ಸ್ವಯಂ ಸೇವಾ ಸಂಸ್ಥೆಗಳಿಂದ ಸಮಾಜದ ಅಭಿವೃದ್ಧಿ

9sri-2
ಶೃಂಗೇರಿಯಲ್ಲಿ ಆಯೋಜಿಸಿದ್ದ ಶಾಶ್ವತ್ ಜೆಸಿಐ ಸಪ್ತಾಹ-2023ರನ್ನು ಆಡಳಿತ ವೈದ್ಯಾಧಿಕಾರಿ ಡಾ.ಶ್ರೀ ನಿವಾಸ್ ಉದ್ಘಾಟಿಸಿದರು. ಸುಜನ್, ರಮೇಶ್, ಶ್ರೀಕಾಂತ್, ಪೂರ್ಣಚಂದ್ರ ಇದ್ದರು.
Published on

ಶೃಂಗೇರಿ: ಸಮಾಜದ ಅಭಿವೃದ್ಧಿಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿದಾಗ ಸಮುದಾಯದ ಉನ್ನತಿ ಸಾಧ್ಯ. ನಾವು ಮಾಡುವ ಸೇವಾ ಕಾರ್ಯ ಬದ್ದತೆಯಿಂದ ಕೂಡಿದಾಗ ಮಾತ್ರ ಜನಮಾನಸದಲ್ಲಿ ಶಾಶ್ವತ ಸ್ಥಾನಗಳಿಸಬಹುದು ಎಂದು ಸಾರ್ವಜನಿಕ ಅಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.
ಶನಿವಾರ ಸಾರ್ವಜನಿಕ ಅಸ್ಪತ್ರೆಯಲ್ಲಿ ಜೆಸಿಐ ಏರ್ಪಡಿಸಿದ್ದ ಶಾಶ್ವತ್ ಜೆಸಿಐ ಸಪ್ತಾಹ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿತ್ವ ವಿಕಸನದ ತರಬೇತಿ ಮೂಲಕ ಯುವಶಕ್ತಿಯ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಅವರ ಸೃಜನಶೀಲತೆಗೆ ಸಂಸ್ಥೆ ನೀಡಿರುವ ಕೊಡುಗೆ ಅನನ್ಯ. ಅಂತಹ ವ್ಯಕ್ತಿಗಳು ಸಮಾಜದಲ್ಲಿ ಉತ್ತಮ ಕೆಲಸ ಮಾಡಿ ಯೋಗ್ಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು. ಇಂತಹ ಹಲವಾರು ಸೇವೆಗಳ ಮೂಲಕ ಸಂಸ್ಥೆ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ಜೆಸಿಐ ನಿಕಟಪೂರ್ವ ಅಧ್ಯಕ್ಷ ಬಾಲಗಂಗಾಧರ್ ಮಾತನಾಡಿ, ವ್ಯಕ್ತಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಜೆಸಿಐ ತನ್ನದೇ ಆದ ಅಸ್ತಿತ್ವ ಹೊಂದಿ ಬೆಳವಣಿಗೆ ಸಾಧಿಸಿದ ಸಂಸ್ಥೆ. ಯುವಕರು ಇಂತಹ ಸಂಸ್ಥೆಗಳನ್ನು ಸೇರುವುದರಿಂದ ಸಮಾಜದಲ್ಲಿ ಸುಸಂಸ್ಕೃತ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ ಎಂದರು.
ಅಸ್ಪತ್ರೆ ಶುಶ್ರೂಷಿಕಿಯರಾದ ರೇಷ್ಮಾ, ಚಾಂದಿನಿ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಕೆ.ಎ. ಸುಜನ್, ಕಾರ್ಯದರ್ಶಿ ಶ್ರೀಕಾಂತ್, ಸಪ್ತಾಹ ನಿರ್ದೇಶಕರಾದ ರಮೇಶ್ ಶೂನ್ಯ, ಪೂರ್ಣಚಂದ್ರ, ಪೂರ್ವಾಧ್ಯಕ್ಷ ಎನ್.ಸಿ.ಪಾಂಡುರಂಗ, ಉಳುವೆ ಗಿರೀಶ್, ಉದ್ಯಮಿ ಕೆ.ಎಸ್.ರಮೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net