ರಂಗಭೂಮಿ ಉತ್ಸವ ಬೆಳೆಸಿ; ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ಕಪ್ಪಣ್ಣ-75 ಪ್ರಶಸ್ತಿ ಪ್ರದಾನ

1. ಹುಳಿಯಾರು ಸಮೀಪದ ಕೋಡಿಪಾಳ್ಯದ ಧ್ಯಾನನಗರಿಯ ಸಾಂಸ್ಕೃತಿಕ ಸದನದಲ್ಲಿ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ ದಂಪತಿಗಳನ್ನು ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಖ್ಯಾತ ಸಿನಿಮಾ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಬಿ.ಸುರೇಶ್, ದಾಮೋದರಶೆಟ್ಟಿ, ಶಾಂತರಂಗಸ್ವಾಮಿ, ಮಾತಾ ಟ್ರಸ್ಟ್ ನ ಗಂಗಾಧರ್, ಚಂದ್ರಕಲಾ, ಲಲಿತಾ ಶ್ರೀನಿವಾಸ್, ರಾಜಗುರು ಹೊಸಕೋಟೆ, ಸವಿತಾ ಗಣೇಶ್ ಪ್ರಸಾದ್, ಸಬ್ಬನಹಳ್ಳಿ ರಾಜು, ನಗಾರಿ ಮಂಜು, ಸುಧಾಕರ್, ಬಿ.ಎಸ್.ವಿದ್ಯಾರಣ್ಯ, ಅಪ್ಪಯ್ಯ, ಶಶಿಧರ್, ಸ್ನೇಹಾ ಕಪ್ಪಣ್ಣ, ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಇದ್ದರು.
1. ಹುಳಿಯಾರು ಸಮೀಪದ ಕೋಡಿಪಾಳ್ಯದ ಧ್ಯಾನನಗರಿಯ ಸಾಂಸ್ಕೃತಿಕ ಸದನದಲ್ಲಿ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ ದಂಪತಿಗಳನ್ನು ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಖ್ಯಾತ ಸಿನಿಮಾ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಬಿ.ಸುರೇಶ್, ದಾಮೋದರಶೆಟ್ಟಿ, ಶಾಂತರಂಗಸ್ವಾಮಿ, ಮಾತಾ ಟ್ರಸ್ಟ್ ನ ಗಂಗಾಧರ್, ಚಂದ್ರಕಲಾ, ಲಲಿತಾ ಶ್ರೀನಿವಾಸ್, ರಾಜಗುರು ಹೊಸಕೋಟೆ, ಸವಿತಾ ಗಣೇಶ್ ಪ್ರಸಾದ್, ಸಬ್ಬನಹಳ್ಳಿ ರಾಜು, ನಗಾರಿ ಮಂಜು, ಸುಧಾಕರ್, ಬಿ.ಎಸ್.ವಿದ್ಯಾರಣ್ಯ, ಅಪ್ಪಯ್ಯ, ಶಶಿಧರ್, ಸ್ನೇಹಾ ಕಪ್ಪಣ್ಣ, ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಇದ್ದರು.
Published on

ಹುಳಿಯಾರು: ಹಿರಿಯ ರಂಗಕರ್ಮಿ ಕಪ್ಪಣ್ಣ ಅವರ ಬಳಗ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಅಲ್ಲಿ ಹಲವು ಜಾತಿ, ಜನಾಂಗದ, ವಿವಿಧ ಕಲಾವಿದರಿದ್ದಾರೆೆ ಎಂದು ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ಹುಳಿಯಾರು ಸಮೀಪದ ಕೋಡಿಪಾಳ್ಯದ ಧ್ಯಾನನಗರಿಯ ಸಾಂಸ್ಕೃತಿಕ ಸದನದಲ್ಲಿ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ ಅವರ 75ನೇ ಜನ್ಮದಿನದ ಪ್ರಯುಕ್ತ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ಸೆಂಟರ್ ಸ್ಟೇಜ್ ಸಂಯುಕ್ತಾಶ್ರಯದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಕಪ್ಪಣ್ಣ-75 ಕಪ್ಪಣ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕಪ್ಪಣ್ಣ 75 ವರ್ಷವಾದರೂ ಆರೋಗ್ಯವಾಗಿದ್ದಾರೆ ಎಂದರೆ ಅದಕ್ಕೆ ಅವರು ರಂಗಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವುದೇ ಕಾರಣ. ಅವರು ತಮ್ಮ ಕೊನೆ ಉಸಿರಿರುವರೆಗೂ ಸದಾ ಚಟುವಟಿಕೆಯಿಂದ ಇರಬೇಕು. ನಶಿಸಿ ಹೋಗುತ್ತಿರುವ ರಂಗಭೂಮಿಯ ಉತ್ಸವವನ್ನು ಉಳಿಸಿ ಬೆಳಸಬೇಕು ಎಂದರು.

ಖಾಯಂ ಮುಖ್ಯಮಂತ್ರಿ ಎಂದೂ ತಪ್ಪು ಮಾಡುವುದಿಲ್ಲ. ಹಾಲಿ ಮುಖ್ಯಮಂತ್ರಿಗಳ ಮರ್ಯಾದೆ ಉಳಿಯಬೇಕು ಎಂದು ಸಭೆಯ ಅರ್ಧದಲ್ಲಿ ನಿರ್ಗಮಿಸುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿ ಸಭೆಯಿಂದ ನಿರ್ಗಮಿಸಿದರು.

