ಜಾಗೃತ ಸಮಾಜ ನಿರ್ಮಾಣ ಅಗತ್ಯ, ನ್ಯಾಯಾಧೀಶ ಬಿ.ಕೆ.ನಾಗೇಶಮೂರ್ತಿ ಅಭಿಮತ

011222 Devadurga World AIDS Day
ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನದ ಜಾಗೃತಿ ಜಾಥಾಕ್ಕೆ ಸಿವಿಲ್ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ ಗುರುವಾರ ಚಾಲನೆ ನೀಡಿದರು.
Published on

ದೇವದುರ್ಗ: ಆರೋಗ್ಯವೇ ಮನುಷ್ಯನ ಸಂಪತ್ತು ಎನ್ನುವ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಬೇಕಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ಬಿ.ಕೆ.ನಾಗೇಶಮೂರ್ತಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಜಾಗತಿಕ ತಾಪಮಾನ ವೈಪರೀತ್ಯ ಹಾಗೂ ಅಜಾಗರೂಕತೆಯಿಂದ ನಾನಾ ರೋಗಗಳು ಹರಡುತ್ತಿವೆ. ಉತ್ತಮ ಆರೋಗ್ಯದೊಂದಿಗೆ ಜಾಗೃತ ಸಮಾಜ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಮಾತನಾಡಿ, ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದ ರಕ್ತ ಪಡೆಯುವುದು, ಅಜಾಗರೂರಕತೆಯಿಂದ ಚುಚ್ಚುಮದ್ದು ಬಳಸುವುದರಿಂದ ಏಡ್ಸ್ ಹರಡಲಿದೆ. ಜನರಲ್ಲಿ ಜಾಗೃತಿ ಮೂಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಜನರು ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಜಾಗ್ರತೆ ವಹಿಸಿದರೆ ಎಂಥ ಕಾಯಿಲೆಯನ್ನಾದರೂ ನಿವಾರಣೆ ಮಾಡಬಹುದು. ಚಿಕಿತ್ಸೆಯಷ್ಟೇ ಆರೋಗ್ಯದ ಜಾಗೃತಿಯೂ ಮಹತ್ವವಾಗಿದೆ. ಎಚ್‌ಐವಿ ನಿರ್ಮೂಲನೆಗೆ ಸರ್ಕಾರ ವಿವಿಧ ಕ್ರಮಕೈಗೊಂಡಿದ್ದು, ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯೊಂದಿಗೆ ಧನಶ್ರೀ, ಸತಿ ಹಾಗೂ ಮೈತ್ರಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಸಿವಿಲ್ ನ್ಯಾಯಾಧೀಶ ಬಾಳಸಾಹೇಬ್ ವಡವಡೆ, ಡಾ.ಶಿವಾನಂದ, ಡಾ.ನಾಗರಾಜ, ನಿರ್ಮಲಾ, ಆಪ್ತ ಸಮಾಲೋಚಕ ನಾಗಲಿಂಗ, ಕ್ಷಯ ರೋಗ ಮೇಲ್ವಿಚಾರಕ ರವಿ ಶುಕ್ಲ, ಶಿವಪ್ಪ ಭೂಮನಗುಂಡ, ನಂದಕುಮಾರ, ಚನ್ನಬಸಯ್ಯ ಹಿರೇಮಠ, ಹುಸೇನ್ ಅಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net