ಹಾಡೋನಹಳ್ಳಿ ರಸ್ತೆ ಅಭಿವೃದ್ಧಿಪಡಿಸಿ: ಮನವಿ

dc manavi
ಹಾಡೋನಹಳ್ಳಿ ಗ್ರಾಮದ ರಸ್ತೆ ದುರಸ್ತಿಗೆ ಒತ್ತಾಯಿಸಿ ಸ್ಥಳೀಯರಾದ ಡಿ.ಸಿ.ಜಗದೀಶ್ವರ್, ಎಚ್.ಎಂ.ಮಧು, ಈಶ್ವರಪ್ಪ ಅವರು ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ತಾಲೂಕಿನ ಕೊನೆಯ ಭಾಗವಾಗಿರುವ ಹಾಡೋನಹಳ್ಳಿ ಗ್ರಾಮದ ಮುಖ್ಯ ರಸ್ತೆ ಗುಂಡಿಬಿದ್ದು ಸಂಪೂರ್ಣ ಹಾಳಾಗಿದೆ. ಕೂಡಲೇ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಹಾಡೋನಹಳ್ಳಿ ಗ್ರಾಮಕ್ಕೆ ಶಿವಮೊಗ್ಗ-ಹೊನ್ನಾಳಿ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ಸುಮಾರು ಎರಡೂವರೆ ಕಿಮೀ ಉದ್ದದ ರಸ್ತೆಯಲ್ಲಿ ಊರಿನ ವಾಹನಗಳು, ಸರ್ಕಾರಿ ಬಸ್‌ಗಳು ನಿತ್ಯ ಸಂಚರಿಸುತ್ತಿವೆ. ಶಾಲಾ ವಾಹನಗಳೂ ಇಲ್ಲಿಗೆ ಬರುತ್ತವೆ. ಈ ರಸ್ತೆ ಅತ್ಯಂತ ಕಿರಿದಾಗಿದ್ದು, ಮಗ್ಗುಲಲ್ಲೇ ವಿದ್ಯುತ್ ಕಂಬಗಳಿವೆ. ನ್ಯೂನತೆಗಳನ್ನು ಸರಿಪಡಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು.
ಗ್ರಾಮದ ಗಿರಿಜಾಬಾಯಿ ಅವರ ಮನೆ ಮುಂಭಾಗದಿಂದ ಆಲಕಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ರಸ್ತೆ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರಾದ ಡಿ.ಸಿ.ಜಗದೀಶ್ವರ್, ಈಶ್ವರಪ್ಪ, ಎಚ್.ಎಂ.ಮಧು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net