

ಮುಂಬೈ: ಸದ್ಯ ಮುಂಬೈನಲ್ಲಿ ಕಂಗನಾದೇ ಸುದ್ದಿ. ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ನಡುವೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ನಾಯಕರು ನಟಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಕಂಗನಾ ರಣಾವತ್ ಕಚೇರಿಯನ್ನು ಧ್ವಂಸ ಮಾಡಿದ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಿಡಿಕಾರಿದ್ದಾರೆ. ನಿಮಗೆ ಗ್ಯಾಂಗ್ಸ್ಟರ್ ದಾವೂದ್ ಅವರ ಮನೆಯನ್ನು ಧ್ವಂಸಗೊಳಿಸುವ ತಾಕತ್ತು ಇಲ್ಲ..ದೊಡ್ಡದಾಗಿ ಕಂಗನಾ ಕಚೇರಿಯನ್ನು ನಾಶ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಗನಾ ರಣಾವತ್ ಬಾಂದ್ರಾದಲ್ಲಿ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆ. ಹಾಗಾಗಿಯೇ ಧ್ವಂಸ ಮಾಡಲಾಗಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಹೇಳಿದೆ. ಆದರೆ ಈ ಕ್ರಮಕ್ಕೆ ರಾಷ್ಟ್ರಾದ್ಯಂತ ಅಪಾರ ವಿರೋಧ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)