ಕರೊನಾ ಹೆಸರಲ್ಲಿ ನಕಲಿ ಮಾತ್ರೆ ನೀಡಿದ ಪ್ರತಿಷ್ಠಿತ ಕಂಪನಿ; ಡಿಜಿಸಿಐನಿಂದ ನೋಟಿಸ್​ ಜಾರಿ

Corona Medicin 19 may 20
Published on

ನವದೆಹಲಿ: ದೇಶದ ಪ್ರತಿಷ್ಠಿತ ಔಷಧ ತಯಾರಿಕಾ ಕಂಪನಿಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಜಿಸಿಐ) ನೋಟಿಸ್​ ಜಾರಿಗೊಳಿಸಿದ್ದಾರೆ.

ಕರೊನಾ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಬಳಸಬಹುದು ಎಂದು ಮುಂಬೈ ಮೂಲದ ಗ್ಲೆನ್​ಮಾರ್ಕ್ಸ್​ ಕಂಪನಿ ಇತ್ತೀಚೆಗೆ ಫೆಬಿ ಫ್ಲೂ ಹೆಸರಿನ ಜನರಿಕ್​ ಮಾತ್ರೆ ಪರಿಚಯಿಸಿತ್ತು. ಆದರೆ, ಕಂಪನಿ ಹೇಳಿದಂತೆ ಇದು ಕರೊನಾ ರೋಗಿಗಳಿಗೆ ಚೇತರಿಕೆ ನೀಡಬಲ್ಲುದು ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.

ಕರೊನಾ ರೋಗಿಗಳಲ್ಲಿ ರಕ್ತದೊತ್ತಡ, ಮಧುಮೇಹ ಕಾಯಿಲೆಗಳಿದ್ದರೆ, ಅಂಥವರಿಗೆ ತುರ್ತು ಸಂದರ್ಭದಲ್ಲಿ ಜೀವ ರಕ್ಷಕವಾಗಿ ಈ ಮಾತ್ರೆ ಬಳಸಬಹುದು ಎಂದು ಕಂಪನಿ ತಿಳಿಸಿತ್ತು. ಆದರೆ, ಕಂಪನಿ ಸಲ್ಲಿಸಿರುವ ದಾಖಲೆಗಳಲ್ಲಿ ಇದಕ್ಕೆ ಆಧಾರಗಳೇ ಇಲ್ಲ. ಕ್ಲಿನಿಕಲ್​ ಟ್ರಯಲ್​ನಲ್ಲೂ ಇದಕ್ಕೆ ಪೂರಕವಾದ ಮಾಹಿತಿಯಿಲ್ಲ ಎಂದು ಸಿಡಿಎಸ್​ಸಿಒ ಹೇಳಿದೆ.

ಪ್ರತಿ ಮಾತ್ರೆಗೆ 75 ರೂ. ಬೆಲೆ ನಿಗದಿ ಪಡಿಸಿರುವ ಕಂಪನಿ, ಒಟ್ಟಾರೆ 18 ದಿನದ ಅವಧಿಗೆ 122 ಮಾತ್ರೆಗಳನ್ನು ಸೇವಿಸಬೇಕು ಎಂದು ಸೂಚಿಸಿತ್ತು. ಹೀಗಾಗಿ ಮಾತ್ರೆಗಳಿಗಾಗಿಯೇ 12,500 ರೂ. ಖರ್ಚು ಮಾಡಬೇಕಿತ್ತು. ಹೀಗಾಗಿ ಬೆ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಸಂಸದರೊಬ್ಬರು ದೂರು ನೀಡಿದ್ದರು. ಬೆಲೆ ನಿಗದಿ ಡಿಜಿಸಿಐ ಮಾನದಂಡದ ಪ್ರಕಾರವಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಕರೊನಾದ ಲಘು ಹಾಗೂ ಸಾಮಾನ್ಯ ಲಕ್ಷಣಗಳಿದ್ದಲ್ಲಿ ಈ ಮಾತ್ರೆಯನ್ನು ಬಳಸಬಹುದು ಎಂದು ಗ್ಲೆನ್​ಮಾರ್ಕ್ಸ್​ ಕಂಪನಿ ಡಜಿಸಿಐನಿಂದ ಅನುಮತಿ ಪಡೆದಿತ್ತು. ಆದರೆ, ವಾಸ್ತವ ಹಾಗಿಲ್ಲ ಎಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net