ಬಿ.ಜಯಶ್ರೀ ಮಾತನಾಡಿ, ಕಪ್ಪಣ್ಣ ಅವರಿಗೆ ಭಾಷೆ-ಜಾತಿ-ದೇಶದ ಗಡಿಯಿಲ್ಲ. ಅವರಿಗೆ ಎಲ್ಲೆಡೆ ನಿಸ್ವಾರ್ಥ ಸ್ನೇಹ ಬಳಗವಿದೆ. ನಾವು ಅಮೆರಿಕಾಗೆ ಸಹಜವಾಗಿ ರೂಪಾಯಿ ಬದಲಿಗೆ ಡಾಲರ್ಸ್ ತೆಗೆದುಕೊಂಡು ಹೋಗಿದ್ದೆವು. ಆದರೆ ಅಮೆರಿಕ ಏರ್‌ಪೋರ್ಟ್‌ನಲ್ಲಿ ಚಹ ಕುಡಿಯಲು ಹೋದಾಗ ಡಾಲರ್ ಬದಲಿಗೆ ರೂಪಾಯಿ ಕೇಳಿದಾಗ ನಾವು ಪೇಚಿಗೆ ಸಿಲುಕಿದೆವು. ಅಷ್ಟರಲ್ಲಿ ದೂರವಾಣಿ ಕರೆ ಮಾಡಿದ್ದ ಕಪ್ಪಣ್ಣ ಅವರಿಗೆ ಸಮಸ್ಯೆ ವಿವರಿಸಿದೆವು. ಕರೆ ಕಟ್ಟಾಗಿ ಹತ್ತು ನಿಮಿಷದಲ್ಲಿ ನಾನಿದ್ದ ಸ್ಥಳಕ್ಕೆ ಟೀ ಜತೆಗೆ ಸ್ಯಾಂಡ್‌ವಿಚ್ ಪುಕ್ಕಟ್ಟೆಯಾಗಿ ಬಂದಿತ್ತು ಎಂದು ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದರು.

ನನಗೆ ಕನ್ನಡ ಕಲಿಯುವುದು ಬದುಕಿನ ಪ್ರಶ್ನೆಯಾಗಿತ್ತು. ಹಾಗಾಗಿ ಶಂಕರ್‌ನಾಗ್ ಮದುವೆಯಾದ ಬಳಿಕ ಕನ್ನಡ ಕಲಿತೆ. ನಾನು ದೇವರಿಗೆ ಪೂಜೆ ಮಾಡುವುದಿಲ್ಲ. ಬದಲಾಗಿ ಥೇಯೇಟರ್‌ಗೆ ಪೂಜೆ ಮಾಡುತ್ತೇನೆ. ಹಾಗಾಗಿ ರಂಗಭೂಮಿ ನನಗೆ ಸರ್ವಸ್ವವಾಗಿದೆ. | ಅರುಂಧತಿನಾಗ್. ರಂಗಶಂಕರ ಸಂಸ್ಥಾಪಕಿ ಪಂಚಾಕ್ಷರಿ ಗವಾಯಿಗಳ ಬೇಕಾದರೆ ಬೆರೆತು ನಡೆ, ಸಾಕಾದರೆ ಸರಿದು ನಡೆ, ಎರಡೂ ಬೇಡವಾದರೆ ಸುಮ್ಮನೆ ನಡೆ ಎಂಬ ನುಡಿಮುತ್ತು ಅಳವಡಿಸಿಕೊಂಡು ನಡೆಯುತ್ತಿದ್ದೇನೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧಿಸಲು ಪ್ರೇರಣೆ ನೀಡಿದೆ. ಶಾಲಾ-ಕಾಲೇಜುಗಳಲ್ಲಿ ವಾದ್ಯಗಳಿಗೆ ಚರ್ಮ ಕಟ್ಟುವ ಕಲೆಯನ್ನು ಕಲಿಸುವ ಹಾಗೂ ರಾಜ್ಯದಲ್ಲಿ 250 ಕಲಾ ಪ್ರಕಾರಗಳಿವೆ ಆದರೆ ಐವತ್ತು ಕಲೆಗಳು ಮಾತ್ರ ಕಾಣಸಿಗುತ್ತಿದ್ದು, ಉಳಿದ ಕಲೆಗಳನ್ನು ಹೆಕ್ಕಿ ತೆಗೆಯುವ ಉತ್ಸಾಹ ತನ್ನಲ್ಲಿದೆ. | ಹಿದಾಯತ್ ಅಹಮದ್. ಯುವ ಪ್ರಶಸ್ತಿ ಪುರಸ್ಕೃತ

ಸಾಧಕರಿಗೆ ಕಪ್ಪಣ್ಣ ಪ್ರಶಸ್ತಿ: ಇದೇ ಮೊದಲ ಬಾರಿಗೆ ಕಪ್ಪಣ್ಣ ಹೆಸರಿನಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಅರುಂಧತಿನಾಗ್ ಅವರಿಗೆ ಜೀವಮಾನ ಸಾಧನೆಗಾಗಿ 50 ಸಾವಿರ ರೂ. ನಗದು ಹಾಗೂ ಹಿದಾಯತ್ ಅಹಮದ್ ಅವರಿಗೆ ಯುವ ಪ್ರಶಸ್ತಿಯಾಗಿ 25 ಸಾವಿರ ರೂ.ನೀಡಲಾಯಿತು.

2.ಹುಳಿಯಾರಿನಲ್ಲಿ ಕಪ್ಪಣ್ಣ ಯುವ ಪ್ರಶಸ್ತಿ ಸ್ವೀಕರಿಸಿದ ಹಿದಾಯತ್ ಅಹಮದ್.

ಹುಳಿಯಾರಿನಲ್ಲಿ ಕಪ್ಪಣ್ಣ ಪ್ರಶಸ್ತಿ ಸ್ವೀಕರಿಸಿದ ಅರುಂಧತಿನಾಗ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net