More

    ಇಲ್ಲಿಗೆ ಬಂದೋರು ಹಾಗೆ ಸುಮ್ಮನೆ ಒಂದು ಕಲ್ಲು ಎತ್ತಿಕೊಂಡ್ರೋ ಬೀಳುತ್ತೆ ಬರೋಬ್ಬರಿ 2 ಲಕ್ಷ ದಂಡ!

    ಬೆಂಗಳೂರು: ಪ್ರತಿಯೊಂದು ದೇಶವು ತನ್ನ ಅನುಕೂಲಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ವಿಭಿನ್ನ ನಿಯಮಗಳನ್ನು ರೂಪಿಸುತ್ತದೆ. ಹಾಗೆಯೇ ಈ ದೇಶದಲ್ಲೊಂದು ನಿಯಮವಿದೆ. ಇಲ್ಲಿ ನೀವು ಅಪ್ಪಿತಪ್ಪಿ ಸಮುದ್ರದ ಮರಳು ಅಥವಾ ಕಲ್ಲುಗಳನ್ನು ಎತ್ತಿಕೊಳ್ಳಲು ಹೋದರೆ  ಕಡಿಮೆ ಎಂದರೂ 2 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. 

    ಹೌದು, ಕ್ಯಾನರಿ ಐಲ್ಯಾಂಡ್ ನಲ್ಲಿರುವ ಲ್ಯಾಂಜರೋಟ್ ಮತ್ತು ಫ್ಯೂರ್ಟೆವೆಂಟುರಾಗೆ ಬರುವ ಪ್ರವಾಸಿಗರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಇಲ್ಲಿನ ಬೀಚ್‌ನಿಂದ ಮರಳು ಅಥವಾ ಕಲ್ಲುಗಳನ್ನು ತೆಗೆಯದಂತೆ ಕೇಳಿಕೊಳ್ಳಲಾಗುತ್ತದೆ. ಒಂದು ವೇಳೆ ಎತ್ತಿಕೊಂಡರೆ 128 ಪೌಂಡ್‌ಗಳಿಂದ (13,478 ರೂ) 2563 ಪೌಂಡ್‌ಗಳವರೆಗೆ (ರೂ 2,69,879) ದಂಡವನ್ನು ಪಾವತಿಸಬೇಕಾಗಬಹುದು.

    ಸಾಮಾನ್ಯವಾಗಿ ಪ್ರವಾಸಿಗರು ಇಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ತಮ್ಮೊಂದಿಗೆ ನೆನಪಿಗಿರಲೆಂದು ಸಮುದ್ರದ ವಸ್ತುಗಳನ್ನು ಎತ್ತಿಕೊಳ್ಳುತ್ತಾರೆ. ಆದರೆ, ಇದರಿಂದ ಇಲ್ಲಿನ ಪರಿಸರ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಕ್ಯಾನರಿ ದ್ವೀಪದ ಅಧಿಕಾರಿಗಳು. ವರದಿಗಳ ಪ್ರಕಾರ, ಪ್ರವಾಸಿಗರು ಹೀಗೆ ಮಾಡುವುದರಿಂದ ಪ್ರತಿ ವರ್ಷ ಲ್ಯಾಂಜರೋಟ್‌ನ ಕಡಲತೀರಗಳಿಂದ ಸುಮಾರು ಒಂದು ಟನ್ ವಸ್ತುಗಳು ಕಣ್ಮರೆಯಾಗುತ್ತವೆ.

    ಇದರ ಹೊರತಾಗಿ, ಪಾಪ್‌ಕಾರ್ನ್ ಬೀಚ್ ಎಂದು ಕರೆಯಲ್ಪಡುವ ಫ್ಯೂರ್ಟೆವೆಂಚುರಾ ಬೀಚ್‌ನಿಂದ ಪ್ರತಿ ತಿಂಗಳು ಹಲವಾರು ಟನ್‌ಗಳಷ್ಟು ಮರಳು ಕಣ್ಮರೆಯಾಗುತ್ತಿದೆ. ಇದರಿಂದ ಪ್ರಕೃತಿಯ ಸಮತೋಲನಕ್ಕೆ ಧಕ್ಕೆಯಾಗುತ್ತಿದ್ದು, ಕಡಲತೀರಗಳಿಗೆ ಧಕ್ಕೆ ಉಂಟಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಅಪಾಯವನ್ನು ತಪ್ಪಿಸಲು, ಹಾಗೆ ಮಾಡುವ ಪ್ರವಾಸಿಗರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.

    ಕ್ಯಾನರಿ ದ್ವೀಪಗಳು ಏಳು ಪ್ರಮುಖ ದ್ವೀಪಗಳ ಗುಂಪು. ಈ ದ್ವೀಪಗಳೆಂದರೆ ಟೆನೆರೈಫ್, ಗ್ರ್ಯಾನ್ ಕೆನರಿಯಾ, ಲ್ಯಾಂಜರೋಟ್, ಫ್ಯೂರ್ಟೆವೆಂಟುರಾ, ಲಾ ಪಾಲ್ಮಾ, ಲಾ ಗೊಮೆರಾ ಮತ್ತು ಎಲ್ ಹಿರೋ. ಈ ಪ್ರತಿಯೊಂದು ದ್ವೀಪವು ತನ್ನದೇ ಆದ ವಿಶಿಷ್ಟ ಗುರುತು ಮತ್ತು ಗುಣಲಕ್ಷಣಗಳನ್ನು ಹೊಂದಿದೆ. ಟೆನೆರೈಫ್ ದ್ವೀಪವು ಕ್ಯಾನರಿ ದ್ವೀಪಗಳ ಅತಿದೊಡ್ಡ ದ್ವೀಪವಾಗಿದೆ ಮತ್ತು ಸ್ಪೇನ್‌ನ ಅತಿ ಎತ್ತರದ ಪರ್ವತವಾದ ಮೌಂಟ್ ಟೀಡ್‌ಗೆ ನೆಲೆಯಾಗಿದೆ ಎಂಬುದು ಗಮನಾರ್ಹವಾಗಿದೆ.

    ‘ಪ್ಯಾಂಟ್ರಿ ಕಾರ್’ ಮುಚ್ಚಲು ರೈಲ್ವೆ ಮಂಡಳಿ ಆದೇಶ, ಇನ್ಮುಂದೆ ರೈಲಿನಲ್ಲಿ ಉಪಹಾರ ಲಭ್ಯವಿಲ್ಲವೇ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts