ಗಣರಾಜ್ಯದ ನಂತರ ದೇಶ ಅಭಿವೃದ್ಧಿ

sor rp
ಸೊರಬ ರಂಗಮಂದಿರ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಉತ್ತಮ ನೌಕರರನ್ನು ಸನ್ಮಾನಿಸಲಾಯಿತು. ಮಂಜುಳಾ ಹೆಗಡಾಳ್, ಜಯಶೀಲಪ್ಪ ಗೌಡ, ಡಾ. ಪ್ರದೀಪ್‌ಕುಮಾರ್, ಎಸ್.ಮಂಜುನಾಥ್ ಇತರರಿದ್ದರು.
Published on

ಸೊರಬ: ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಹೇಳಿದರು.

ಪಟ್ಟಣದ ರಂಗಮಂದಿರ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ, ತಾಪಂ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತಿತರ ಇಲಾಖೆಗಳಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿವಿಧತೆಯಲ್ಲಿ ಏಕತೆ ಸಾಧಿಸಿದ ಭಾರತದಲ್ಲಿ ನ್ಯಾಯ, ಸಮಾನತೆ ಹಾಗೂ ಎಲ್ಲರಿಗೂ ಶಾಂತಿ ಪ್ರತಿಬಿಂಬಿಸುವ ಭವಿಷ್ಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ದೇಶ ಗಣರಾಜ್ಯವಾದ ನಂತರ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಪ್ರಜಾಪ್ರಭುತ್ವ ಹಾಗೂ ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದರು.

ಉತ್ತಮ ಸೇವೆಯಿಂದ ಗುರುತಿಸಿಕೊಂಡ ಸಿಡಿಪಿಒ ಕಚೇರಿಯ ಸೋಮಶೇಖರ್, ಶೈಲಾ ಕೆರೂರ, ಆರೋಗ್ಯ ಇಲಾಖೆಯ ಜಯಲಕ್ಷ್ಮೀ, ಸಾಹಿರಾ ಬಾನು, ಶಿಕ್ಷಣ ಇಲಾಖೆಯ ದಯಾನಂದ ಕಲ್ಲೇರ್, ಪೊಲೀಸ್ ಇಲಾಖೆಯ ಬಸವರಾಜ್, ಕುಮಾರ, ಮಲ್ಲೇಶಪ್ಪ, ಪುರಸಭೆ ನೌಕರ ಮುನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಪ್ಪ ಗೌಡ, ಇಒ ಡಾ. ಎನ್.ಆರ್.ಪ್ರದೀಪ್‌ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಬಿಇಒ ಆರ್.ಪುಷ್ಪಾ, ಪುರಸಭೆ ಮುಖ್ಯಾಧಿಕಾರಿ ಎಚ್.ವಿ.ಚಂದನ್, ಸಿಪಿಐ ಎಲ್.ರಾಜಶೇಖರ್, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ಈರೇಶ್ ಮೇಸಿ, ಡಿ.ಎಸ್.ಪ್ರಸನ್ನಕುಮಾರ್, ಪ್ರೇಮಾ, ಆಫ್ರೀನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net