

ಮುಂಬೈ: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ನಡುವಿನ ವಿಚ್ಛೇದನ ವಿವಾದವು ಸಾಮಾಜಿಕ ಮಾಧ್ಯಮದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಧನಶ್ರೀ 60 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಎಂಬ ಸುದ್ದಿ ಇತ್ತು, ಇದನ್ನು ಅವರ ಕುಟುಂಬ ಸದಸ್ಯರು ನಿರಾಕರಿಸಿದರು. ಈಗ, ಚಾಹಲ್ ಬೇರೆ ಯುವತಿ ಜತೆ ಕಾಣಿಸಿಕೊಳ್ಳುತ್ತಿದ್ದಂತೆ ಧನಶ್ರೀ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಸಖತ್ ಸುದ್ದಿಯಲ್ಲಿದೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿದ್ದವು. ಚಹಾಲ್ ಅವರು ಆರ್.ಜೆ.ಮಹ್ವಾಶ್ ಜೊತೆ ಈ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಡಿವೋರ್ಸ್ ವದಂತಿ ಹಿನ್ನೆಲೆಯಲ್ಲಿ ಚಹಾಲ್, ಮತ್ತೊಬ್ಬ ಹುಡುಗಿ ಜೊತೆ ಪಂದ್ಯ ವೀಕ್ಷಣೆ ಮಾಡಿರೋ ದೃಶ್ಯ ವೈರಲ್ ಆಗಿತ್ತು. ಬೆನ್ನಲ್ಲೇ ಧನಶ್ರೀ ನಿಗೂಢ ಪೋಸ್ಟ್ ಮಾಡಿದ್ದರು. ಹೆಣ್ಣನ್ನು ದೂಷಿಸಿವುದು ಫ್ಯಾಷನ್ ಆಗಿಬಿಟ್ಟಿದೆ ಅಂತಾ ಇನ್ಸ್ಟಾದಲ್ಲಿ ಬರೆದುಕೊಂಡಿದ್ದರು.
"ಮಹಿಳೆಯರನ್ನು ದೂಷಿಸುವುದು ಯಾವಾಗಲೂ ಫ್ಯಾಷನ್!" ಎಂದು ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಇದನ್ನು ಯುಜ್ವೇಂದ್ರ ಚಾಹಲ್‌ಗೆ ಲಿಂಕ್ ಮಾಡಿದ್ದಾರೆ.
ಧನಶ್ರೀ ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಲ್ಲಾ ಫೋಟೋ, ವಿಡಿಯೋಗಳನ್ನು ರಿಸ್ಟೋರ್ ಮಾಡಿದ್ದಾರೆ. ಫೋಟೋಸ್, ಔಟಿಂಗ್ ಹೋಗಿರೋ ದೃಶ್ಯ, ಬ್ರ್ಯಾಂಡ್ ಪ್ರಮೋಷನ್ ವಿಡಿಯೋ, ಫೋಟೋ, ವೆಡಿಂಗ್ ಹಾಗೂ ಚಹಾಲ್ ಜೊತೆಗಿನ ವಿಶೇಷ ಕ್ಷಣಗಳನ್ನು ಮತ್ತೆ ರಿಸ್ಟೋರ್ ಮಾಡಿದ್ದಾರೆ.
ಚಹಾಲ್ ಮತ್ತು ಧನಶ್ರೀ 2020 ಡಿಸೆಂಬರ್ನಲ್ಲಿ ಮದುವೆ ಆಗಿದ್ದಾರೆ. ಅಂದಿನಿಂದ ಚಹಾಲ್ ಮತ್ತು ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಇದ್ದರು. ಫನ್ ವಿಡಿಯೋ, ಡ್ಯಾನ್ಸ್ಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಭಿಮಾನಿಗಳು ರಂಜಿಸುತ್ತ ಬರುತ್ತಿದ್ದರು. ಇತ್ತೀಚೆಗೆ ಇವರಿಬ್ಬರು ಡಿವೋರ್ಸ್ ಪಡೆದುಕೊಂಡಿದ್ದಾರೆ ಅಂತಾ ವದಂತಿ ಹಬ್ಬಿತ್ತು.
ಈ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಧನಶ್ರೀ ಅವರ ವಕೀಲೆ ಅದಿತಿ ಮೋಹನ್ ಪ್ರತಿಕ್ರಿಯಿಸಿ, ಮಾಧ್ಯಮಗಳು ಸತ್ಯಗಳನ್ನು ಪರಿಶೀಲಿಸಿ ಪ್ರಕಟಿಸಬೇಕು ಎಂದು ಸೂಚಿಸಿದರು. "ಈ ಪ್ರಕರಣ ತನಿಖೆಯಲ್ಲಿರುವ ಕಾರಣ, ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲು ಸಾಧ್ಯವಿಲ್ಲ." ಆದರೆ ಬಹಳಷ್ಟು ದಾರಿತಪ್ಪಿಸುವ ಮಾಹಿತಿಗಳು ಪ್ರಸಾರವಾಗುತ್ತಿವೆ. "ಮಾಧ್ಯಮಗಳು ವರದಿ ಮಾಡುವ ಮೊದಲು ಸತ್ಯಗಳನ್ನು ಪರಿಶೀಲಿಸಬೇಕು" ಎಂದು ಅವರು ಹೇಳಿದರು.