ಕೋಳಿಗಳಿಂದ H3N8 ವೈರಸ್ ಪತ್ತೆ; ಸೋಂಕಿನ ಲಕ್ಷಣಗಳೇನು..?

H3N8
Published on

ಚೀನಾ: ಕರೊನಾ ನಂತರ ಅನೇಕ ವೈರಸ್​​ಗಳು ಮಾನವನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತಿದೆ. ಇನ್ನೊಂದು ವೈರಸ್​ ಪತ್ತೆಯಾಗಿದೆ. H3N8 ಎಂಬ ವೈರಸ್ ಹಕ್ಕಿ ಜ್ವರದಿಂದ ಉಂಟಾದ ಮಾರಣಾಂತಿ ವೈರಸ್​​ ಎಂದು ಹೇಳಲಾಗಿದೆ. ಈ ಸೋಂಕಿನಿಂದ ಸಾವು-ನೋವು ಕೂಡಾ ಸಂಭವಿಸಿದೆ.

H3N8 ವೈರಸ್ ಎಂದರೇನು? ಈ ಸೋಂಕು ಹೇಗೆ ಹರಡುತ್ತದೆ?.. ಈ ಸೋಂಕಿನ ಕುರಿತಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು..? ಎನ್ನುವ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ಕೆಲವು ತಡೆಗಟ್ಟುವ ಸಲಹೆಗಳನ್ನು ನೀಡಿದೆ. ಕಿನ ನಿಖರವಾದ ಮೂಲ ಯಾವುದು ಮತ್ತು ಈ ವೈರಸ್ ಪ್ರಾಣಿಗಳಲ್ಲಿ ಪರಿಚಲನೆಗೊಳ್ಳುವ ಇತರ ಏವಿಯನ್ ಇನ್ಫ್ಲುಯೆನ್ಸ A (H3N8) ವೈರಸ್‌ಗಳಿಗೆ ಹೇಗೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾರ್ವಜನಿಕ ಆರೋಗ್ಯಕ್ಕೆ ಪ್ರಸ್ತುತ ಅಪಾಯವಿದೆ ಎಂದು ಹೇಳಲಾಗಿದೆ.

H3N8 ವೈರಸ್ ಎಂದರೇನು?: ಇದು ಏವಿಯನ್ ಇನ್ಫ್ಲುಯೆನ್ಸದ ಉಪತಳಿಯಾಗಿದೆ. ಈ ವೈರಸ್​​ ಮೊದಲು 1960ರ ಸುಮಾರಿಗೆ ಕಾಡು ಪಕ್ಷಿಗಳಲ್ಲಿ ಕಂಡುಹಿಡಿಯಲಾಯಿತು. ಇದು ನಂತರ ಇತರ ಪಕ್ಷಿಗಳಲ್ಲಿ ಕಂಡುಬಂದಿತು. 2022ರಲ್ಲಿ ಇದು ಮತ್ತೆ ಕಾಣಿಸಿಕೊಂಡಿತು. ಈ ವೈರಸ್ ಕ್ರಮೇಣ ಕುದುರೆಗಳು ನಾಯಿಗಳಿಗೂ ಹರಡಲು ಶುರುವಾಗಿದೆ.

H3N8 ಹಕ್ಕಿ ಜ್ವರ ಪ್ರಕರಣಗಳು ಸತ್ತ ಕೋಳಿ ಮತ್ತು ಕಲುಷಿತ ಪರಿಸರದಿಂದ ಉಂಟಾಗಿದೆ ಎಂದು ವರದಿಯಾಗಿದೆ. WHO ಪ್ರಕಾರ ಏವಿಯನ್ ಇನ್ಫ್ಲುಯೆನ್ಸ ವೈರಸ್‌ಗಳೊಂದಿಗಿನ ಮಾನವ ಸೋಂಕಿನ ಪ್ರಕರಣಗಳು ಸಾಮಾನ್ಯವಾಗಿ ಸೋಂಕಿತ ಜೀವಂತ ಅಥವಾ ಸತ್ತ ಕೋಳಿ, ಕಲುಷಿತ ಪರಿಸರದಿಂದ ನೇರ ಅಥವಾ ಪರೋಕ್ಷವಾಗಿ ಹರಡುತ್ತದೆ ಎಂದು ಹೇಳಲಾಗಿದೆ.

H3N8 ವೈರಸ್ ಲಕ್ಷಣ: ವೈರಸ್​​ಗೆ ಸಂಬಂಧಿಸಿದ ಅಂಶಗಳ ಆಧಾರದ ಮೇಲೆ, ರೋಗವು ಸೌಮ್ಯವಾದ ಜ್ವರ ತರಹದ ರೋಗಲಕ್ಷಣಗಳಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಸಾವುವನ್ನು ಉಂಟು ಮಾಡಬಹುದು. WHO ಮಾನವರಲ್ಲಿ ಝೂನೋಟಿಕ್ ಇನ್ಫ್ಲುಯೆನ್ಸ ಸೋಂಕುಗಳು ಲಕ್ಷಣರಹಿತವಾಗಿರಬಹುದು ಅಥವಾ ರೋಗವನ್ನು ಉಂಟು ಮಾಡದೇ ಇರಬಹುದು.

ಜಾಗೃತಿ ಕ್ರಮಗಳು: ತಮ್ಮ ತಮ್ಮ ದೇಶಗಳಲ್ಲಿ ಜನಜಾಗೃತಿ ಹೆಚ್ಚಿಸಬೇಕು. ಮಾಸ್ಕ್​ ಧರಿಸಿ.ಕೋಳಿ ಅಥವಾ ಪಕ್ಷಿಗಳ ಮಲದಿಂದ ಕಲುಷಿತಗೊಳ್ಳುವ ಪ್ರದೇಶಗಳಲ್ಲಿ ಓಡಾಟ ತಪ್ಪಿಸಿ. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಬೇಕು ಮತ್ತು ಉತ್ತಮ ಆಹಾರ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸಬೇಕು. ಆಗಾಗ್ಗೆ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿ. ನಿಮ್ಮ ಸುತ್ತಮುತ್ತಲು ಸ್ವಚ್ಚತೆ ಕಾಪಾಡಿಕೊಳ್ಳಿ.

H3N8 ವೈರಸ್‌ಗೆ ಲಸಿಕೆ ಇದೆಯೇ?: ಈ ವೈರಸ್​ಗಳ ವಿರುದ್ಧ ಲಸಿಕೆ ಇದ್ದರೂ, H3N8 ಇನ್ಫ್ಲುಯೆನ್ಸ A ವೈರಸ್ಗೆ ಒಂದು ಲಭ್ಯವಿಲ್ಲ ಅಥವಾ ವರದಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net