ಮೋದಿ-ದೇವೇಗೌಡ ಭೇಟಿ; ನಾನು ಮತ್ತೆ ಹೋರಾಟ ಮಾಡೋ ಹಾಗೆ ಮಾಡಬೇಡಿ ಎಂದು ಮೋದಿಗೆ ಹೇಳಿದ ಗೌಡರು!

modi devegowda
Published on

ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೀರಾವರಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡ, ಕಾವೇರಿ, ಕೃಷ್ಣ, ಮಹದಾಯಿ ವಿಚಾರವಾಗಿ ಪ್ರಧಾನಿ ಮೋದಿ ಅವರಿಗೆ ವಿವರವಾದ ಪತ್ರ ಬರೆದಿದ್ದೇನೆ. ಇಂದು ಬೆಳಗ್ಗೆ ಮೋದಿ ಅವರನ್ನು ಭೇಟಿ ಮಾಡಿ ಈ ವಿಷಯಗಳ ಬಗ್ಗೆಯೇ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ನೀರಾವರಿ ವಿಷಯದಲ್ಲಿ ನಮ್ಮವರೇ ನನಗೆ ವಿರೋಧ ಮಾಡ್ತಾ ಇದ್ದಾರೆ ಅಂತ ಮೋದಿಯವರೇ ನನ್ನ ಬಳಿ ಹೇಳಿಕೊಂಡರು. ಆದರೆ ನಾನು ಅದಕ್ಕೆ ಪ್ರತಿಯಾಗಿ, ನೀರಾವರಿ ವಿಷಯದಲ್ಲಿ ನಾನು ಮತ್ತೆ ಹೋರಾಟ ಮಾಡೋ ತರಹ ಮಾಡಬೇಡಿ ಅಂತ ಹೇಳಿದೆ. ಈ ವಯಸ್ಸಲ್ಲೂ ನಾನು ಹೋರಾಟ ಮಾಡಲು ಸಿದ್ಧನಿರುವುದಾಗಿ ಮೋದಿಗೆ ತಿಳಿಸಿದ್ದೇನೆ ಎಂದು ದೇವೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net