More

    ಮತದಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರ

    ಜಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ದಾವಣಗೆರೆ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್.ಶಶಿಧರ್ ಹೇಳಿದರು.

    ತಾಲೂಕಿನ ರಂಗಯ್ಯನದುರ್ಗ ಅರಣ್ಯ ವ್ಯಾಪ್ತಿಯ ಗುರುಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಮತದಾನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

    ವಿಶ್ವದ ಬೃಹತ್ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಈ ಲೋಕಸಭಾ ಚುನಾವಣೆ. ಸಂವಿಧಾನ ನೀಡಿರುವ ಮತದಾನ ಹಕ್ಕು ಪವಿತ್ರ ಹಾಗೂ ಅಮೂಲ್ಯವಾದುದು. ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

    ಜಿಲ್ಲಾ ಸ್ವೀಪ್ ಸಮಿತಿ ಕೊಂಡುಕುರಿಯನ್ನು ಚುನಾವಣಾ ಲೋಗೋ ಆಗಿ ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಷಯ. ಭಾರತದಲ್ಲಿ ಶ್ರೀಮಂತನಿಗೂ ಒಂದೇ ಮತ, ಬಡವನಿಗೂ ಒಂದೇ ಮತ. ಇದೇ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಕೊಡುಗೆ. ದಯಮಾಡಿ ತಪ್ಪದೇ ಮತದಾನ ಮಾಡಿ. ಮತವನ್ನು ಮಾರಿಕೊಳ್ಳದೇ ವಿವೇಚನೆಯಿಂದ ಹಕ್ಕು ಚಲಾಯಿಸಿ ಎಂದರು.

    ಸಾಮಾಜಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಭಾಗ್ಯಲಕ್ಷ್ಮಿ, ಸಂತೋಷ್, ಆರ್‌ಎಫ್‌ಒ ಶ್ರೀನಿವಾಸ್, ಸಾಮಾಜಿಕ ವಲಯ ಆರ್‌ಎಫ್‌ಒ ಮಹೇಶ್ವರಪ್ಪ, ಕೊಂಡುಕುರಿ ಅರಣ್ಯ ಆರ್‌ಎಫ್‌ಒ ಮಹೇಶ್ ನಾಯ್ಕ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts