

ಕವಿತಾಳ: ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕನಕದಾಸರು ಜೀವಿಸಿದ್ದು, ಸಮಾಜದಲ್ಲಿ ಸಮಾನತೆಗಾಗಿ ಪ್ರಯತ್ನಿಸಿದರು ಎಂದು ಸಿಂಡಿಕೇಟ್ ಸದಸ್ಯ ಶಿವಣ್ಣ ವಕೀಲ ಹೇಳಿದರು.
ಇದನ್ನೂ ಓದಿ: ಕನಕದಾಸರು ವೈಚಾರಿಕ ಪರಂಪರೆಯ ಕೊಂಡಿ
ಪಟ್ಟಣದ ಕನಕವೃತ್ತದ ಬಳಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಕನಕದಾಸರು ಭಕ್ತಿಯಿಂದ ಕೃಷ್ಣನ ದರ್ಶನ ಪಡೆದು ಪುನಿತರಾಗಿದ್ದರು. ಸಮಾಜದ ಎಕತೆಗಾಗಿ ಕೀರ್ತನೆ ಮೂಲಕ ಜಾಗೃತಿ ಮೂಡಿಸಿದ್ದರು. ಇವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಜಿಪಂ ಮಾಜಿ ಸದಸ್ಯ ಮಾಳಪ್ಪ, ಪಪಂ ಸದಸ್ಯರಾದ ಯಲ್ಲಪ್ಪ ಮಾಡಗೇರ, ರುಕ್ಮುದ್ದಿನ್, ಮಾಳಪ್ಪ ತೋಳ, ಕಿರಿಲಿಂಗಪ್ಪ, ಕರೆಯಪ್ಪ, ಯಮನಪ್ಪ ದಿನ್ನಿ, ಶಿವರಾಜ ಢೊಣಮರಡಿ, ಶಿಕ್ಷಣ ಪೇಮಿ ಮೋಸಿನ್, ಪ್ರಮುಖರಾದ ಕರಿಂಸಾಬ್, ಜಡೆ ಕರೆಯಪ್ಪತಾತಾ, ಶಿವಣ್ಣತಾತಾ ಪುಜಾರಿ, ಗಂಗಪ್ಪ ದಿನ್ನಿ,
ಶಿವುಕುಮಾರ ಯಕ್ಕಲ, ಭೀರಪ್ಪ ಹೀರಾ, ರಾಜು ಕಟ್ಟಿಮನಿ, ಮೌನೇಶ ಪೂಜಾರಿ, ಅರುಣಕುಮಾರ, ಅಮರಪ್ಪ ದಿನ್ನಿ, ಮೌನೇಶ ಹಿರೆಕುರಬರ, ಹುಸೆನಪ್ಪ ಯಡಿವಾಳ, ನಿಂಗಣ್ಣ ಗುತ್ತೆದಾರ ಇತರರಿದ್ದರು. ಪಪಂ, ಪೊಲೀಸ್ ಠಾಣೆ, ಪಾಮನಕಲ್ಲೂರಿನ ಹಾಲು ಮತ ಸಮಾಜ, ಚಿಂಚರಕಿ, ಹೀರಾ, ಹಣಗಿ, ಹಾಲಪೂರ, ತೋರಣದಿನ್ನಿ ಗ್ರಾಪಂನಲ್ಲಿ ಕನಕ ಜಯಂತಿ ಆಚಾರಿಸಲಾಯಿತು. ನಾಯಕ ಜನಾಂಗದವರು ಮಹರ್ಷಿ ವಾಲ್ಮೀಕಿ ಜಯಂತಿ ಆಚಾರಿಸಿದರು.