ಎಬಿಸಿ ಅಧ್ಯಕ್ಷರಾಗಿ ದೇವೇಂದ್ರ ದರ್ಡಾ ಆಯ್ಕೆ

Nation 1
Published on

ನವದೆಹಲಿ: ಲೋಕಮತ್ ಮೀಡಿಯಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ದರ್ಡಾ 2020-2021ನೇ ಸಾಲಿಗೆ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ (ಎಬಿಸಿ)ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಾಹೀರಾತುದಾರರ ವಿಭಾಗದಿಂದ ಕರುಣೇಶ್ ಬಜಾಜ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಲೋಕಮತ್ ಮೀಡಿಯಾ ಸಮೂಹವು ಭಾರತದ ಅತಿದೊಡ್ಡ ಪ್ರಾದೇಶಿಕ ಮಾಧ್ಯಮ ಸಮೂಹದಲ್ಲಿ ಒಂದಾಗಿದ್ದು, ಮುದ್ರಣ, ಡಿಜಿಟಲ್, ಟಿವಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ. ದೇವೇಂದ್ರ ಅವರು ಈ ಮೊದಲು ಐಎನ್​ಎಸ್ ಮತ್ತು ಐಎಫ್​ಆರ್​ಎ ಸೇರಿದಂತೆ ಹಲವಾರು ಮಾಧ್ಯಮ ಉದ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಯವತ್ಮಲ್​ನಲ್ಲಿರುವ ಹಲವು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ದೇವೇಂದ್ರ, ವೆಸ್ಟರ್ನ್ ಇಂಡಿಯಾ ಫುಟ್​ಬಾಲ್ ಸಂಘದ ವ್ಯವಸ್ಥಾಪನಾ ಸಮಿತಿಯಲ್ಲೂ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net