ಬೋರ್ಡ್ ಇಟ್ಟು ಬರೆದು ‘ನೋಡಲು ಮಾತ್ರ ಒಳಗೆ ಬರಬೇಕಾದರೆ 5 ಯೂರೋ (461 ರೂಪಾಯಿ) ಕೊಡಬೇಕು. ಅಂಗಡಿಗೆ ಬರುವ ಪ್ರತಿಯೊಬ್ಬರಿಗೂ ಈ ಶುಲ್ಕ ವಿಧಿಸಲಾಗುವುದು ಎಂದು ಹಾಕಿದ್ದಾರೆ. ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

    ಹಲ್ಲುಜ್ಜುವಾಗ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ!; ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts