ಮೂರನೇ ಬಾರಿಗೆ ಮಹಾರಾಷ್ಟ್ರದ ಸಿಎಂ ಆಗಿ ಅಧಿಕಾರವಹಿಸಿಕೊಂಡ ದೇವೇಂದ್ರ ಫಡ್ನವೀಸ್​​ | Maharashtra CM

cm (6)
Published on

ಮಹಾರಾಷ್ಟ್ರ: ಇಲ್ಲಿನ ಅಜಾದ್​ ಮೈದಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ(Maharashtra CM )ಬಿಜೆಪಿಯ ದೇವೇಂದ್ರ ಫಡ್ನವಿಸ್​ ಪ್ರಮಾಣ ವಚನ ಸ್ವೀಕರಿಸಿದರು.

ಐದು ವರ್ಷಗಳ ಬಳಿಕ ಮತ್ತೆ ರಾಜ್ಯದ 21ನೇ ಮುಖ್ಯಮಂತ್ರಿಯಾಗಿರುವ 54 ವರ್ಷದ ಫಡ್ನವಿಸ್​ಗೆ ರಾಜ್ಯಪಾಲ ಸಿ.ಪಿ ರಾಧಕೃಷ್ಣನ್​ ಅಧಿಕಾರ ಮತ್ತು ಗೌಪತ್ಯ ಪ್ರಮಾಣ ವಚನದ ಪ್ರತಿಜ್ಞಾವಿಧಿ ಬೋಧಿಸಿದರು.

ಬಳಿಕ ಮಹಾಯುತಿ ಮೈತ್ರಿಕೂಟದ ಎನ್​ಸಿಪಿ ನಾಯಕ ಅಜಿತ್​ ಪವಾರ್ ಮತ್ತು ಶಿವಸೇನದ ನಾಯಕ ಏಕನಾಥ್​ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ಈಗ ದೇವೇಗೌಡರು ನೋಡುವಂತಾಗಿದೆ: CM Siddaramaiah ಕಾರ್ಯಕ್ರಮದಲ್ಲಿ ಮೋದಿ ಸೇರಿದಂತೆ ಆನೇಕ ಗಣ್ಯರು ಭಾಗಿ

ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್​ ಶಾ, ರಾಜನಾಥ್​ ಸಿಂಗ್​, ನಡ್ಡಾ ಸೇರಿದಂತೆ ಆನೇಕರು ವೇದಿಕೆ ಹಂಚಿಕೊಂಡಿದ್ದರು. ಅಲ್ಲದೆ, ಶಾರುಖ್ ಖಾನ್​, ಸಲ್ಮಾನ್​ ಖಾನ್, ರಣಬೀರ್​ ಕಪೂರ್​ ಸೇರಿದಂತೆ ಬಾಲಿವುಡ್​ ಟಾಪ್​ ಸ್ಟಾರ್​ಗಳು ಭಾಗವಹಿಸಿದ್ದರು. ಜತೆಗೆ ಉದ್ಯಮಿಗಳಾದ ಮುಕೇಶ್​ ಅಂಬಾನಿ, ಅನಿಲ್​ ಅಂಬಾನಿ, ಅನಂತ್ ಅಂಬಾನಿ ಮತ್ತು ಕುಮಾರ್​ ಮಂಗಳಂ ಬಿರ್ಲಾ ಸೇರಿದಂತೆ ಆನೇಕ ಗಣ್ಯರ ದಂಡು ಹರಿದು ಬಂದಿತ್ತು,(ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net