ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು: ನಾಲ್ವರ ಸಾವು

acident photo jan 12 2020
Published on

ರಾಮನಗರ: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ದೇವಮಾಚೋಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ಸುನೀಲ್, ಸಂತೋಷ್, ಮಂಜು ಹಾಗೂ ರಘು ಮೃತರು. ಮೃತರು ಸುಬ್ರಮಣ್ಯನಗರ, ಕೆಪಿ ಅಗ್ರಹಾರ ಹಾಗೂ ಚೋಳೂರು ಪಾಳ್ಯದವರು ಎಂದು ಪತ್ತೆಯಾಗಿದೆ.

ನಾಲ್ವರು ಕಾರಿನಲ್ಲಿ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದರು. ಕಾರು ವೇಗವಾಗಿ ದೇವ ಮಾಚೋಹಳ್ಳಿ ತಿರುವಿನಲ್ಲಿ ಚಲಿಸುತ್ತಿತ್ತು. ಈ ವೇಳೆ ನಾಯಿ ಅಡ್ಡ ಬಂತು. ಚಾಲಕ ನಾಯಿ ತಪ್ಪಿಸಲು ಕಾರನ್ನು ಎಡಕ್ಕೆ ಎಳೆದಾಗ ನಿಯಂತ್ರಣ ತಪ್ಪಿ ಕಲ್ಲುಕಂಬಕ್ಕೆ ಡಿಕ್ಕಿ ಹೊಡೆದು ನಂತರ  ಕೆರೆಗೆ ಉರುಳಿ ಬಿತ್ತು. 

ಮೃತರ ಶವಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತಾವರೆಕೆರೆ ಪೊಲೀಸರು ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net