ಅವೈಜ್ಞಾನಿಕ ಸೈಲೆನ್ಸರ್ ಪೈಪ್‌ಗಳ ನಾಶ

HUN-JAN-31-4(SCILENCER PIPES SCRAPPED)
Published on

ಹುಣಸೂರು: ದ್ವಿಚಕ್ರ ವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಶ ದನಿಯ 40ಕ್ಕೂ ಹೆಚ್ಚು ಅವೈಜ್ಞಾನಿಕ ಸೈಲೆನ್ಸರ್ ಪೈಪ್‌ಗಳನ್ನು ಗುರುವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಶಪಡಿಸಲಾಯಿತು.

ಕರ್ಕಶ ದನಿ ಮೂಲಕ ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದು ಸೈಲೆನ್ಸರ್‌ಗಳನ್ನು ಕಿತ್ತು ಹಾಕಿ ಬೈಕ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಸಂಗ್ರಹಗೊಂಡಿದ್ದ ಸೈಲೆನ್ಸರ್‌ಗಳನ್ನು ಜೆಸಿಬಿ ಬಳಸಿ ನಾಶಪಡಿಸಲಾಗಿದೆ ಎಂದು ಪಿಎಸ್‌ಐ ಮಹೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net