ಭಜನೆ, ನೃತ್ಯದೊಂದಿಗೆ ತೇರನೆಳೆದ ಭಕ್ತರು

srl-mata
ಉಡುಗಣಿ ಶ್ರೀ ರಾಘವೇಂದ್ರ ಮಠದ ರಾಯರ ರಥೋತ್ಸವದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
Published on

ಶಿರಾಳಕೊಪ್ಪ: ಶ್ರೀ ಗುರುರಾಯರ ಆರಾಧನಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರು ಗುರುಗಳ ದರ್ಶನ ಪಡೆದರು.

ದ್ವಿತೀಯ ಮೃತ್ತಿಕಾ ಮಂತ್ರಾಲಯ ಎಂದು ಪ್ರಸಿದ್ಧಿ ಪಡೆದಿರುವ ಉಡುಗಣಿ ರಾಯರ ಮಠದಲ್ಲಿ 4ದಿನ ಆರಾಧನೆ ನಡೆಯುತ್ತದೆ. ಮೂರನೇ ದಿನ ಗುರುವಾರ ರಥೋತ್ಸವ ನಡೆಯಿತು. ಮಧ್ಯಾಹ್ನ 12ಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಪೂಜೆ ಸಲ್ಲಿಸಿ ಸಮಿತಿ ಸದಸ್ಯರೊಂದಿಗೆ ರಥ ಎಳೆದರು.
ಭಕ್ತರು ರಾಯರ ಕುರಿತು ಘೋಷಣೆ ಹಾಕುತ್ತ ವಿವಿಧ ಜಾನಪದ ವಾದ್ಯಗಳೊಂದಿಗೆ ನರ್ತಿಸುತ್ತ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವ ಮೆರವಣಿಗೆಯಲ್ಲಿ ಮಕ್ಕಳು ದೇವರ ಪೋಷಾಕು ಧರಿಸಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಮಹಿಳೆಯರು ಭಜನೆ ಮಾಡುತ್ತ ನರ್ತಿಸಿ ಹೆಜ್ಜೆ ಹಾಕಿದರು.
ರಥೋತ್ಸವ ಬಳಿ ಮಠಕ್ಕೆ ತೆರಳಿ ರಾಯರ ದಶರ್ನ ಪಡೆದರು. ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶುಕ್ರವಾರ ಆರಾಧನೆಯ ಕಡೇ ದಿನ. ಪವಮಾನ ಹೋಮ, ವೇದವ್ಯಾಸರ ಪೂಜೆಯೊಂದಿಗೆ ಮುಕ್ತಾಯವಾಗಲಿದೆ. ಸಮಿತಿ ಅಧ್ಯಕ್ಷ ರಾಜೀವ, ಪ್ರಮುಖರಾದ ಗುರುಮೂರ್ತಿ, ಚನ್ನವೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net